ರಾಮನಗರ: ಬಿಜೆಪಿ ಅವರು ನಮ್ಮದು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಆದರೂ ಕೂಡ ಯೋಜನೆ ಮಾಡಲೂ ಸಾಧ್ಯವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್‍ನಿಂದ ಮೂರನೇ ಅಲೆ ಪಾದಯಾತ್ರೆ ಸ್ಥಗಿತವಾಗಿತ್ತು. ರಾಜ್ಯದ ಹಿತ, ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಮೊಟಕುಗೊಳಿಸಲು ತೀರ್ಮಾನಿಸಲಾಗಿತ್ತು. ಮತ್ತೇ ಕೋವಿಡ್ ಕಡಿಮೆಯಾದ ಹಿನ್ನೆಲೆ ಪಾದಯಾತ್ರೆ ಮುಂದುವರಿಸುತ್ತಿದ್ದೇವೆ. ಇಂದಿನಿಂದ ಐದು ದಿನಗಳ ಕಾಲ ಪಾದಯಾತ್ರೆ ನಡೆಯುತ್ತದೆ. ಪಾದಯಾತ್ರೆಗೆ ಚಾಲನೆ ಕೊಟ್ಟ ಸುರ್ಜೇವಾಲಾ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ನಮ್ಮ ಅಧಿಕಾರ ಅವಧಿಯಲ್ಲಿ ಡಿಪಿಆರ್ ತಯಾರಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಐದು ವರ್ಷ ಏನೂ ಮಾಡಿಲ್ಲ, ಕಾಲಹರಣ ಮಾಡಿದರೂ ಅಂತಾ ಸುಳ್ಳು ಜಾಹೀರಾತು ಕೊಡ್ತಿದ್ದಾರೆ. ಇದೆಲ್ಲ ನೂರಕ್ಕೆ ನೂರು ಸುಳ್ಳು ಎಂದು ಕಿಡಿಕಾರಿದರು.
9 ಸಾವಿರ ಕೋಟಿ ರೂ. ಡಿಪಿಆರ್ ತಯಾರಿಸಿ ಕೊಟ್ಟಿದ್ದೇವೆ. ಕರ್ನಾಟಕದ ಎಲ್ಲಾ ಸಂಸದರನ್ನು ಭೇಟಿ ಮಾಡಿದ್ದರು. ಕೇಂದ್ರದಿಂದ ಅರಣ್ಯ, ಪರಿಸರ ಇಲಾಖೆಯ ಕ್ಲಿಯರೇನ್ಸ್ ಬೇಕಿದೆ. ಅಲ್ಲಿ ಕುಳಿತು, ಗಲಾಟೆ ಮಾಡಿ ಕರ್ನಾಟಕ ರಾಜ್ಯಕ್ಕೆ ಅಗತ್ಯ ಯೋಜನೆಯಿದಾಗಿದೆ. ಕಾನೂನು ವಿರೋಧವಿಲ್ಲ. ತಮಿಳುನಾಡು ರಾಜಕೀಯ ಕಾರಣದಿಂದ ತಕರಾರು ಮಾಡ್ತಿದ್ದಾರೆ. ಕಾನೂನಿನ ಮೂಲಕ ತಕರಾರಿಲ್ಲ. ನಮ್ಮ ಸರ್ಕಾರ ಅವಧಿ ಮುಗಿದು ಮೂರುವರೆ ವರ್ಷ ಆಯ್ತು. ಇಲ್ಲಿಯವರೆಗೂ ಕೂಡ ಕ್ಲಿಯರೆನ್ಸ್ ಪಡೆಯಲು ಸಾಧ್ಯವಾಗಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ
ಮೇಕೆದಾಟು ಡ್ಯಾಂ ಆದರೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲ್ಲ. ಬೆಂಗಳೂರಷ್ಟೆ ಅಲ್ಲ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೂ ಕೂಡ ನೀರು ಕೊಡಬಹುದು. ಕೇಂದ್ರ ಕೂಡ ಯೋಜನೆಗೆ ಬೇಕಾದ ಕ್ಲಿಯರೇನ್ಸ್ ಕೊಡಲಿ. ನೀವೂ ಯೋಜನೆ ಮಾಡದಿದ್ದರೇ ಕರ್ನಾಟಕದ ಜನರಿಗೆ ಮಾಡಿದ ದ್ರೋಹವಾಗುತ್ತದೆ. ಈ ಪಾದಯಾತ್ರೆಗೆ ನಮ್ಮ ಹೋರಾಟ ನಿಲ್ಲಲ್ಲ. ನಮ್ಮ ಹೋರಾಟ ಮತ್ತೇ ಮುಂದುವರಿಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ