ಶಿವಮೊಗ್ಗ: ಕ್ಷೇತ್ರಕ್ಕಾಗಿ ಅಲೆಮಾರಿಯಂತೆ ಹುಡುಕಾಡುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ರಾಜಕೀಯ ನಿವೃತ್ತಿ (Political Retirement) ಪಡೆದುಕೊಳ್ಳೋದು ಒಳ್ಳೆಯದು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿಂದು (Shivamogga) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಚುನಾವಣೆಯಲ್ಲಿ (Election 2023) ಸ್ಪರ್ಧಿಸಲು ಕ್ಷೇತ್ರಕ್ಕಾಗಿ ಹುಡುಕಾಡುತ್ತಾ ಅಲೆಮಾರಿಯಾಗಿಬಿಟ್ಟಿದ್ದಾರೆ. ಎಲ್ಲಿಂದ ಸ್ಪರ್ಧೆ ಮಾಡ್ತೀಯಾ ಅನ್ನೋದಾದ್ರೂ ಹೇಳು ಎಲ್ಲರೂ ಕಾಯ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇಸ್ಲಾಂಗೆ ಮತಾಂತರವಾಗಲು ನಿರಾಕರಿಸಿದ್ದಕ್ಕೆ ಗೆಳತಿಯನ್ನು 4ನೇ ಮಹಡಿಯಿಂದ ಎಸೆದು ಹತೈಗೈದ
Advertisement
Advertisement
ಸಿದ್ದರಾಮಯ್ಯಗೆ ಚುನಾವಣೆಯಲ್ಲಿ (Election) ಗೆಲ್ಲುತ್ತೀನಾ, ಇಲ್ವಾ ಅನ್ನೋ ಭಯದಿಂದ ಎರಡೆರಡು ಕಡೆ ಸಮೀಕ್ಷೆ ಮಾಡಿಸಿದ್ದಾರೆ. ಈ ಭಯ, ಗೊಂದಲ ಇದ್ರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ವಾಸ ಮಾಡುವ ಪ್ರತಿಯೊಬ್ಬರು ಹಿಂದೂಗಳೇ: ಮೋಹನ್ ಭಾಗವತ್
Advertisement
Advertisement
ಇನ್ನೂ ಕಾಂಗ್ರೆಸ್ (Congress) ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿದೆ. ಈಗಾಗಿಯೇ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಮಾಡಿದ್ದಾರೆ. ಏಕೆ ನಿಮಗೆ ಒಳ್ಳೆಯ ಅಭ್ಯರ್ಥಿ ಸಿಗುತ್ತಿಲ್ವಾ ಅಥವಾ ಹಣ ಸಂಗ್ರಹ ಮಾಡಿಕೊಳ್ಳೊ ಉದ್ದೇಶವಾ? ಕಾಂಗ್ರೆಸ್ ಟಿಕೇಟ್‌ಗೆ ಸಿದ್ದರಾಮಯ್ಯ ಅವರೇ ಅರ್ಜಿ ಹಾಕಿಲ್ಲ. ಕೆಪಿಸಿಸಿ (KPCC) ಅಧ್ಯಕ್ಷ ಡಿಕೆಶಿ (DK Shivakumar) ಅವರ ಆದೇಶವನ್ನು ಸಿದ್ದರಾಮಯ್ಯ ಅವರೇ ಪಾಲಿಸುತ್ತಿಲ್ಲ ಎಂದು ಕುಟುಕಿದ್ದಾರೆ.