ಬೆಂಗಳೂರು: ಕುಮಾರಸ್ವಾಮಿ ಯಾವಗ್ಲೂ ಹಿಟ್ ಅಂಡ್ ರನ್ ಕೇಸ್ (Hit and Run Case). ಇದುವರೆಗೆ ಮಾಡಿರೋ ಆರೋಪಗಳಲ್ಲಿ ಯಾವುದನ್ನ ಕುಮಾರಸ್ವಾಮಿ ಲಾಜಿಕಲ್ ಎಂಡ್ಗೆ ತೆಗೆದುಕೊಂಡು ಹೋಗಿದ್ದಾರೆ ಹೇಳಲಿ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮೇಲೆ ಸಾಲು ಸಾಲು ಆರೋಪ ಮಾಡ್ತಿರೋ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಆರೋಪಗಳಿಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಪಾಪ ಹತಾಶರಾಗಿದ್ದಾರೆ. ಹತಾಶೆಯಾಗಿ ದ್ವೇಷದಿಂದ ಹೀಗೆಲ್ಲ ಮಾತಾಡ್ತಾ ಇದ್ದಾರೆ ಅಂತಾ ಕುಟುಕಿದ್ದಾರೆ.
Advertisement
Advertisement
ಈಗ ಹೊಸ ಸರ್ಕಾರ ಬಂದಿದೆ, ಇದು ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ. ಜನರಲ್ ವರ್ಗಾವಣೆ ಪ್ರಕ್ರಿಯೆಯಲ್ಲಿ ವರ್ಗಾವಣೆ ಮಾಡಲೇಬೇಕು. ಅದಕ್ಕೆ ದಂಧೆ (Transfer Scam) ನಡೆದಿದೆ, ಲಂಚ ನಡೆದಿದೆ ಅಂತಾ ಹೇಳ್ತಿರೋದು ಸುಳ್ಳು ಎಂದು ಹೆಚ್ಡಿಕೆ ಆರೋಪಗಳನ್ನ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಮಳೆ ಹಾನಿಗೊಳಗಾದ ದ.ಕನ್ನಡ, ಉ. ಕನ್ನಡ, ಉಡುಪಿ ಜಿಲ್ಲೆಗೆ ಶೀಘ್ರವೇ ಪರಿಹಾರ ನೀಡಿ: ಸಿಎಂ ಸೂಚನೆ
Advertisement
ಕುಮಾರಸ್ವಾಮಿ ಕಾಲದಲ್ಲಿ ವರ್ಗಾವಣೆ ಆಗಿರಲಿಲ್ಲವಾ? ಹಾಗಾದ್ರೆ ಅವರು ದುಡ್ಡು ತಗೊಂಡಿದ್ರಾ? ವರ್ಗಾವಣೆ ಆದಾಗೆಲ್ಲ ದಂಧೆ ನಡೆದಿದೆ, ದುಡ್ಡು ತಗೊಂಡಿದ್ದಾರೆ ಅಂದರೆ ಹೇಗೆ? ಹಾಗಾದ್ರೆ ಕುಮಾರಸ್ವಾಮಿನೂ ದುಡ್ಡು ತಗೊಂಡಿದ್ರಾ? ಹಾಗಾದ್ರೆ ನಾವು ಅವರ ಮೇಲೂ ಹೇಳ್ತೀವಿ ದುಡ್ಡು ತಗೊಂಡಿದ್ರು ಅಂತಾ ಎಂದು ಹರಿಹಾಯ್ದಿದ್ದಾರೆ.
Advertisement
ಸಾಮಾನ್ಯ ವರ್ಗಾವಣೆ ಆಡಳಿತಾತ್ಮಕ ದೃಷ್ಟಿಯಿಂದ ಮಾಡಬೇಕಾಗುತ್ತದೆ, ಊಹಿಸಿಕೊಂಡು ಹೇಳಬಾರದು. ಹೊಸ ಸರ್ಕಾರ ಬಂದಾಗ ಸ್ವಾಭಾವಿಕವಾಗಿ ವರ್ಗಾವಣೆ ಆಗುತ್ತವೆ. ಎಲೆಕ್ಷನ್ ಬಂದಿತ್ತು, ನೀತಿ ಸಂಹಿತೆ ಇತ್ತು, ಹೀಗಾಗಿ ವರ್ಗಾವಣೆ ಮಾಡಿರಲಿಲ್ಲ. ಈಗ ಸಾಮಾನ್ಯ ವರ್ಗಾವಣೆ ನಡೆಯುತ್ತಿದೆ ಇದನ್ನ ದಂಧೆ ಅಂದರೆ ಹೇಗೆ? ಹೆಚ್ಡಿಕೆ ಅವರಿಗೆ ಮರುಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರ ರಾಜಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ
ಇನ್ನೂ ಕುಮಾರಸ್ವಾಮಿ ಪೆನ್ ಡ್ರೈವ್ ತೋರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಕುಮಾರಸ್ವಾಮಿ ಯಾವಾಗಲೂ ಹಿಟ್ ಅಂಡ್ ರನ್ ಕೇಸ್. ಇದುವರೆಗೆ ಮಾಡಿರೋ ಆರೋಪಗಳಲ್ಲಿ ಯಾವುದನ್ನ ಕುಮಾರಸ್ವಾಮಿ ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗಿದ್ದಾರೆ ಹೇಳಲಿ.. ಅವರು ದಾಖಲೆ ಬಿಡುಗಡೆ ಮಾಡಲಿ ಅದಕ್ಕೆ ಉತ್ತರ ಕೊಡ್ತೀವಿ ಎಂದಿದ್ದಾರೆ.
Web Stories