ಹುಬ್ಬಳ್ಳಿ: ಈ ದೇಶದ ಸಂಪತ್ತಿನಲ್ಲಿ ನಿಮಗೂ ಪಾಲು ಸಿಗಬೇಕು. ದೇಶದ ಸಂಪತನ್ನು ನಿಮಗೂ ಹಂಚುತ್ತೇನೆ. ಯಾವುದೇ ಕಾರಣಕ್ಕೂ ನಿಮಗೆ ಅನ್ಯಾಯ ಆಗೋಕೆ ಬಿಡಲ್ಲ ಎಂದು ಮುಸ್ಲಿಂ ಸಮಾವೇಶದಲ್ಲಿ (Muslim Conference) ಸಿಎಂ ಸಿದ್ದರಾಮಯ್ಯ (Siddaramaiah) ಅಭಯ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ರಾತ್ರಿ ನಡೆದ ಮುಸ್ಲಿಂ ಧರ್ಮಗುರುಗಳ (Muslim Religious Leaders) ಮಹಾ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಸಿಗಬೇಕು. ನಿಮಗೂ ಈ ದೇಶದ ಸಂಪತ್ತಿನಲ್ಲಿ ಪಾಲು ಸಿಗಬೇಕು. ಸಿಗುವಂತೆ ಮಾಡ್ತೀನಿ, ಈ ದೇಶದ ಸಂಪತ್ತನ್ನು ನಿಮಗೂ ಹಂಚುತ್ತೇನೆ. ನಿಮಗೆ ಅನ್ಯಾಯ ಮಾಡೋಕೆ ನಾನ ಬಿಡಲ್ಲ. ನಿಮ್ಮನ್ನು ನಾನು ರಕ್ಷಣೆ ಮಾಡ್ತೀನಿ ಎಂದು ಅಭಯ ನೀಡಿದ್ದಾರೆ.
Advertisement
Advertisement
ಕಾನೂನಿನ (Law) ಪ್ರಕಾರ ಎಲ್ಲಾ ಜಾತಿಯವರನ್ನೂ ರಕ್ಷಣೆ ಮಾಡ್ತೀವಿ, ಎಲ್ಲರಿಗೂ ಕಾನೂನು ಒಂದೆ. ಸೌಹಾರ್ದತೆ ತರಲು ನಮ್ಮ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತೆ. ಈ ದೇಶ ನನಗೆ ಮಾತ್ರ ಸೇರಿದ್ದಲ್ಲ, ನಿಮಗೂ ಸೇರಿದ್ದು. ನಾವೆಲ್ಲರೂ ಇಲ್ಲಿ ಒಂದೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಜಯಪುರದಲ್ಲಿ ದುರಂತ – ಮೆಕ್ಕೆಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂವರು ಕಾರ್ಮಿಕರು ಸಾವು
Advertisement
Advertisement
ಜಾತಿವಾದಿಗಳು, ಧರ್ಮ ಧರ್ಮಗಳ ನಡುವೆ ವೈರತ್ವ ಉಂಟು ಮಾಡೋರ ಬಗ್ಗೆ ಎಚ್ಚರ ಇರಲಿ. ಈ ವರ್ಷ 4 ಸಾವಿರ ಕೋಟಿ ಅನುದಾನ ಅಲ್ಪ ಸಂಖ್ಯಾತರ ಇಲಾಖೆಗೆ ಕೊಟ್ಟಿದ್ದೇವೆ. 10 ಸಾವಿರ ಕೋಟಿ ಹಣ ಅಲ್ಪಸಂಖ್ಯಾತ ಇಲಾಖೆಗೆ ಖರ್ಚು ಮಾಡಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ. ನಾನು ಕೊಟ್ಟಿದ್ದ ಹಣ ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು ಎಂದು ಸಿಎಂ ತಿಳಿಸಿದ್ದಾರೆ.
ರಾಜಕೀಯ ಲಾಭಕ್ಕೆ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡ್ತಾರೆ. ಇದರಿಂದ ತಾತ್ಕಾಲಿಕ ಲಾಭ ಸಿಗಬಹುದು. ಪರಸ್ಪರ ಪ್ರೀತಿ ಇರಬೇಕಾದರೆ ನಾವು ಮನುಷ್ಯತ್ವದಿಂದ ಇರಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ – ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನಿಂದ ಕೃತ್ಯ ಆರೋಪ
ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ 200ಕ್ಕೂ ಅಧಿಕ ಮುಸ್ಲಿಂ ಧರ್ಮ ಗುರುಗಳು, ಸಚಿವ ಎಚ್.ಕೆ ಪಾಟೀಲ, ಸಂತೋಷ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಎನ್.ಎಚ್ ಕೋನರೆಡ್ಡಿ, ಶ್ರೀನಿವಾಸ ಮಾನೆ, ಸೇರಿದಂತೆ ಅನೇಕ ಶಾಸಕರು, ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರು, ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.