ಬೆಂಗಳೂರು: ರಾಜ್ಯದಲ್ಲಿ ಎದ್ದಿದ್ದ ಹಿಜಬ್ ವಿವಾದಕ್ಕೆ ಹೈಕೋರ್ಟ್ ಬ್ರೇಕ್ ನೀಡಿದೆ. ನಾನು ತೀರ್ಪು ಪೂರ್ತಿ ನೋಡಿಲ್ಲ. ಹೀಗಾಗಿ ಕೋರ್ಟ್ ತೀರ್ಪು ಬಗ್ಗೆ ನಾನು ಮಾತನಾಡಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಖಳಿದ್ದಾರೆ.
ವಿಧಾನಸೌಧದಲ್ಲಿ ಹೈಕೋರ್ಟ್ ತೀರ್ಪು ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ತೀರ್ಪು ಪೂರ್ತಿ ನೋಡಿಲ್ಲ. ಪೂರ್ತಿ ನೋಡಿದ ಮೇಲೆ ಪ್ರತಿಕ್ರಿಯಿಸ್ತೇನೆ. ಹಿಜಬ್ ಹಾಕೋದ್ರಿಂದ ಯಾರಿಗೆ ಸಮಸ್ಯೆ ಅಂತ ನಾವು ಕೇಳಿದ್ದೆವು. ಅಲ್ಲದೆ ಹಾಕುವವರಿಗೆ ಅವಕಾಶ ಕೊಡಿ ಅಂತ ಹೇಳಿದ್ದೆವು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿಜಬ್ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್ ಐತಿಹಾಸಿಕ ತೀರ್ಪು
Advertisement
Advertisement
ಈಗ ನ್ಯಾಯಲಯ ತೀರ್ಪು ನೀಡಿದೆ. ಪೂರ್ತಿ ಅಧ್ಯಯನ ಮಾಡಿ ಮಾತನಾಡ್ತೇನೆ. ಹೈಕೋರ್ಟ್ ತೀರ್ಪು ಬಂದಿದೆ. ಕೋರ್ಟ್ ತೀರ್ಪು ಬಗ್ಗೆ ನಾನು ಮಾತಾಡಲ್ಲ. ನಾನು ತೀರ್ಪಿನ ಬಗ್ಗೆ ಪೂರ್ಣ ಓದಿಲ್ಲ ಎಂದರು. ಇದನ್ನೂ ಓದಿ: ಮಂಗಳವಾರ ಬೆಳಗ್ಗೆ 10:30ಕ್ಕೆ ಹಿಜಬ್ ಹೈಕೋರ್ಟ್ ತೀರ್ಪು
Advertisement
Advertisement
ಇದೇ ವೇಳೆ ಕಾಂಗ್ರೆಸ್ ಬೇಕು ಅಂತಲೇ ಪ್ರಚೋದನೆ ಮಾಡಿತ್ತು ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವೇನು ಹೇಳಿದ್ದೋ ಹಿಜಬ್ ನಿಂದ ಯಾರಿಗೂ ತೊಂದರೆ ಆಗಲ್ಲ. ಯಾರಿಗೂ ನಷ್ಟ ಕೂಡ ಆಗಲ್ಲ. ಹಾಕಿಕೊಳ್ಳಲಿ ಬಿಡಿ ಅಂತ ಹೇಳಿದ್ದೋ. ಅವರು ಹಿಜಬ್ ಜೊತೆಗೆ ಯೂನಿಫಾರ್ಮ್ ಕೂಡ ಹಾಕೋದಾಗಿ ಹೇಳಿದ್ರು.ಕೋರ್ಟ್ ಆದೇಶ, ಕೋರ್ಟ್ ಆದೇಶ ಅಷ್ಟೇ ಎಂದು ಹೇಳಿದರು.