– ಬಿಜೆಪಿ ಲೂಟ್ ಎಂದು ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು: ಬೆಲೆ ಏರಿಕೆ ಮೇಲಿನ ಚರ್ಚೆ ಇದೇ ಮೊದಲಲ್ಲ, ಈ ಹಿಂದೆಯೂ ಚರ್ಚೆ ಆಗಿದೆ. ಸಂಸತ್ತಿನಲ್ಲೂ ತೀಕ್ಷ್ಣವಾಗಿ ಚರ್ಚೆ ಆಗಿದೆ. ಬೆಲೆ ಏರಿಕೆ 60ರ ದಶಕದಿಂದಲೂ ಪ್ರಾರಂಭವಾಗಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದ್ದಾರೆ.
ಯಾವುದೇ ಪಕ್ಷ ಆಡಳಿತದಲ್ಲಿ ಇರಲಿ ಬೆಲೆ ಸತತವಾಗಿ ಹೆಚ್ಚಳವಾಗಿದೆ. ಬೆಲೆ ಏರಿಕೆ ನಿರಂತರವಾಗಿ ಹೆಚ್ಚಳವಾಗಿದೆ. ಕೇವಲ ಈಗಿರುವ ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ ಎಂಬ ಮಾತು ಸರಿ ಇಲ್ಲ. ಕ್ರಿಮಿನಲ್ ಲೂಟ್ ಪದವನ್ನ ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ವಾಜಪೇಯಿ ಯಾವ ಅರ್ಥದಲ್ಲಿ ಹೇಳಿದ್ರೂ ಅನ್ನೋದನ್ನ ಚರ್ಚೆ ಮಾಡಲ್ಲ. ಯಾರ್ಯಾರು ಬೆಲೆ ಹೆಚ್ಚು ಮಾಡಿದ್ದಾರೋ ಅವರೆಲ್ಲ ಕ್ರಿಮಿನಲ್ ಲೂಟ್ ಮಾಡಿದ್ದಾರೆ ಅಂತಾ ನಾನು ಹೇಳುತ್ತೇನೆ ವಿರೋಧ ಪಕ್ಷದ ನಾಯಕರ ಮಾತನ್ನ ನಾನು ಒಪ್ಪಲ್ಲ ಎಂದಿದ್ದಾರೆ. ಇದನ್ನೂ ಓದಿ: ಐವರ ಸಾವಿಗೆ ಅವರೇ ಕಾರಣ, ನಮ್ಮಣ್ಣ ಅಲ್ಲ: ಶಂಕರ್ ತಂಗಿ
Advertisement
Advertisement
ಮಾತಿಗೆ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ ಕ್ರಿಮಿನಲ್ ಲೂಟ್ ನೀವು ಮಾಡಿರೋದು ಎಂದು ಆರೋಪ ಮಾಡಿದ್ದಾರೆ. ನಿಮಗೆ ನೋವಾಗಿದ್ರೆ ಕುಳಿತುಕೊಳ್ಳಿ ಕುಳಿತುಕೊಳ್ಳಿ ಎಂದು ಬೊಮ್ಮಾಯಿ ಹೇಳಿದ್ದಾರೆ. ನನಗ್ಯಾಕೆ ನೋವು ಆಗಬೇಕು, ನೋವು ನರೇಂದ್ರ ಮೋದಿ ಅವರಿಗೆ ಆಗಬೇಕು, ನಿಮಗೆ ನೋವಾಗಬೇಕು ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ: ರಾಜೂ ಗೌಡ
Advertisement
Advertisement
ನಿಮ್ಮ ಅವಧಿಯಲ್ಲಿ ಶೇ.60 ರಷ್ಟು ಹೆಚ್ಚಾಗಿತ್ತು, ಈಗ ಶೇ.30ರಷ್ಟು ಹೆಚ್ಚಾಗಿದೆ. ಯಾರು ಕ್ರಿಮಿನಲ್ ಲೂಟ್ ಮಾಡಿದ್ದು ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ನಿಮಗೆ ಕ್ರಿಮಿನಲ್ ಲೂಟ್ ಅನ್ನೋದು ಬೇಡ ಎಂದ್ರೆ ಕಾಂಗ್ರೆಸ್ ಲೂಟ್ ಎಂದು ಕರೆಯುತ್ತೇನೆ. ಭೂತದ ಬಾಯಲ್ಲಿ ಭಗವದ್ಗೀತೆ, ನಿಮಗೆ ಮಾತನಾಡುವ ಅಧಿಕಾರ ಇಲ್ಲ ಎಂದ ಸಿಎಂ ಹೇಳಿದಾಗ ಕಾಂಗ್ರೆಸ್ ಸದಸ್ಯರ ಆಕ್ಷೇಪ, ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬಿಜೆಪಿ ಲೂಟ್ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಓಡಿಹೋಗಲು ಹೆತ್ತವರಿಗೆ ವಿಷ ಇಟ್ಟ ಮಗಳು
ವಿಧಾನಸಭೆಯಲ್ಲಿ ಬೆಲೆ ಏರಿಕೆ ಮೇಲಿನ ಚರ್ಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರದ ವೇಳೆ ಕಾವೇರಿದ ಗದ್ದಲದ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಹೊರಗಡೆಯೂ ಮಳೆ ಜೋರು ಬರ್ತಿದೆ, ಒಳಗಡೆಯೂ ಮಳೆ ಜೋರಾಗುತ್ತಿದೆ ಎಂದು ನಗೆಚಟಾಕೆ ಹಾರಿಸಿದರು.
ನಮ್ಮ ನರೇಂದ್ರ ಮೋದಿ ಸರ್ಕಾರ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದಾರೆ ಎಂದಿದ್ದಾರೆ. ಆಗ ರೈತರು ಏಕೆ ಚಳವಳಿ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಏಕೆ ರೈತ ಚಳವಳಿ ಆಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ರೈತರು ಸುಮ್ ಸುಮ್ನೆ ಚಳವಳಿ ಮಾಡುತ್ತಿದ್ದಾರಾ ಎಂದ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಅಲ್ಲಿ ಮಾಡುತ್ತಿರುವುದು ಸ್ಪಾನ್ಸರ್ ಚಳವಳಿಯಾಗಿದೆ. ರಾಜಕೀಯ ಪ್ರೇರಿತವಾಗಿದ್ದರೆ ಅದು ಸ್ಪಾನ್ಸರ್ ಚಳವಳಿ ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.