ಬೆಂಗಳೂರು: 3 ಕ್ಷೇತ್ರಗಳ ಉಪಚುನಾವಣೆ ಗೆದ್ದ ಹುಮ್ಮಸ್ಸಿನಲ್ಲಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಸಂಪುಟದ ಸರ್ಜರಿಗೆ ಮುಂದಾಗಿದ್ದಾರೆ.
ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಸಿಎಂ, ಸಂಪುಟ ಸರ್ಜರಿ ಬಗ್ಗೆ ಹೈಕಮಾಂಡ್ ಒಲವು ಹೊಂದಿದೆ. ಆದರೆ ನಾನು ಯಾವುದೇ ಹೆಸರು ಸೂಚಿಸಿಲ್ಲ ಎಂದಿದ್ದಾರೆ.
ನಿಮ್ಮ ಕಾರ್ಯವೈಖರಿ ಕಾರ್ಡ್ ಮೇಲೆ ತೀರ್ಮಾನ ಆಗಲಿದೆ. ಬಹುತೇಕ ಜನವರಿಯಲ್ಲಿ ಸಂಪುಟ ಪುನಾರಚನೆ ಆಗಬಹುದು ಅಥವಾ ಕೆಲವರಿಗೆ ಕೊಕ್ ಕೊಟ್ಟು ಹೊಸಬರಿಗೆ ಅವಕಾಶ ಕೊಡಬಹುದು. ಹೈಕಮಾಂಡ್ (High Command) ಒಪ್ಪಿದರೆ ಅಧಿವೇಶನಕ್ಕೂ ಮೊದಲೇ ನಾಗೇಂದ್ರ (Nagendra) ಸಂಪುಟ ಸೇರ್ಪಡೆ ಸಾಧ್ಯತೆ ಅಂತ ಸಿಎಂ ಹೇಳಿದ್ದಾರೆ ಅಂತ ಪಬ್ಲಿಕ್‌ಟಿವಿಗೆ ಮಾಹಿತಿ ಸಿಕ್ಕಿದೆ.
ಕ್ಯಾಬಿನೆಟ್ ಸಭೆ ಮುಗಿಸಿ ಸಿಎಂ ಸಿದ್ದರಾಮಯ್ಯ ದೆಹಲಿ ತಲುಪಿದ್ದಾರೆ. ಶುಕ್ರವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಆ ಬಳಿಕ ಕ್ಯಾಬಿನೆಟ್ ಸರ್ಜರಿ, ಕೆಪಿಸಿಸಿಗೆ ಹೊಸ ಸಾರಥಿ, ಬೆಳಗಾವಿ ಅಧಿವೇಶನ ಹಾಗೂ ತಮ್ಮ ವಿರುದ್ಧದ ಮುಡಾ ಕೇಸ್ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಆರ್‌ಸಿಬಿ ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ
ಈಗಾಗಲೇ ದೆಹಲಿಯಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೂಡ ಸಿಎಂಗೆ ಸಾಥ್ ಕೊಡಲಿದ್ದಾರೆ. ಸಂಪುಟ ಪುನಾರಚನೆಗೆ ಸಿಎಂ ಒಲವು ತೋರದಿದ್ದರೂ, ಸಣ್ಣಪುಟ್ಟ ಬದಲಾವಣೆಯ ಪ್ರಸ್ತಾಪವನ್ನು ಡಿಕೆಶಿ ಮುಂದಿಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯಲು ಷರತ್ತು ವಿಧಿಸಿದ್ದಾರೆ ಅಂತ ತಿಳಿದು ಬಂದಿದೆ.