ಶಿವಮೊಗ್ಗ: ಪಾಪ ಸಿದ್ದರಾಮಯ್ಯ (Siddaramaiah) ಅವರಿಗೆ ರಾಜ್ಯದಲ್ಲಿ ಕ್ಷೇತ್ರವೇ ಇಲ್ಲದಂತಾಗಿದೆ. ಆದ್ದರಿಂದ ತಮ್ಮ ಮರ್ಯಾದೆ ಉಳಿಸಿಕೊಳ್ಳೋಕೆ 224 ಕ್ಷೇತ್ರದಲ್ಲಿ, ಯಾವ ಕ್ಷೇತ್ರ ಕೊಟ್ಟರೂ ಓಕೆ ಅಂತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ವ್ಯಂಗ್ಯವಾಡಿದ್ದಾರೆ.
Advertisement
ಶಿವಮೊಗ್ಗದಲ್ಲಿಂದು ಗುಜರಾತ್ ಚುನಾವಣೆಯ (Gujarat Election) ಮತದಾನೋತ್ತರ ಸಮೀಕ್ಷೆ ವಿಚಾರ ಕುರಿತು ಮಾತನಾಡಿದ ಅವರು, ದೇಶದಲ್ಲಿ ಯಾವುದೇ ಚುನಾವಣೆ ನಡೆದ್ರೂ ಅದು ಬಿಜೆಪಿ ಗೆಲುವು. ಸಮೀಕ್ಷೆ ವರದಿ ಸಹ ಬಿಜೆಪಿ ಗೆಲುವು ಅಂತಾ ಬರುತ್ತದೆ. ಚುನಾವಣೆ ನಂತರವೂ ಫಲಿತಾಂಶ ಬಿಜೆಪಿ ಗೆಲುವು ಅಂತಲೇ ಬರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮೋದಿ ತಿಂಗಳಿಗೊಮ್ಮೆ ಕರ್ನಾಟಕ ಭೇಟಿಗೆ ಪ್ಲಾನ್ – ಚುನಾವಣೆ ತಯಾರಿ ಆರಂಭಿಸಿದ ಬಿಜೆಪಿ
Advertisement
Advertisement
ದೇಶದಲ್ಲಿ ಕಾಂಗ್ರೆಸ್ (Congress) ಪಕ್ಷ ಎಲ್ಲಿದೆ? ಕರ್ನಾಟಕದಲ್ಲಿ ಹಾಗೋ-ಹೀಗೋ ಅಂತಿತ್ತು. ಆದ್ರೆ ಇಬ್ಬರು ಪೈಲ್ವಾನರಾದ ಡಿಕೆಶಿ (Dk Shivakumar), ಸಿದ್ದರಾಮಯ್ಯ ಬಡಿದಾಡುತ್ತಿದ್ದಾರೆ. ಸಿದ್ದರಾಮಯ್ಯ ಮರ್ಯಾದೆ ಉಳಿಸಿಕೊಳ್ಳಲು ಪಾಪ ಯಾವ ಕ್ಷೇತ್ರ ಕೊಟ್ಟರೂ ಓಕೆ ಅಂತಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಲಿದೆ: ಬೊಮ್ಮಾಯಿ
Advertisement
ಸಿದ್ದರಾಮಯ್ಯಗೆ ಬದಾಮಿ? ಕೋಲಾರ, ಚಾಮುಂಡೇಶ್ವರಿ ಏಕೆ ಬೇಡ? 224 ಕ್ಷೇತ್ರದಲ್ಲಿ ಈ ಮೂರು ಕ್ಷೇತ್ರ ಇಲ್ವಾ? ಏಕೆ ಹೊಸ-ಹೊಸ ಕ್ಷೇತ್ರ ಹುಡುಕಿಕೊಂಡು ಹೋಗ್ತಿದ್ದೀರಾ? ಕಾಂಗ್ರೆಸ್ ಪಕ್ಷದ ನಾಯಕರಾದ ನಿಮಗೆ ಯಾವ ಕ್ಷೇತ್ರ ಅಂತಾ ಸ್ಪಷ್ಟ ಇಲ್ಲ ಅಂದಮೇಲೆ ಬಹುಮತ ಹೇಗೆ ಬರುತ್ತೆ? ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷ ಸ್ಥಾನವೂ ನಿಮಗೆ ಸಿಗಲ್ಲ. ಬಿಜೆಪಿ ರಾಜ್ಯದಲ್ಲಿ ಸಾಕಷ್ಟು ಸಂಘಟನೆ ಮಾಡಿದೆ. ರಾಜ್ಯದಲ್ಲಿ ಈ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ – ರಸ್ತೆಯುದ್ದಕ್ಕೂ ಮೊಳೆಗಳನ್ನು ಹಾಕಿದ ಕಿಡಿಗೇಡಿಗಳು
ಜನಾರ್ದನ ರೆಡ್ಡಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಬಿಜೆಪಿಯಲ್ಲಿ ಇರುತ್ತಾರೋ, ಬೇರೆ ಪಕ್ಷಕ್ಕೆ ಹೋಗ್ತಾರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.