ಕೋಲಾರ: ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ಸಖತ್ ಅಲರ್ಟ್ ಆಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರಕ್ಕೆ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಜಾತಿ ಧರ್ಮದ ಸಮೀಕರಣಕ್ಕೆ ಸಿದ್ದರಾಮಯ್ಯ ಕೂಡ ಸಾಲು-ಸಾಲು ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಮಂದಿರ, ಮಸೀದಿ, ಚರ್ಚ್‌ಗಳಿಗೆ ಭೇಟಿ ನೀಡಲಿದ್ದಾರೆ. ಆ ಮೂಲಕ ಎಲ್ಲಾ ಜಾತಿ ಧರ್ಮದ ಜನರ ಓಲೈಕೆಗೆ ಸಿದ್ದು ಪ್ಲಾನ್ ಮಾಡಿದ್ದಾರೆ.
Advertisement
ಹೌದು.. ಇನ್ನೇನು 2023ರ ವಿಧಾನಸಭೆ ಚುನಾವಣೆಗೆ (Election) 6 ತಿಂಗಳಿರುವಾಗಲೇ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಬಿರುಸಿನ ಕಾರ್ಯಕ್ರಮಗಳ ಮೂಲಕ ಮೇಲುಗೈ ಸಾಧಿಸಲು ಮುಂದಾಗಿವೆ. ಅದರಂತೆ ರಾಜ್ಯ ಬಿಜೆಪಿ (BJP) ನಾಯಕರು ಪ್ರಧಾನಿ ಮೋದಿ ಅವರ ಮೂಲಕ ಕೆಂಪೇಗೌಡ (KempeGowda Statue), ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ ಸಮುದಾಯಗಳ ಮನವೊಲಿಸಲು ಪ್ರತಿಮೆ ಪಾಲಿಟಿಕ್ಸ್ ಮಾಡಿದೆ. ಇದನ್ನೂ ಓದಿ: ಹೈಕೋರ್ಟ್ ಚಾಟಿ ಬೆನ್ನಲ್ಲೇ ಸಭೆ- ನಾಳೆ ನಿಗದಿಯಾಗುತ್ತಾ ಓಲಾ, ಉಬರ್ ಆಟೋ ದರ?
Advertisement
Advertisement
ಲೆಕ್ಕಾಚಾರಗಳ ಪ್ರಕಾರ ಮೋದಿ ನಿನ್ನೆಯಿಂದ ರಾಜ್ಯದಲ್ಲಿ ಚುನಾವಣೆ ರಣಕಹಳೆ ಮೊಳಗಿಸಿದ್ದಾರೆ. ಅದರಂತೆ ಫುಲ್ ಅಲರ್ಟ್ ಆಗಿರುವ ಕೈ ಪಡೆ ಮೋದಿ ತಂತ್ರಕ್ಕೆ ರಣತಂತ್ರ ರೂಪಿಸಿದೆ. ಮೋದಿ ರಾಜ್ಯ ಭೇಟಿ ಚರ್ಚೆ ಬೆನ್ನಲ್ಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ಮೋದಿ 5 ಸಮುದಾಯಗಳನ್ನ ಮನವೊಲಿಸುವ ಪ್ರಯತ್ನದ ಚರ್ಚೆ ಸದ್ಯ ಜೋರಾಗಿ ಸದ್ದು ಮಾಡಿದ್ದು ಈ ಮಧ್ಯೆ ಸಿದ್ದರಾಮಯ್ಯ ಸಹ ಕೋಲಾರದಲ್ಲಿ ಪ್ರತಿಮೆ ಪಾಲಿಟಿಕ್ಸ್ಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಮೆಗಾ ಸ್ನಾತಕೋತ್ತರ ಶೈಕ್ಷಣಿಕ ಉತ್ಸವದ ಮೊದಲ ದಿನ ಭರ್ಜರಿ ರೆಸ್ಪಾನ್ಸ್- ಬನ್ನಿ ಭಾಗವಹಿಸಿ, ಬಹುಮಾನ ಗೆಲ್ಲಿ
Advertisement
ಅದರಲ್ಲೂ ಸಿದ್ದರಾಮಯ್ಯ ಪ್ರತಿಮೆಗಳ ಜೊತೆಗೆ ದೇವಾಲಯ, ಮಂದಿರ, ಮಸೀದಿಗಳಿಗೆ ತೆರಳಿ ಎಲ್ಲಾ ಜಾತಿ, ಧರ್ಮದ ಜನರ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇಡೀ ದಿನ ಕೋಲಾರ ಕ್ಷೇತ್ರ ಸಂಚಾರ ಮಾಡುವ ಸಿದ್ದು, ಕೊನೆಯಲ್ಲಿ ಕಾರ್ಯಕರ್ತರು, ಮುಖಂಡರ ಸಭೆ ನಡೆಸಿ ತಮ್ಮ ಕ್ಷೇತ್ರದ ಆಯ್ಕೆ ಬಹುತೇಕ ಖಚಿತ ಪಡಿಸಲಿದ್ದಾರೆ ಅನ್ನೋ ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿದೆ.
ಕಳೆದ 2 ತಿಂಗಳಿಂದಲೂ ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಸಖತ್ ಸದ್ದು ಮಾಡುತ್ತಿದೆ. ಅದರಲ್ಲೂ ಈಗಾಗಲೆ 2 ಖಾಸಗಿ ಏಜೆನ್ಸಿಗಳ ಮೂಲಕ ಸರ್ವೇ ಮಾಡಿಸಿರುವ ಸಿದ್ದರಾಮಯ್ಯ, ಕೋಲಾರದ ಸೇಫ್ ಕ್ಷೇತ್ರ ಅನ್ನೋ ಮಾಹಿತಿ ಪಡೆದಿದ್ದಾರೆ. ಹಲವು ದಿನಗಳಿಂದಲೂ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಕೋಲಾರದ ಮೇಲೂ ಕಣ್ಣಿಟ್ಟಿದ್ದಾರೆ. ಕೋಲಾರಕ್ಕೆ ಗ್ರಾಂಡ್ ಎಂಟ್ರಿ ಕೊಡುತ್ತಿರುವ ಸಿದ್ದರಾಮಯ್ಯ ಮೊದಲ ಎಂಟ್ರಿಯಲ್ಲೆ ಪ್ರತಿಮೆ ಮಾಲಾರ್ಪಣೆ ಹಮ್ಮಿಕೊಂಡಿದ್ದಾರೆ.
ಇಂದು (ನವೆಂಬರ್ 13) ಬೆಳಗ್ಗೆ 10.30ಕ್ಕೆ ಕೋಲಾರಕ್ಕೆ ಎಂಟ್ರಿ ಕೊಡುವ ಸಿದ್ದು, ವಾಲ್ಮಿಕಿ ಪ್ರತಿಮೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಗಾಂಧಿಜಿ, ಅಂಬೇಡ್ಕರ್, ನಾರಾಯಣ, ಯತೀಂದ್ರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಜೊತೆಗೆ ದೇವಸ್ಥಾನ, ಮಸೀದಿ, ದರ್ಗಾ, ಚರ್ಚ್ ಗಳಿಗೂ ಭೇಟಿ ನೀಡಲಿದ್ದಾರೆ. ಒಂದು ಕಡೆ ಧಾರ್ಮಿಕ ಕ್ಷೇತ್ರಗಳ ಭೇಟಿ ಇನ್ನೊಂದು ಕಡೆ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಮೊದಲ ಎಂಟ್ರಿಯಲ್ಲಿ ಧರ್ಮ ಹಾಗೂ ಜಾತಿಗಳ ಸಮೀಕರಣಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ.
ರಾಜ್ಯದ ಮಾಸ್ ಲೀಡರ್ ಸಿದ್ದರಾಮಯ್ಯ ಕೂಡ ಮೋದಿ ಹಾದಿಯಲ್ಲೆ ಚುನಾವಣೆ ರಣಕಹಳೆ ಮೊಳಗಿಸಲು ರಾಜ್ಯ ಪ್ರವಾಸ ಕೈಗೊಂಡಿದ್ದಾರಾ, ಕೋಲಾರ ಕ್ಷೇತ್ರವನ್ನ ಅಂತಿಮ ಮಾಡ್ತಾರಾ, ಸಿದ್ದರಾಮಯ್ಯ ಲೆಕ್ಕಾಚಾರಗಳೇನು? ಅನ್ನೋದು ಕ್ಷೇತ್ರ ಸಂಚಾರದಿಂದ ತಿಳಿಯಲಿದೆ.