ಬೆಂಗಳೂರು: ಜಂಟಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯ ಒಂದು ಭ್ರಷ್ಟಾಚಾರ ಕುರಿತು ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಅಧಿವೇಶನದಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡ್ತೀವಿ. ಇತ್ತೀಚೆಗೆ ನಾನು ಸದನಕ್ಕೆ ಬರುತ್ತಿರಲಿಲ್ಲ. ಕಾಂಗ್ರೆಸ್‍ಗೆ ಸದನ ಹೈಜಾಕ್ ಮಾಡಲು ಬಿಟ್ಡಿದ್ದೇವು. ಆದ್ರೆ ಈ ಬಾರಿ ಹಾಗೆ ಆಗೊಲ್ಲ. ಈ ಬಾರಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡ್ತೀವಿ. ಭ್ರಷ್ಟಾಚಾರ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಆದ್ರೆ ಅವರ ಅವದಿಯಲ್ಲಿ ಭ್ರಷ್ಟಾಚಾರ ಅಗಿದೆ. ಇವ್ರ ನಿಜ ಬಣ್ಣ ಬಯಲು ಮಾಡ್ತೀನಿ. ಸಿದ್ದರಾಮಯ್ಯ ಅವಧಿಯಲ್ಲಿ ನಡೆದಿರೋ ರಾಜ್ಯದ ಹಣ ಲೂಟಿ, ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡ್ತೀನಿ. ಅದಕ್ಕೆ ಆಡಳಿತ ಪಕ್ಷ, ವಿಪಕ್ಷ ಕಾಂಗ್ರೆಸ್ ಉತ್ತರ ಕೊಡಬೇಕು ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ನಾಡಿಗೆ ದ್ರೋಹ ಬಗೆದು ರಾಜ್ಯಪಾಲರ ಬಾಯಿಂದ ಸುಳ್ಳು ಹೇಳಿಸಿದೆ: ಸಿದ್ದರಾಮಯ್ಯ
Advertisement
Advertisement
ರಾಜ್ಯಪಾಲ ಭಾಷಣದ ಬಗ್ಗೆ ಮಾತನಾಡಿ, ಕೋವಿಡ್ ನಿಂದ, ಕೋವಿಡ್ ಗಾಗಿ, ಕೋವಿಡ್ ಗೋಸ್ಕರ ಮಾಡಿದ ಭಾಷಣ ಎಂದು ಲೇವಡಿ ಮಾಡಿದ್ದಾರೆ. ರಾಜ್ಯಪಾಲರ ಭಾಷಣ ಸರ್ಕಾರದ ಮುನ್ನುಡಿ ಮತ್ತು ಹಿನ್ನುಡಿ ತಿಳಿಸಿದ್ರು. ಕೋವಿಡ್ ನಿಂದ, ಕೋವಿಡ್ ಗಾಗಿ, ಕೋವಿಡ್ ಗೋಸ್ಕರ ಮಾಡಿರೋ ಕೋವಿಡ್ ಅಂಕಿ ಅಂಶದ ಭಾಷಣ ಇದು. ರಾಜ್ಯದ ಅಭಿವೃದ್ಧಿಗೆ ಮುಂದಿನ ವರ್ಷದಲ್ಲಿ ಸರ್ಕಾರ ಏನು ಮಾಡುತ್ತೆ ಅನ್ನೋದನ್ನು ಹೇಳಿಲ್ಲ ಇದೊಂದು ನಿರಾಶಾದಾಯಕ ಭಾಷಣ. ಬಜೆಟ್‍ನಲ್ಲಿ ಜನ ಏನು ನಿರೀಕ್ಷೆ ಮಾಡಬೇಡಿ ಅಂತ ಹೇಳಿರೋ ಭಾಷಣ ಇದು. ರೈತರ ಪರವಾಗಿ ಏನು ಹೇಳಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
ಹಿಜಬ್ ಗಲಾಟೆ ವಿಚಾರವಾಗಿ ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಹಾಳು ಮಾಡಲು ಹೊರಟಿದೆ. ಇದು ಶಾಂತಿಯುತವಾದ ರಾಜ್ಯ. ಪೋಷಕರು ಮಕ್ಕಳಿಗೆ ತಿಳುವಳಿಕೆ ಹೇಳಿಕೊಡಬೇಕು. ಸಮಾಜ ಹಾಳು ಮಾಡುವ ಕೆಲಸ ಯಾರು ಮಾಡಬಾರದು. ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡೋದು ಬೇಡ. ಉಡುಪಿಯಲ್ಲಿ ಇದನ್ನು ಮಟ್ಟ ಹಾಕಬೇಕಿತ್ತು. ಆದ್ರೆ ಇದನ್ನು ಬೆಳೆಯಲು ಬಿಟ್ಟು ತಪ್ಪು ಮಾಡಿದ್ರು. ಪಂಚರಾಜ್ಯಗಳ ಚುನಾವಣೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತಾಡೋಕೆ ವಿಷಯ ಇಲ್ಲ. ಹೀಗಾಗಿ ಈ ವಿಷಯದಿಂದ ಮತ ಪಡೆಯಲು ಈ ವಿಷಯ ಚರ್ಚೆಗೆ ಬಂದಿರಬಹುದು. ಇದು ಹೇಗೆ ತಿರುವು ಪಡೆದುಕೊಳ್ಳುತ್ತದೆ ನೋಡೋಣ ಎಂದರು. ಇದನ್ನೂ ಓದಿ: ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ, ಅವರು ಕ್ಷಮೆ ಕೇಳಬೇಕು: ಡಿಕೆಶಿ