ಬೆಂಗಳೂರು: ಜೂನ್ 10ರ ಒಳಗೆ ಒಳಮೀಸಲಾತಿ (Internal Reservation) ಘೋಷಣೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿ ಮೇ 5ರಿಂದ ಒಳಮೀಸಲಾತಿ ಗಣತಿ ಪ್ರಾರಂಭ ಮಾಡಬೇಕು ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ (Govinda Karajola) ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಒಳಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿ 9 ತಿಂಗಳು ಕಳೆದರೂ ರಾಜ್ಯ ಸರ್ಕಾರ ಒಳಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಸಿದ್ದರಾಮಯ್ಯ ಒಳಮೀಸಲಾತಿ ಕೊಡದೇ ಕುಂಟು ನೆಪ ಹೇಳುತ್ತಿದ್ದಾರೆ. ಈಗ ನಾಗಮೋಹನ್ ದಾಸ್ ಅವರಿಂದ ಗಣತಿ ಮಾಡಿಸೋದಾಗಿ ಹೇಳುತ್ತಿದೆ. ಸರ್ಕಾರದ ಬಳಿಕ ಕಾಂತರಾಜು ವರದಿ ಅಂಕಿಅಂಶಗಳು ಇವೆ. ಅದರ ಆಧಾರದಲ್ಲಿ ಒಳಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಲವರ್ ಜೊತೆ ಪೋಷಕರಿಗೆ ಸಿಕ್ಕಿಬಿದ್ದ ಯುವಕ – ಪಬ್ಲಿಕ್‌ನಲ್ಲೇ ಜೋಡಿಗೆ ಬಿತ್ತು ಗೂಸಾ
ಇಲ್ಲದೆ ಹೋದರೆ ನಾಗಮೋಹನ್ ದಾಸ್ ಆಯೋಗ ಮೇ 5ರಿಂದ ಒಳಮೀಸಲಾತಿ ಗಣತಿ ಪ್ರಾರಂಭ ಮಾಡುತ್ತಿದೆ. ಇದಕ್ಕೂ ಮೊದಲೇ ಸಿದ್ದರಾಮಯ್ಯ ಜೂನ್10ರ ಒಳಗೆ ಮೀಸಲಾತಿ ಕೊಡುತ್ತೇವೆ ಎಂಬ ಭರವಸೆ ಕೊಟ್ಟು ಗಣತಿ ಶುರು ಮಾಡಿಸಬೇಕು ಎಂದರು. ಇದನ್ನೂ ಓದಿ: ಎಲ್ಲಾ ಹಿಂದೂಗಳನ್ನು ಸಾಲಾಗಿ ನಿಲ್ಲುವಂತೆ ಹೇಳಿದ್ರು: ಪಹಲ್ಗಾಮ್ ಭೀಕರತೆ ಬಿಚ್ಚಿಟ್ಟ ಸುಬೋಧ್
ಸಚಿವ ಮಹದೇವಪ್ಪ ಬೆಳಗಾವಿ ಅಧಿವೇಶನ ಸಮಯದಲ್ಲಿ ಪ್ರತಿಭಟನೆ ಜಾಗದಲ್ಲಿ ಬಂದು 3 ತಿಂಗಳ ಒಳಗೆ ಒಳಮೀಸಲಾತಿ ಕೊಡಿಸುತ್ತೇವೆ. ಇಲ್ಲದೇ ಹೋದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಈಗ ಮೊದಲು ಒಳಮೀಸಲಾತಿ ಕೊಡಿಸಲಿ. ಜೊತೆಗೆ ಸಮುದಾಯದ 6 ಮಂತ್ರಿಗಳು ಒಳಮೀಸಲಾತಿ ಕೊಡಿಸಬೇಕು. ಸಿಎಂ ಮೀಸಲಾತಿ ಕೊಡಿಸದೇ ಹೋದರೆ ನೀವು ಈ ಸಮಾಜಕ್ಕೆ ದ್ರೋಹ ಮಾಡಿದ ಹಾಗೆ ಆಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಹರ್ಷಿಕಾ ಪೂಣಚ್ಚ ಮಗಳ ಹೆಸರು ರಿವೀಲ್ – ದೇವಿ ಹೆಸರಿಟ್ಟ ದಂಪತಿ
ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಒಳಮೀಸಲಾತಿ ಚರ್ಚೆಗೆ ಸರ್ಕಾರ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಅಶ್ರಫ್ ಹತ್ಯೆ ವಿಚಾರ ಪ್ರಸ್ತಾಪಿಸಿ ಸಚಿವರಿಗೆ ಮುಸ್ಲಿಂ ಮುಖಂಡರಿಂದ ಕ್ಲಾಸ್ – ಟೇಬಲ್ ಬಡಿದು ಆಕ್ರೋಶ