ಬೆಂಗಳೂರು: ಯುರೋಪ್ ಪ್ರವಾಸ ತೆರಳಿದ್ದ ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು ಇಂದು ತಡರಾತ್ರಿ ಸ್ವದೇಶಕ್ಕೆ ಬರಲಿದ್ದಾರೆ.
ಕಳೆದ ಒಂದು ವಾರದಿಂದ ಬೆಳಗಾವಿ ರಾಜಕಾರಣಕ್ಕೆ ಸಮ್ಮಿಶ್ರ ಸರ್ಕಾರಕ್ಕೆ ಕುತ್ತು ತರುತ್ತಿದೆ ಎನ್ನಲಾಗುತ್ತಿದೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲ ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಸಮರಕ್ಕೆ ಸಿದ್ದರಾಮಯ್ಯ ಪೂರ್ಣ ವಿರಾಮ ಹಾಕಲಿದ್ದಾರಾ ಎಂಬುವುದು ತಿಳಿಯಲಿದೆ. ಈಗಾಗಲೇ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ರಾಜಕಾರಣಕ್ಕೆ ಮಧ್ಯ ಪ್ರವೇಶಿಸಿದ್ರೆ ನಾನು ಸಹಿಸೋಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
Advertisement
Advertisement
ಇತ್ತ ಜಾರಹೊಳಿ ಸಹೋದರರನ್ನು ಬಿಜೆಪಿ ಸಂಪರ್ಕಿಸಿದ್ದು, ಆಪರೇಷನ್ ಕಮಲದಡಿಯಲ್ಲಿ ಪಕ್ಷ ಕರೆತರುವ ಸಿದ್ಧತೆಯೂ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಬಂದ ಮೇಲೆ ತಮ್ಮ ಮುಂದಿನ ನಿರ್ಧಾರ ತಿಳಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
Advertisement
13 ದಿನಗಳ ಪ್ರವಾಸ ಇಂದು ರಾತ್ರಿ ಸಿದ್ದರಾಮಯ್ಯನವರು ನಗರಕ್ಕೆ ಆಗಮಿಸಲಿದ್ದಾರೆ. ಜಾರಕಿಹೊಳಿ ಸಹೋದರರು ಭಾನುವಾರ ಸಿದ್ದರಾಮಯ್ಯನವರನ್ನು ಭೇಟಿಯಾಗಲಿದ್ದಾರೆ. ಸಿದ್ದರಾಮಯ್ಯರ ಭೇಟಿ ಬಳಿಕ ಜಾರಕಿಹೊಳಿ ಸಹೋದರರ ಮುಂದಿನ ನಡೆಯತ್ತ ಎಲ್ಲರ ಚಿತ್ತ ಮನೆ ಮಾಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv