ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಂದು ಪ್ರಸಿದ್ಧ ಹಾಸನಾಂಬ ದೇವಸ್ಥಾನಕ್ಕೆ ತೆರಳಿ ದೇವಿಯ (Hasanamba Temple) ದರ್ಶನ ಪಡೆದು, ನಾಡಿನ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ರಾಜ್ಯದಲ್ಲಿ ಮಳೆ (Rain In Karnataka) ಬರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡಿದರು. ಮುಂಗಾರು ಕೈ ಕೊಟ್ಟಿದೆ, ಆದ್ದರಿಂದ ಮಳೆ ಬರಬೇಕು, ಹಿಂಗಾರಾದ್ರು ಬರಲೆಂದು ಭಕ್ತಿ-ಭಾವದಿಂದ ಪ್ರಾರ್ಥಿಸಿದ್ದಾರೆ. ಜೋಳ, ಭತ್ತ, ರಾಗಿ, ಕಡ್ಲೆ ಇವು ಪ್ರಮುಖ ಬೆಳೆಗಳು, ಮುಂಗಾರಿಲ್ಲದೇ ಬೆಳೆ ಹಾನಿಯಾಗಿವೆ, ಎಲ್ಲರಿಗೂ ತೊಂದರೆಯಾಗಿದೆ. ಮಳೆ ಬಂದರೆ ಜಾನುವಾರುಗಳಿಗೂ ಮೇವು ಸಿಗುತ್ತದೆ. ಆದ್ದರಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುವಂತೆ ಭಕ್ತಿಯಿಂದ ಪ್ರಾರ್ಥಿಸಿರುವುದಾಗಿ ಸಿಎಂ ಹೇಳಿದರು.
ಸಿಎಂ ಆಗಮನದ ವೇಳೆ ದೇವಸ್ಥಾನದ ಸುತ್ತಲೂ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಜಿಲ್ಲೆಯ ಶಾಸಕರುಗಳು ಮತ್ತು ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಎಂ.ಜಿ ಮಹೇಶ್ ಆಗ್ರಹ
ಹಾಸನಾಂಬೆ ದರ್ಶನದ ಬಳಿಕ ಎಸ್.ಎಂ ಕೃಷ್ಣನಗರದಲ್ಲಿ ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯನ್ನೂ ನಡೆಸಿದರು. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಮಾಡಿ ಜಾತಿಗೊಂದು ಸಿಎಂ ಕೊಟ್ಬಿಡಿ: ಈಶ್ವರಪ್ಪ ವ್ಯಂಗ್ಯ