Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿದ್ದರಾಮಯ್ಯ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು: ಹೆಚ್.ವಿಶ್ವನಾಥ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸಿದ್ದರಾಮಯ್ಯ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು: ಹೆಚ್.ವಿಶ್ವನಾಥ್

Bengaluru City

ಸಿದ್ದರಾಮಯ್ಯ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು: ಹೆಚ್.ವಿಶ್ವನಾಥ್

Public TV
Last updated: November 25, 2025 3:42 pm
Public TV
Share
2 Min Read
H Vishwanath
SHARE

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಡಿಕೆ ಶಿವಕುಮಾರ್‌ಗೆ (DK Shivakumar) ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಮಾಜಿ ಸಚಿವ, ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ (H Vishwanath) ಆಗ್ರಹ ಮಾಡಿದ್ದಾರೆ.

ಕಾಂಗ್ರೆಸ್‌ನ (Congress) ಕುರ್ಚಿ ಗಲಾಟೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ಗೆ ರಾಜ್ಯದ ಆಡಳಿತ ಹಸ್ತಾಂತರ ಮಾಡಬೇಕು. 136 ಸೀಟು ಬರಲು, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿಕೆಶಿ ಅವರ ಶ್ರಮ ಎಲ್ಲಾ ರೀತಿಯಲ್ಲೂ ಇದೆ. ಒಕ್ಕಲಿಗ ಸಮುದಾಯದ ವೋಟ್ ಕೂಡ ಕಾಂಗ್ರೆಸ್‌ಗೆ ಬಂದಿದೆ. ಕೆ.ಆರ್ ನಗರ ತಾಲೂಕಿನಲ್ಲಿ ಕಾಂಗ್ರೆಸ್‌ಗೆ ಒಕ್ಕಲಿಗ ಸಮಾಜದಿಂದ 4-5 ವೋಟ್ ಬರುತ್ತಿತ್ತು. ಈ ಬಾರಿ 15 ಸಾವಿರ ವೋಟ್ ಬಂದಿದೆ ಇದಕ್ಕೆ ಕಾರಣ ನಮ್ಮ ಸಮಾಜದ ಡಿಕೆಶಿ. ಸಿಎಂ ಸ್ಥಾನ ಸಿಗಲಿ, ಸಿಗುತ್ತೆ ಅಂತ ಒಕ್ಕಲಿಗರು ವೋಟ್ ಹಾಕಿದ್ದಾರೆ. ಇವರೆಲ್ಲಾ ಸೇರಿಕೊಂಡಿದ್ದರಿಂದ 136 ಸ್ಥಾನ ಬರಲು ಕಾರಣವಾಯಿತು ಎಂದರು. ಇದನ್ನೂ ಓದಿ: ಶಾಸಕರು ದೆಹಲಿಗೆ ಹೋಗಿ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ: ಸಿಎಂ

Siddaramaiah DK Shivakumar

ಡಿಕೆ ಶಿವಕುಮಾರ್ ಕೂಡ ನಾಡಿನ ಆಡಳಿತದಲ್ಲಿ ಭಾಗಿಯಾಗಬೇಕು. ಡಿಕೆ ಶಿವಕುಮಾರ್ ನಾನೊಬ್ಬನೇ ಕಾಂಗ್ರೆಸ್‌ಗೆ ಅಧಿಕಾರ ಬರಲು ಕಾರಣ ಅಂತ ಎಲ್ಲೂ ಹೇಳಿಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕಾದ್ರೆ ಎಲ್ಲಾ ಜಾತಿ, ಜನಾಂಗ, ಧರ್ಮ, ಭಾಷಿಕರು ವೋಟ್ ಕೊಡಬೇಕು. ಬರೀ ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಲೀಡರ್‌ನಿಂದ ಮಾತ್ರ ಅಧಿಕಾರಕ್ಕೆ ಬರೋದಕ್ಕೆ ಆಗಲ್ಲ. ಕೆಲವರು ಯಾವ ಪಕ್ಷದಲ್ಲಿ ಇರಲ್ಲ. ವೋಟ್ ಮಾಡಲ್ವಾ? ನಾಡಿನ ವಿಜಯ, ರಾಜ್ಯದ ವಿಜಯ 136 ಸೀಟು ಬಂತು. ಸಿದ್ದರಾಮಯ್ಯ ಒಬ್ಬರಿಂದ 136 ಸೀಟು ಬಂತಾ ಹಾಗಾದ್ರೆ ಎಂದು ಸಿದ್ದು ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: 2047ರಲ್ಲಿ ವಿಕಸಿತ ಭಾರತ ನಿರ್ಮಾಣಕ್ಕೆ ರಾಮನ ಗುಣ ಮೈಗೂಡಿಸಿಕೊಳ್ಳಬೇಕು: ಮೋದಿ

ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ಎಂದು ಮಾಜಿ ಸಚಿವ ರಾಜಣ್ಣ ಸೇರಿ ಹಲವರು ಹೇಳುತ್ತಾರೆ. ಸಿದ್ದರಾಮಯ್ಯಗೆ ಕಾಂಗ್ರೆಸ್ ಅನಿವಾರ್ಯ, ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ಅಲ್ಲ. ಸಿದ್ದರಾಮಯ್ಯ ಬರೋ ಮುಂಚೆ ಕಾಂಗ್ರೆಸ್ ಸರ್ಕಾರಗಳು ಇರಲಿಲ್ಲವಾ? ಸಿದ್ದರಾಮಯ್ಯರನ್ನ ದೇವೇಗೌಡರು ಹೊರಗೆ ಹಾಕಿದಾಗ ನಾವೇ ಕಾಂಗ್ರೆಸ್ ಒಳಗೆ ಕರೆದುಕೊಂಡು ಬಂದಿದ್ದು. ಇವರ ಆಟ ನೋಡಿದ್ರೆ ಕಾಂಗ್ರೆಸ್ ಅನ್ನ ಬಾಗಿಲು ಹಾಕಿಸೋ ರೀತಿ ಇದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದತ್ತಪೀಠ ಹಿಂದೂಗಳದ್ದು, ಮೈಸೂರು ಅರಸರು ಸಾವಿರಾರು ಎಕರೆ ದಾನ ನೀಡಿದ ದಾಖಲೆಗಳಿವೆ: ವಿಹೆಚ್‌ಪಿ

ಕಾಂಗ್ರೆಸ್‌ನಲ್ಲೇ ಕುದುರೇ ವ್ಯಾಪಾರ ನಡೆಯುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವೆಲ್ಲವೂ ಸುಮ್ಮನೆ ಅಷ್ಟೆ. ನಾನು ಬಿಜೆಪಿಯಲ್ಲಿ ಇದ್ದೇನೆ. ಬಿಜೆಪಿ ಅವರು ಯಾವ ಯಾವ ತರಹ ಆಟ ಆಡಿಲ್ಲವಾ? ಜೆಡಿಎಸ್ ಅವರು ಯಾವ ಯಾವ ತರಹ ಆಟ ಆಡಿಲ್ಲವಾ? ಒಂದೇ ಪಾರ್ಟಿನಾ? ಅಧಿಕಾರಕ್ಕೆ ಬರಬೇಕಾದ್ರೆ ಅನೇಕ ದಾರಿಗಳನ್ನ ಹುಡುಕುತ್ತಾರೆ. ಅದರಲ್ಲಿ ವಿಶೇಷ ಏನು ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ದಾವಣಗೆರೆ | ನಾಪತ್ತೆಯಾಗಿದ್ದ ಯುವಕರ ಶವ ಕೆರೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆ

ಡಿಕೆಶಿಗೆ ರಾಹುಲ್ ಗಾಂಧಿ ಸಮಯ ಕೊಡುತ್ತಿಲ್ಲ ಎಂಬ ವಿಚಾರಕ್ಕೆ, ಕಾಂಗ್ರೆಸ್ ಪಕ್ಷದ ವಿಚಾರಕ್ಕೆ ಯಾಕೆ ರಾಹುಲ್ ಗಾಂಧಿ ಸಮಯ ಕೊಡ್ತಿಲ್ಲ ಅಂತ ಅವರನ್ನು ಕೇಳಿ ಎಂದರು. ಇದನ್ನೂ ಓದಿ: ನೀವ್ ನೀವೆ ಅಗ್ರಿಮೆಂಟ್ ಮಾಡಿಕೊಂಡರೆ ಇದೇನು ಕಾಂಟ್ರಾಕ್ಟಾ?- ಕುರ್ಚಿ ಕದನದಲ್ಲಿ ಸಿಎಂ ಪರ ರಾಯರೆಡ್ಡಿ ಬ್ಯಾಟಿಂಗ್

TAGGED:bengalurucongressDK Shivakumarh vishwanathsiddaramaiahಕಾಂಗ್ರೆಸ್ಡಿಕೆ ಶಿವಕುಮಾರ್ಬೆಂಗಳೂರುಸಿದ್ದರಾಮಯ್ಯಹೆಚ್.ವಿಶ್ವನಾಥ್
Share This Article
Facebook Whatsapp Whatsapp Telegram

Cinema news

chandanavana film critics academy awards
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ – ಅತಿ ಹೆಚ್ಚು ನಾಮನಿರ್ದೇಶಿತರು ಯಾರು?
Cinema Latest Sandalwood Top Stories
Aamir Khan birthday
ಗರ್ಲ್‌ಫ್ರೆಂಡ್‌, ಮಾಜಿ ಪತ್ನಿಯರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್‌ ಖಾನ್‌
Bollywood Cinema Latest Top Stories
vijay thalapathy
ಕರೂರ್‌ ಕಾಲ್ತುಳಿತ ಕೇಸ್‌ – CBI ಮುಂದೆ ವಿಚಾರಣೆಗೆ ಹಾಜರಾದ ವಿಜಯ್‌
Cinema Latest Main Post South cinema
Anushka Shetty
ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ – ಬೆಂಗಳೂರು ಮೂಲದ ಉದ್ಯಮಿ ಜೊತೆ ಮದ್ವೆ?
Cinema Latest South cinema

You Might Also Like

election evm vote
Latest

ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ

Public TV
By Public TV
5 minutes ago
rajya sabha election bjp attempts to operation kamalaa two odisha people detained
Districts

ಬಿಡದಿ ರೆಸಾರ್ಟ್‌ನಲ್ಲಿ ಒಡಿಶಾ ಕಾಂಗ್ರೆಸ್‌ ಶಾಸಕರ ಆಪರೇಷನ್‌ಗೆ ಬಿಜೆಪಿ ಯತ್ನ – ಚೆಕ್‌ ಸಮೇತ ಇಬ್ಬರು ವಶ

Public TV
By Public TV
28 minutes ago
channarayapatna bcm hostel manager commits suicide
Crime

ಚನ್ನರಾಯಪಟ್ಟಣ | ಬಿಸಿಎಂ ಹಾಸ್ಟೆಲ್ ಮ್ಯಾನೇಜರ್ ನೇಣಿಗೆ ಶರಣು – ಕಾರಣ ನಿಗೂಢ

Public TV
By Public TV
29 minutes ago
Ramesha Bandisiddegowda
Districts

ಶ್ರೀಗಳಿಗೆ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ – ರಮೇಶ್ ಬಂಡಿಸಿದ್ದೇಗೌಡ

Public TV
By Public TV
58 minutes ago
Ramesha Bandisiddegowda
Karnataka

ಶ್ರೀಗಳ ಹೆಜ್ಜೆ ಎಲ್ಲೆಲ್ಲೋ ದಾರಿ ತಪ್ಪುತ್ತಿದೆ: ನಿರ್ಮಲಾನಂದನಾಥ ಸ್ವಾಮೀಜಿ ಬಗ್ಗೆ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ

Public TV
By Public TV
1 hour ago
Nuclear Capable Rocket Kim Jong Un
Latest

ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ ಪರೀಕ್ಷಿಸಿದ ಉತ್ತರ ಕೊರಿಯಾ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?