– ಆರ್ ಆಶೋಕ್ ಬಿಲ್ ಕಟ್ಟಲ್ಲ ಅಂದ್ರೆ ಬಿಡೋರು ಯಾರು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜೋಶ್‍ನಲ್ಲಿ ನನಗೂ ಫ್ರೀ ನಿನಗೂ ಫ್ರೀ ಅಂತ ಹೇಳಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ (Shivalinge Gowda) ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದೇವಪ್ಪ ನಿನಗೂ ಫ್ರೀ ಕರೆಂಟ್ ಎಂಬ ಸಿದ್ದರಾಮಯ್ಯರ ವೈರಲ್ ಭಾಷಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಆ ಮಾತನ್ನು ಎಚ್ ಸಿ ಮಹಾದೇವಪ್ಪಗೆ ಹೇಳಿಲ್ಲ. ಯಾವುದೋ ಮಾಹಾದೇವಪ್ಪ ಅಂದಿದ್ದು, ಅಂದ್ರೆ ಜನರಿಗೆ ಹೇಳಿದ್ದು ಎಂದರು.
ನಾವು ಗ್ಯಾರಂಟಿ ಜಾರಿ ಮಾಡ್ತೇವೆ. ಕುಮಾರಸ್ವಾಮಿ (HD Kumaraswamy) ಅವರು ಸಾಲಮನ್ನಾ ಯೋಜನೆ ಜಾರಿ ತಂದ್ರು. ಅದು ಸರಿಯಾಗಿ ಜಾರಿ ಆಯ್ತಾ, ಸಾಲಮನ್ನಾ ಆಯ್ತಾ..?, ಇನ್ನೂ ಹಲವು ರೈತರಿಗೆ ಆ ಯೋಜನೆಯ ಸಾಲ ಮನ್ನಾ ಆಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಂತ್ಯೋದಯ, ಬಿಪಿಎಲ್ ಕಾರ್ಡ್ ಇರೋರಿಗೆ 10 ಕೆಜಿ ಅಕ್ಕಿ ಕೊಟ್ಟೇ ಕೊಡ್ತೀವಿ: ಕೆಹೆಚ್ ಮುನಿಯಪ್ಪ
ಒಂದು ಹದಿನೈದು ದಿನ ಟೈಮ್ ಕೊಡಿ. ಮಾಡಲಿಲ್ಲ ಅಂದ್ರೆ ನಿಮ್ಮ ಜೊತೆ ನಾನು ಸೇರಿಕೊಳ್ಳುತ್ತೇನೆ. ಎಲ್ಲರಿಗೂ ಫ್ರೀ ಕೊಡಲು ಆಗಲ್ಲ. ಆರ್ ಆಶೋಕ್ ಬಿಲ್ ಕಟ್ಟಲ್ಲ ಅಂದ್ರೆ ಬಿಡೋರು ಯಾರು?. ಇವು ಬಿಪಿಎಲ್ ಕಾರ್ಡ್‍ದಾರರಿಗೆ ಕೊಡುವ ಯೋಜನೆಗಳು. ಐಎಎಸ್, ಐಪಿಎಸ್ ಅವರಿಗೆ ಅಲ್ಲ. ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ ಜಾರಿ ಮಾಡ್ತೇವೆ. ಐದು ವರ್ಷಗಳ ಒಳಗೆ ಜಾರಿ ಮಾಡ್ತಾರೆ. ನಾನು ಮಿನಿಸ್ಟರ್ ಆಗಬೇಕಿತ್ತು. ಎಲ್ಲ ಹಣೆ ಬರಹ ಎಂದರು.