ಬೆಂಗಳೂರು: ಬಿಜೆಪಿ ಜೊತೆ ಸೇರಿಕೊಂಡ ಮೇಲೆ ಹೆಚ್.ಡಿ ಕುಮಾರಸ್ವಾಮಿ ಕೂಡ ಮನುವಾದಿ ಆಗಿಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿ ಕಾರಿದರು.
I have written to the Hon’ble Union Minister of Education, Shri @dpradhanbjp avaru, requesting that the sacred scripture of our land, the Bhagavad Gita, be taught to students as part of their curriculum and that necessary steps be taken in this regard.
The timeless values of… pic.twitter.com/dgT6lAypUx
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) December 5, 2025
ವಿಧಾನಸೌಧದ ಮುಂಭಾಗ ನಡೆದ ಅಂಬೇಡ್ಕರರ 69ನೇ ಮಹಾ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾದ್ರು. ಅದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದನ್ನೂ ಓದಿ: 224 ಪಿಡಿಓಗಳ ಮೊಬೈಲ್‌ಗೆ 6 ತಿಂಗಳಿಂದ ನೋ ರೀಚಾರ್ಜ್ – ಒಂದು ಫೋನ್‌ನಿಂದ ಆಗೋ ಕೆಲಸಕ್ಕೆ ಗಂಟೆಗಟ್ಟಲೇ ಕಾಯುವ ಸ್ಥಿತಿ!
ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನ ಒಳಗೊಂಡಿರುವ ಭಗವದ್ಗೀತೆಯನ್ನ (Bhagavad gita) ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ನಿನ್ನೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್‌ಗೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ, ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ರು.
ಬಿಜೆಪಿ ಜೊತೆ ಸೇರಿಕೊಂಡ ಮೇಲೆ ಕುಮಾರಸ್ವಾಮಿ ಅವರು ಮನುವಾದಿ ಆಗಿಬಿಟ್ಟಿದ್ದಾರೆಂದು ಕಿಡಿಕಾರಿದ್ರು. ಇನ್ನು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಅವರಿಗೆ ಏನು ಅನಿಸಿದೆಯೋ ಅದನ್ನ ಕೇಂದ್ರಕ್ಕೆ ಬರೆದಿದ್ದಾರೆ. ಅದೆಲ್ಲ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಅಂತ ತಿಳಿಸಿದ್ರು. ಇದನ್ನೂ ಓದಿ: ಬಂಗಾಳದಲ್ಲಿಂದು ಬಾಬರಿ ಶೈಲಿಯ ಮಸೀದಿಗೆ ಶಿಲಾನ್ಯಾಸ – ಭದ್ರತೆಗೆ ಬಿಎಸ್‌ಎಫ್ ನಿಯೋಜನೆ


