ಬೆಂಗಳೂರು: ಪಿಎಸ್‍ಐ ಅಕ್ರಮದಲ್ಲಿ ಸಚಿವರು, ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. 300 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Advertisement
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ, ಮಂತ್ರಿಗಳು, ಪೊಲೀಸ್ ಅಧಿಕಾರಿಗಳೇ ಶಾಮೀಲಾಗಿರೋದ್ರಿಂದ ಸಿಐಡಿಯಿಂದ ತನಿಖೆ ಸಾಧ್ಯವಿಲ್ಲ. ಇದನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಆಗಬೇಕು ಅಂತಾ ಆಗ್ರಹಿಸಿದರು. ಇದನ್ನೂ ಓದಿ: ‘ಆರ್‌ಎಸ್‌ಎಸ್’ ದೇಶದ ಶ್ರೀಮಂತ ಎನ್‍ಜಿಓ, ಅದಕ್ಕೆ ಹಣ ಎಲ್ಲಿಂದ ಬರುತ್ತೆ?: ಬಿ.ಕೆ ಹರಿಪ್ರಸಾದ್
Advertisement
Advertisement
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮವನ್ನು ಸೇರಿಸಿ ಎರಡು ನೇಮಕಾತಿ ಅಕ್ರಮ ಪ್ರಕರಣಗಳನ್ನ ನ್ಯಾಯಾಂಗ ತನಿಖೆಗೆ ಕೊಡಲಿ. ಜನ ಸಾಮಾನ್ಯರ ಪೀಡಕ ಸರ್ಕಾರ, ಜನ ಸಾಮಾನ್ಯರ ಸುಲಿಗೆ ಸರ್ಕಾರ ಇದು. ನರೇಂದ್ರ ಮೋದಿ ಅವರು ನಾಟಕ ಬಿಟ್ಟು ಇನ್ನಾದರೂ ತನಿಖೆ ಮಾಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವತ್ಥ ನಾರಾಯಣ್ ಶಾಮೀಲು: ಸಿದ್ದು ಆರೋಪ
Advertisement
ಸರ್ಕಾರದ ಬಗ್ಗೆ ಜನರು ಛೀ ಥೂ ಅಂತಾ ಉಗಿಯುತ್ತಿದ್ದಾರೆ. ಬೇರೆ ಬೇರೆ ಇಲಾಖೆಗಳ ನೇಮಕಾತಿ ಅಕ್ರಮವೂ ಇದೆ. ಮತ್ತೊಮ್ಮೆ ಎಲ್ಲವನ್ನೂ ಹೇಳುತ್ತೇನೆ ಅಂತಾ ಕುತೂಹಲ ಹುಟ್ಟು ಹಾಕಿದರು. ನಮ್ಮಿಂದ ಮಾಹಿತಿಯನ್ನು ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಲಿ. ಅದು ಬಿಟ್ಟು ನೋಟೀಸ್ ಕೊಡಲು ಅವರು ಯಾರು.? ಯಾವ ಕಾನೂನು ಇದೆ.? ಪ್ರಿಯಾಂಕ್ ಖರ್ಗೆಗೆ ನೊಟೀಸ್ ಕೊಟ್ಟಿರೋದು ತಪ್ಪು ಎಂದು ಸಿಡಿದರು.
ಇದೇ ವೇಳೆ ಕುಮಾರಸ್ವಾಮಿ ಹೇಳಿಕೆ ಬಗ್ಗೆ ರಿಯಾಕ್ಟ್ ಮಾಡಲ್ಲ. ಅವರು ಬಿಜೆಪಿಗೆ ಸಪೋರ್ಟ್ ಮಾಡ್ತಾರೋ.? ಅಥವಾ ಬೇರೆ ಏನೋ.? ನಾನು ರಿಯಾಕ್ಟ್ ಮಾಡಲ್ಲ ಎಂದರು.