ಬೆಂಗಳೂರು: ಜಿಎಸ್‍ಟಿ ಹಣ, ಅನುದಾನದ ವಿಚಾರದಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಜಿಎಸ್‍ಟಿ ಮೇಲೆ ತೆರಿಗೆ ಸಂಗ್ರಹ ಮಾಡುತ್ತಾರೆ. ನಮಗೆ ಕೊಡುವಾಗ ಏನೂ ಕೊಡುವುದಿಲ್ಲ. 3 ಲಕ್ಷ ಕೋಟಿ ಪ್ರತಿ ವರ್ಷ ನಮ್ಮಿಂದ ಸಂಗ್ರಹ ಮಾಡುತ್ತಾರೆ. ಆದರೆ ನಮ್ಮ ರಾಜ್ಯಕ್ಕೆ ಕೊಡುವಾಗ 42% ಮಾತ್ರ ಕೊಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ನಮಗೆ ಕೇಮದ್ರದವರು 1,26,000 ಕೋಟಿ ಕೊಡಲಿ, ಆದರೆ ಸೆಂಟ್ರಲ್ ಸ್ಕೀಮ್ ಎಂದು ಕೊಡಬೇಡಿ. ಆ ಯೋಜನೆಗಳನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಐಟಿ, ತೈಲ ಸುಂಕ ಸೇರಿದಂತೆ ಎಲ್ಲಾ ಟ್ಯಾಕ್ಸ್ ವಸೂಲಿ ಮಾಡುತ್ತಾರೆ. ನಮ್ಮದು ಹಣ, ಯೋಜನೆಗಳ ಹೆಸರೆಲ್ಲಾ ಕೇಂದ್ರ ಸರ್ಕಾರದ್ದು ಅಂತಾ ಕಿಡಿಕಾರಿದರು. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಇದು: ಸಿದ್ದು ಕಿಡಿ
Advertisement
ಕೇಂದ್ರದ ಬಳಿ ಅನುದಾನ ಕೇಳದಿದರೆ ಸಾವಿರಾರು ಕೋಟಿ ಹೋಗಲಿದೆ. ಶ್ರೀಮಂತರಿಗೆ ಟ್ಯಾಕ್ಸ್ ಕಡಿಮೆ ಮಾಡಿದ್ದಾರೆ. ನಾವು ಕೆಲವೇ ಕೆಲವು ತೆರಿಗೆ ಮಾತ್ರ ಹಾಕಲು ಸಾಧ್ಯ. 15ನೇ ಹಣಕಾಸು ಆಯೋಗದ ಪ್ರಕಾರ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Advertisement
ಮಧ್ಯಂತರ ವರದಿಯಲ್ಲಿ 5,495 ಕೋಟಿ ಎಂದು ಪ್ರಸ್ತಾಪ ಮಾಡಲಾಗಿದೆ. ಆದರೆ ಕೊನೆಗೆ ಅದು ಬರಲೇ ಇಲ್ಲ. ಕರ್ನಾಟಕದ ಸಂದರಲ್ಲಿ 25 ಬಿಜೆಪಿಯವರಿದ್ದಾರೆ. ಆದರೆ ಅವರು ಕೇಂದ್ರದಿಂದ ಹಣವನ್ನೇ ಕೇಳುವುದೇ ಇಲ್ಲ ಎಂದು ವಾಗ್ದಾಳಿ ನಡೆಸಿದರು. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆ ಆಗಿದ್ದಾರೆ. ಆದರೆ ಯಾವುದೇ ಪ್ರಯೋಜನ ಇಲ್ಲ. ಕೇಂದ್ರ ಸರ್ಕಾರದಿಂದ ಬರುವ ಅನುದಾನ, ನಮ್ಮ ಪಾಲಿಗೆ ಬರಬೇಕಾದ ಪಾಲು ಕಡಿಮೆಯಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ನಮ್ಮ ಇಲಾಖೆಯಲ್ಲಿ ಅನುದಾನ ಇಲ್ಲ- ಸದನದಲ್ಲಿ ಜಲಸಂಪನ್ಮೂಲ ಸಚಿವರ ಅಳಲು
ಕೇಂದ್ರ ಸರ್ಕಾರ ಕೂಡ ಸಾಕಷ್ಟು ಹೆಚ್ಚು ಸಾಲ ಮಾಡುತ್ತಿದೆ. ಮನಮೋಹನ್ ಸಿಂಗ್ ಕಾಲದಲ್ಲಿ ಇದ್ದಿದ್ದಕ್ಕಿಂತ ಸಾಲದ ಪ್ರಮಾಣ ಹೆಚ್ಚಾಗಿದೆ. ಇದರಿಂದ ದೇಶ, ರಾಜ್ಯ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ. ಕೇಂದ್ರದ ಬಜೆಟ್ ಗಾತ್ರ ಹೆಚ್ಚುತ್ತಾ ಹೋಗುತ್ತಿದೆ, ಆದರೆ ನಮ್ಮ ಪಾಲು ಕೊಡೋದು ಮಾತ್ರ ಕಡಿಮೆ ಆಗುತ್ತಿದೆ. ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.