– ನಾಳೆಯಿಂದ ರಾಜ್ಯದಲ್ಲಿ ಮಾಜಿ ಸಿಎಂ ಅಸಲಿ ಆಟ ಶುರು
ಬೆಂಗಳೂರು: ಮೂಲ ಕಾಂಗ್ರೆಸ್ಸಿಗರು ಕೊಟ್ಟ ಶಾಕ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿದೇಶಿ ಪ್ರವಾಸ ಮೊಟಕುಗೊಳಿಸಿ ನಗರಕ್ಕೆ ಇಂದು ಮರಳುತ್ತಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಎಸ್.ಆರ್. ಪಾಟೀಲ್ ಅವರಿಗೆ ಸಿದ್ದರಾಮಯ್ಯ ತಿಳಿಸಿದ್ದರು. ಅಷ್ಟೇ ಅಲ್ಲದೆ ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ಸೂಚನೆ ನೀಡಿ ವಿದೇಶಿ ಪ್ರವಾಸ ಹಾಗೂ ಆಪ್ತರ ಮದುವೆಗೆ ಮಲೇಷಿಯಾಕ್ಕೆ ತೆರಳಿದ್ದರು.
Advertisement
Advertisement
ಮಾಜಿ ಸಿಎಂ ಗೈರಾಗಿರುವಾಗಲೇ ಮೂಲ ಕಾಂಗ್ರೆಸ್ಸಿಗರಾದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಬಣದ ಸದಸ್ಯರು ಪ್ರತಾಪ್ ಚಂದ್ರಶೆಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇದರಿಂದ ಶಾಕ್‍ಗೆ ಒಳಗಾದ ಸಿದ್ದರಾಮಯ್ಯ ಅವರು ಆಪ್ತರ ಮದುವೆ ಮುಗಿಸಿ, ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಿಮಾನ ಹತ್ತಿದ್ದಾರೆ.
Advertisement
ಮಲೇಷಿಯಾದಲ್ಲಿ ಆಪ್ತರ ಮದುವೆ ಮುಗಿಸಿ ಬೇರೆ ಬೇರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಡಿಸೆಂಬರ್ 16ರಂದು ವಾಪಸ್ ಬರಲು ಸಿದ್ದರಾಮಯ್ಯ ತೀರ್ಮಾನಿಸಿದ್ದರು. ಆದರೆ ರಾಜ್ಯ ರಾಜಕಾರಣದ ಶಾಕ್‍ಗೆ ಒಳಗಾಗಿ ವಿಮಾನ ಹತ್ತಿರುವ ಮಾಜಿ ಸಿಎಂ ಇಂದು ರಾತ್ರಿ 10.30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ರಾಜಕೀಯ ಬೆಳವಣಿಗೆ ತಿಳಿದುಕೊಂಡು ನಾಳೆಯಿಂದ ಅಸಲಿ ಆಟ ಶುರು ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
ಇತ್ತ ಸಭಾಪತಿ ಸ್ಥಾನ ಕೈ ತಪ್ಪಿದ್ದಕ್ಕೆ ಬಸವರಾಜ್ ಹೊರಟ್ಟಿ ಅವರು ಕೂಡ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕುಮಾರಸ್ವಾಮಿ ಹೆಬ್ಬೆಟ್ಟು. ಕಾಂಗ್ರೆಸ್ ನಾಯಕರು ಹೇಳುವಲ್ಲಿ ಸಹಿ ಒತ್ತುತ್ತಾರೆ ಎಂದು ಕಿಡಿಕಾರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv