ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಡಿಕೆ ಬೆಂಬಲಿಗರ ಮಧ್ಯೆ ಕಿತ್ತಾಟ ನಡೆದಿದ್ದು, ದಾಸರಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಅಸಮಾಧಾನ ಸ್ಫೋಟಗೊಂಡಿದೆ.
ಡಿಕೆಶಿ (DK Shivakumar) ಬಣದ ಗೀತಾ ಶಿವರಾಮ್ ಭಾಷಣಕ್ಕೆ ಸ್ವತಃ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೇದಿಕೆ ಮೇಲೆ ಗೀತಾ, ನಾನೇ ಎಂಎಲ್‍ಎ ಅಭ್ಯರ್ಥಿ ಎಂದು ಹೇಳಿದ್ದರು. ಈ ವೇಳೆ ಮಾತನಾಡಲು ಅವಕಾಶ ಕೊಡದಂತೆ ಸಿದ್ದರಾಮಯ್ಯ ಸೂಚನೆಯನ್ನು ನೀಡಿದ್ದಾರೆ. ಈ ವೇಳೆ ವೇದಿಕೆ ಮೇಲಿನಿಂದ ಗೀತಾ ಶಿವರಾಮ್ ಅಳುತ್ತ ಹೊರಟರು. ಅವರ ಬದಲು ನಾಗಲಕ್ಷ್ಮಿ ಚೌಧರಿಗೆ ಅವಕಾಶ ಕೊಟ್ಟರು. ಅದಾದ ಬಳಿಕ ಸಿದ್ದರಾಮಯ್ಯ ಅವರು ಭಾಷಣ ಮಾಡುವ ವೇಳೆ ಗೀತಾ ಶಿವರಾಮ್ ಹೆಸರು ಪ್ರಸ್ತಾಪಿಸಿದ್ದಾರೆ. ಹೆಸರು ಪ್ರಸ್ತಾಪಿಸಿ ವೇದಿಕೆ ಸುತ್ತಲು ನೋಡಿದರು. ಈ ವೇಳೆ ಎಲ್ಲಿ ಹೊರಟುಹೋದ್ರಾ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ ಕಾರ್ಯಕ್ರಮ ಆಯೋಜಕರ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಭಾಷಣದ ವೇಳೆಯಲ್ಲಿ ಕಾರ್ಯಕರ್ತರು ವೇದಿಕೆ ಮೇಲಿದ್ದರು. ಅವರನ್ನು ಕೆಳಗಿಸುವಂತೆ ಸಿದ್ದರಾಮಯ್ಯ ಅವರು ಪೊಲೀಸರಿಗೆ ಸೂಚನೆ ನೀಡಿದರು. ಇದಾದ ಮೇಲೆ ಸಿದ್ದರಾಮಯ್ಯ ಅವರು ಭಾಷಣ ಶುರು ಮಾಡಿದ್ದರು. ಆದರೆ ಈ ವೇಳೆ ಸಮುದಾಯ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಮತ್ತೊಮ್ಮೆ ಸುಮ್ಮನೆ ಇರಿ ಎಂದು ಸಿದ್ದರಾಮಯ್ಯ ಅವರು ಹೇಳಿದರೂ, ಕಾರ್ಯಕರ್ತರು ಸುಮ್ಮನೆ ಇರದ ಹಿನ್ನೆಲೆಯಲ್ಲಿ, ಸುಮ್ಮನಿರಲು ಆಗದಿದ್ದರೆ ಎದ್ದು ಹೋಗಿ ಎಂದು ಸಿದ್ದರಾಮಯ್ಯ ಗದರಿದರು. ಕಾರ್ಯಕ್ರಮ ಮಾಡುವುದು ಮುಖ್ಯವಲ್ಲ, ಕಾರ್ಯಕ್ರಮದಲ್ಲಿ ಶಿಸ್ತು ಮುಖ್ಯ ಎಂದು ಗರಂ ಆದರು. ಇದನ್ನೂ ಓದಿ: ಡಿಕ್ಷನರಿಯಲ್ಲಿ ಕಾಂಗ್ರೆಸ್‍ನ ಅರ್ಥವನ್ನು ಹೊಡೆದಾಟ, ಬಡಿದಾಟವೆಂದು ಬರೆಯಬೇಕು: ಪ್ರಹ್ಲಾದ್ ಜೋಶಿ
Advertisement
Advertisement
ದಾಸರಹಳ್ಳಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಗೀತಾ ಶಿವರಾಮ್ ಹಾಗೂ ನಾಗಲಕ್ಷ್ಮಿ ಚೌಧರಿ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ. ಈ ಇಬ್ಬರು ಮಹಿಳಾ ನಾಯಕಿಯರು ದಾಸರಹಳ್ಳಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಅರ್ಜಿ ಹಾಕಿದ್ದಾರೆ. ಹೀಗಾಗಿ ಪ್ರತಿಷ್ಠೆಗೆ ಈ ಇಬ್ಬರು ನಾಯಕಿಯರು ಬಿದ್ದಿದ್ದು ಈಗ ವೇದಿಕೆಯಲ್ಲಿ ಕಿತ್ತಾಟ ನಡೆದಿದೆ. ಇದನ್ನೂ ಓದಿ: 13ರ ಮಗಳ ಮೇಲೆ ಪದೇ ಪದೇ ಅತ್ಯಾಚಾರ – ತಂದೆಗೆ ಜೀವಾವಧಿ ಶಿಕ್ಷೆ