ಶಾಸಕ ಹ್ಯಾರಿಸ್ ವಿಚಾರಕ್ಕೆ ಪರಂ, ಸಿದ್ದರಾಮಯ್ಯ ನಡುವೆ ವಾಗ್ವಾದ

Public TV
1 Min Read
parm

ಬೆಂಗಳೂರು: ಶಾಸಕ ಹ್ಯಾರಿಸ್‍ಗೆ ವಿಚಾರದಲ್ಲಿ ಜಿ. ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವೆ ವಾಗ್ವದ ನಡೆದ ಪ್ರಸಂಗ ನಡೆದಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಯಲು ಸಿದ್ಧತೆ ನಡೆಯುತ್ತಿತ್ತು. ಈ ವೇಳೆ ಪರಮೇಶ್ವರ್ ಅವರು, ಹ್ಯಾರಿಸ್‍ಗೆ ವಿದೇಶಕ್ಕೆ ಹೋಗಲು ಅನುಮತಿ ಕೊಡಬೇಡಿ. ಹಾಗೆ ನೋಡಿದರೆ ನಮಗೂ ಸಾವಿರ ಕೆಲಸ ಇರುತ್ತವೆ ಎಂದು ತುಸು ಕೋಪದಿಂದಲೇ ಸಿದ್ದರಾಮಯ್ಯಗೆ ಜಿ. ಪರಮೇಶ್ವರ್ ಹೇಳಿದ್ದಾರೆ.

Harris 2 1

ಈ ವೇಳೆ ಸಿದ್ದರಾಮಯ್ಯ ಜುಲೈ 12 ಮತ್ತು 13ಕ್ಕೆ ಇರಬೇಕು. ಅಧಿವೇಶನದ ಮೊದಲ ಎರಡು ದಿನ ಇರಬೇಕು. ನಂತರ ಫೈನಾನ್ಸ್ ಬಿಲ್‍ಗೆ ಬರಬೇಕು ಎಂದು ಹ್ಯಾರಿಸ್‍ಗೆ ತಿಳಿಸಿದ್ದಾರೆ. ಆಗ ಮಧ್ಯಪ್ರವೇಶಿಸಿದ ಜಿ. ಪರಮೇಶ್ವರ್, ಎಲ್ಲಿಗೂ ಹೋಗುವುದು ಬೇಡ ಎಂದು ಹೇಳಿ, 26ರ ನಂತರ ಹೋಗು ಅಂತ ಹೇಳಿ ಎಂದು ಸಿದ್ದರಾಮಯ್ಯನವರಲ್ಲಿ ಹೇಳಿದರು.

ಪರಮೇಶ್ವರ್ ಈ ಮಾತಿಗೆ ಸಿದ್ದರಮಯ್ಯ, ಮಗನ ಗ್ರ್ಯಾಜುಯೇಷನ್ ಕಾರ್ಯಕ್ರಮವಿದೆಯಂತೆ ಹೋಗಲಿ ಬಿಡಿ ಎಂದು ಹೇಳಿ ಹ್ಯಾರಿಸ್ ವಿದೇಶಕ್ಕೆ ತೆರಳಲು ಅನುಮತಿ ನೀಡಿದರು.

vlcsnap 2019 07 09 14h47m56s373

ಹ್ಯಾರಿಸ್ ವಿದೇಶಕ್ಕೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಕೆಲ ಸೆಕೆಂಡ್ ಮಾತುಕತೆ ನಡೆದಿದ್ದು, ಇಬ್ಬರ ವಾಗ್ವಾದ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *