ಬೆಂಗಳೂರು: ಹೆಚ್.ಡಿ ದೇವೇಗೌಡರು ಇರುವಷ್ಟು ದಿನ ಜೆಡಿಎಸ್ (JDS) ಪಕ್ಷ ಇರುತ್ತೆ. ಮುಂದೆ ಬಿಜೆಪಿ (BJP) ಜೊತೆಗೆ ವಿಲೀನವಾದ್ರೂ ಆಶ್ಚರ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
KPCC ಕಚೇರಿಯಲ್ಲಿ ನಡೆದ ವಿವಿಧ ಪಕ್ಷದ ನಾಯಕರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್‌ನ ಗೌರಿಶಂಕರ್ ಹಾಗೂ ಮಂಜುನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮೂಲಕ ಜಾತ್ಯತೀತ ಮತ್ತು ಸಂವಿಧಾನದ… pic.twitter.com/nmXJbWNqTr
— Siddaramaiah (@siddaramaiah) November 15, 2023
ಕೆಪಿಸಿಸಿ (KPCC) ಕಚೇರಿಯಲ್ಲಿಂದು ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಕೋಮುವಾದಿ ಪಕ್ಷ ಆದ ನಂತರ ಅನೇಕರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ನಾನು ಅದನ್ನ ಜೆಡಿಎಸ್ ಅಂತ ಹೇಳೋಕೆ ಹೋಗಲ್ಲ. ಅದು ಒಂದು ಕೋಮುವಾದಿ ಪಕ್ಷ `ಎಸ್’ ಎಂಬುದನ್ನ ತೆಗೆದು ಹಾಕಬೇಕು. ಅದನ್ನು ಅವರೇ ತೆಗೆದುಹಾಕಿದ್ರೆ ಒಳ್ಳೆಯದು. ಇಲ್ಲದಿದ್ದರೇ ಜನರೇ ತೆಗದುಹಾಕ್ತಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಶಾಸಕರು ಡಿಕೆಶಿಯನ್ನು ಸಿಎಂ ಮಾಡಿ ಎಂದಾಗ ಕುಮಾರಸ್ವಾಮಿ ಮಾತನಾಡಲಿಲ್ಲ: ಡಿ.ಕೆ.ಶಿವಕುಮಾರ್ ಆರೋಪ
ಬಿಜೆಪಿ ಜೊತೆಗೆ ಸೇರಿಕೊಂಡ ಮೇಲೆ ಜೆಡಿಎಸ್ ಜಾತ್ಯತೀತವಾಗಿ ಉಳಿದಿಲ್ಲ. ನಾವು ಇದ್ದಾಗ ಮಾತ್ರ ಜೆಡಿಎಸ್ ಸೆಕ್ಯುಲರ್ ಆಗಿತ್ತು. ನಾನು ಜೆಡಿಎಸ್ ಬಿಜೆಪಿಯ ಬೀ ಟೀಂ ಅಂತ ರಾಹುಲ್ ಗಾಂಧಿ ಕಿವಿಯಲ್ಲಿ ಹೇಳಿದ್ದೆ. ಆಗ ಕುಮಾರಸ್ವಾಮಿ ದೇವೇಗೌಡರು ಕೆಂಡಾಮಂಡಲರಾಗಿದ್ದರು. ಸೆಕ್ಯುಲರ್ ಅನ್ನೋ ಪದವನ್ನು ಅವರೇ ಇನ್ನು ಮುಂದೆ ತೆಗೆದುಹಾಕಿದ್ರೆ ಒಳ್ಳೆಯದು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಎಲ್ಲರೂ ಒಗ್ಗಟ್ಟಾಗಿ ಹೋದರೆ ರಾಜ್ಯದಲ್ಲಿ 28 ಎಂಪಿ ಸ್ಥಾನ ಗೆಲ್ಲಬಹುದು: ಬೊಮ್ಮಾಯಿ
ಅಂದು ಜನತಾದಳ ಇಬ್ಬಾಗ ಆದಾಗಲೂ ಬಿಜೆಪಿ ಜೊತೆಗೆ ಸೇರ್ತಾರೆ ಅಂತಲೇ ಡಿವೈಡ್ ಆಗಿತ್ತು. ಜೆಡಿಯು ಜೊತೆಗೆ ಹೋಗಬಾರದು ಅಂತ ನಾವೆಲ್ಲ ಸೆಕ್ಯುಲರ್ ಜನತಾ ದಳ ಮಾಡಿದ್ವಿ. ನಾನು ಜನತಾ ದಳದಲ್ಲಿ ಇರುವವರೆಗೆ ಬಿಜೆಪಿ ಜೊತೆಗೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಅಂತ ನಿರ್ಧರಿಸಿದ್ದೆ. ಕೊನೆಗೆ ನನ್ನನ್ನೇ ಪಕ್ಷದಿಂದ ತೆಗದುಹಾಕಿಬಿಟ್ರು. ಆಮೇಲೆ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದರು. ಯಡಿಯೂರಪ್ಪನವರ ಮಗ ಈಗ ಅಧ್ಯಕ್ಷ ಆಗಿದ್ದಾನೆ. ಆವತ್ತು ಯಡಿಯೂರಪ್ಪಗೆ 20 ತಿಂಗಳು ಅಧಿಕಾರ ಕೊಡ್ತೀವಿ ಅಂತ ಮೋಸ ಮಾಡಿಬಿಟ್ರು. ಮುಂದಿನ ದಿನಗಳಲ್ಲಿ ಮತಗಳ, ರಾಜಕಾರಣ ಧೃವೀಕರಣ ಆಗುತ್ತದೆ. ಜೆಡಿಎಸ್ ಪಾರ್ಟಿಯೇ ಅಲ್ಲ, ಅದೊಂದು ರಾಜಕೀಯ ಪಾರ್ಟಿ ಅಲ್ಲ. ಅದು ದೇವೇಗೌಡ ಆ್ಯಂಡ್ ಫ್ಯಾಮಿಲಿ ಪಾರ್ಟಿ ಅಷ್ಟೇ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿಯವರು ಕುಮಾರಸ್ವಾಮಿಯವರನ್ನ ಛೂ ಬಿಟ್ಟಿದ್ದಾರೆ. ಅದಕ್ಕೆ ನಮ್ಮ ವಿರುದ್ಧ ಅಟ್ಯಾಕ್ ಮಾಡ್ತಿದಾರೆ. ಜೆಡಿಎಸ್ ನ ಶಾಸಕರನ್ನ ಕರೆದುಕೊಂಡು ರೆಸಾರ್ಟ್‌ಗೆ ಹೋಗಿ ಎಲ್ಲರನ್ನು ಹಿಡಿದಿಟ್ಟುಕೊಳ್ಳೋಕೆ ಮುಂದಾಗಿದ್ದಾರೆ. ಜೆಡಿಎಸ್‌ನವರು ಮಾಯ-ಮಂತ್ರ ಎಲ್ಲ ಮಾಡ್ತಾರೆ. 2008ರಲ್ಲಿ ನನ್ನ ಸೋಲಿಸೋದಕ್ಕೆ ಏನೇನೋ ಮಾಡಿದ್ರು. ಲಿಡ್ಕರ್ ನಿಂದ ನಾನು ಎರಡು ಖುರ್ಚಿ ತರಿಸಿಕೊಂಡೆ 2 ಕೋಟಿ ಅಂದುಬಿಟ್ರು ಈಗ ಕುಮಾರಸ್ವಾಮಿ. 2 ಖುರ್ಚಿಗೆ 2 ಕೋಟಿ ಆಗುತ್ತಾ? ಕುಮಾರಸ್ವಾಮಿ ಹೇಳೋದೆಲ್ಲ 99.99999% ಸುಳ್ಳು. ನಾನು ಸುಳ್ಳುಗಳಿಗೆಲ್ಲ ರಿಯಾಕ್ಟ್ ಮಾಡಲ್ಲ. ಅವರ ಹೊಟ್ಟೆ ಉರಿ ಅವರನ್ನೇ ಸುಡುತ್ತದೆ. ಭಯಪಡದೇ ಇರುವವರಿಗೆ ಅವರ ಮಾಯ-ಮಂತ್ರ ಎಲ್ಲ ಏನೂ ಆಗಲ್ಲ. ಭಯ ಪಡುವವರಿಗೆ ಮಾತ್ರ ಏನಾದ್ರೂ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೆಇಎ ಪರೀಕ್ಷೆಯಲ್ಲಿ ಹಿಜಬ್ ಧರಿಸಲು ಅವಕಾಶ – ಸರ್ಕಾರದ ನಡೆಗೆ ಭಾರೀ ಆಕ್ರೋಶ