DharwadDistrictsKarnatakaLatestMain Post

ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ: ಸಿದ್ದರಾಮಯ್ಯ

ಹುಬ್ಬಳ್ಳಿ: ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜ ವಿಷಯದಲ್ಲಿ ನಮ್ಮದು ರಾಜಕೀಯವಿಲ್ಲ. ಡೋಂಗಿ ರಾಜಕೀಯ ಇರಬಾರದು ಅಂತ ಹೇಳಿದ್ದೇನೆ. ಹಿಂದೆ ಆರ್‌ಎಸ್‍ಎಸ್‍ನ ಕೆಲವರು ರಾಷ್ಟ್ರಧ್ವಜ ಬೇಡ ಎಂದಿದ್ದರು. ನಮ್ಮ ರಾಷ್ಟ್ರಧ್ವಜ, ಸಂವಿಧಾನ ವಿರೋಧ ಮಾಡಿದ್ದರು. ಆರ್‌ಎಸ್‍ಎಸ್‍ನವರು ನಾಗ್ಪುಪುರದ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸ್ತಾರಾ ಎಂದು ಪ್ರಶ್ನಿಸಿದರು.

bjP

ಜೆಡಿಯು ಮತ್ತು ಬಿಜೆಪಿ ಮೈತ್ರಿ ಅಂತ್ಯ ವಿಚಾರವಾಗಿ ಮಾತನಾಡಿದ ಅವರು, ನಿತೀಶ್ ಕುಮಾರ್ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಇವಾಗ ಎನ್‍ಡಿಎ ತೊರಿದಿದ್ದಾರೆ. ಅವರಿಬ್ಬರ ಮನಸ್ತಾಪದ ಬಗ್ಗೆ ನಂಗೆ ಗೊತ್ತಿಲ್ಲ. ಅವರೊಬ್ಬ ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದರು. ಕೋಮುವಾದದ ಪಕ್ಷ ಬಿಟ್ಟಿದ್ದು ಒಳ್ಳೆಯದು ಎಂದರು. ಇದನ್ನೂ ಓದಿ: ನಾವೆಲ್ಲಾ ಸಚಿವರು, ನಮಗೆ ಕಾನೂನನ್ನು ಉಲ್ಲಂಘಿಸಲು ಹಕ್ಕಿದೆ: ನಿತಿನ್ ಗಡ್ಕರಿ

ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರನೇಯವರಾದ್ರು ಬರಲಿ ನಾಲ್ಕನೇಯವರಾದ್ರು ಬರಲಿ ನಮಗೇನು ಸಂಬಂಧವಿಲ್ಲ. ಬಿಎಸ್‍ವೈ ಬದಲಾವಣೆ ಬಗ್ಗೆ ನಂಗೆ ಗೊತ್ತಿತ್ತು. ಅದಕ್ಕೆ ನಾನು ಈ ಹಿಂದೆ ಹೇಳಿದ್ದೆ. ಆದರೆ ಬೊಮ್ಮಾಯಿವರ ಬಗ್ಗೆ ನಂಗೆ ಮಾಹಿತಿ ಇಲ್ಲ. ಈ ಬಗ್ಗೆ ಟ್ವೀಟ್ ಮಾಡಿದವರನ್ನ ಕೇಳಿ,ನಾನಂತು ಟ್ವೀಟ್ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.

ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದದ ಬಗ್ಗೆ ನಂಗೆ ಗೊತ್ತಿಲ್ಲ. ಅದರ ಕಾನೂನು ವಿವಾದದ ಬಗ್ಗೆಯೂ ಮಾಹಿತಿ ಇಲ್ಲ. ಅಲ್ಲಿ ಮೊದಲಿನಂತೆ ಏನು ನಡೆಯುತ್ತಿತ್ತು ಎನ್ನುವುದು ಗೊತ್ತಿಲ್ಲ ಎಂದ ಅವರು, ಬದಾಮಿಯಲ್ಲಿ ನಾನು ಸ್ಪರ್ಧಿಸೋದು ಇನ್ನು ನಿರ್ಧರಿಸಿಲ್ಲ. ಸುಮಾರು ಕಡೆ ಪಾದಯಾತ್ರೆಗೆ ಹೋಗಿದ್ದೇನೆ. ಅಲ್ಲೆಲ್ಲಾ ಚುನಾವಣೆಗೆ ನಿಲ್ಲೊಕ್ಕಾಗುತ್ತಾ, ಸದ್ಯ ಬಾದಾಮಿಯ ಶಾಸಕ, ಮುಂದಿನ ಚುನಾವಣೆಯ ಬಗ್ಗೆ ನಾನೇ ಹೇಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಿತೀಶ್ ಕುಮಾರ್ 2024ರ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ? – ಬಿಹಾರದಲ್ಲಿ ಇಂದು 2ನೇ ಇನ್ನಿಂಗ್ಸ್ ಆರಂಭ

Live Tv

Leave a Reply

Your email address will not be published.

Back to top button