ಚಿಕ್ಕಮಗಳೂರು: ನರೇಂದ್ರ ಮೋದಿ ಅವರು ಹೋದಲ್ಲೆಲ್ಲ ಮೋದಿ… ಮೋದಿ… ಅಂತಾರೆ ಸಿದ್ದರಾಮಯ್ಯ ಅವರ ಹೆಸರನ್ನು ಪಾಕಿಸ್ತಾನದಲ್ಲಿ ಯಾರಾದರೂ ಹೇಳಬಹುದು ಅಷ್ಟೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.
ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಕೇಳಿಸಿಕೊಳ್ಳಿ, ಇಂಗ್ಲೆಂಡ್ ಅಧ್ಯಕ್ಷ ಬೋಯಿಂಗ್ ಜಾನ್ಸನ್ ‘ಒನ್ ಸನ್, ಒನ್ ಮೂನ್, ಒನ್ ವಲ್ಡ್ ಒನ್ ನರೇಂದ್ರ ಮೋದಿ’ ಎಂದಿದ್ದಾರೆ. ಇಸ್ರೇಲ್ ಅಧ್ಯಕ್ಷ ನಮ್ಮ ದೇಶದಲ್ಲಿ ನನಗಿಂತ ಜನಪ್ರಿಯರೆಂದರೆ ನರೇಂದ್ರ ಮೋದಿ ಎಂದಿದ್ದಾರೆ. ಕರ್ನಾಟಕದಿಂದ ಹೊರ ಹೋದರೆ ಸಿದ್ದರಾಮಯ್ಯನವರ ಹೆಸರನ್ನು ಯಾರು ಹೇಳುತ್ತಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಮತದಾರರ ಬಳಿ ಆಣೆ ಪ್ರಮಾಣ ಮಾಡಿಸಿದ ಬಿಜೆಪಿ ನಾಯಕ
Advertisement
Advertisement
ಸಂಸ್ಕೃತದಲ್ಲಿ ಯದ್ಭಾವಂ ತದ್ಭವತಿ ಎಂಬ ಶ್ಲೋಕ ಇದೆ. ನಾನು ಹೇಗಿದ್ದೇನೋ ಅದೇ ರೀತಿ ಉಳಿದವರು ಎಂದು ಭಾವಿಸುತ್ತಾರೆ ಎಂದು. ಆದರೆ, ಜಗತ್ತಿನ ದೃಷ್ಟಿಯಲ್ಲಿ ನರೇಂದ್ರ ಮೋದಿ ಓರ್ವ ಅಗ್ರಗಣ್ಯ ನಾಯಕ. ಬಾವಿಯೊಳಗಿನ ಕಪ್ಪೆ ಬಾವಿಯನ್ನೇ ಪ್ರಪಂಚ ಎಂದು ತಿಳಿದುಕೊಳ್ಳುತ್ತೆ. ಅವರು ಬಾವಿಯೊಳಗಿರುವ ಕಪ್ಪೆ ಅಲ್ಲ ಎಂದರು.
Advertisement
ಇಸ್ರೇಲ್ ಅಧ್ಯಕ್ಷ ನೀವು ನಮ್ಮ ಪಕ್ಷಕ್ಕೆ ಸೇರಿ ಎಂದು ನರೇಂದ್ರ ಮೋದಿಗೆ ತಮಾಷೆಯಾಗಿ ಪ್ರಶಂಸೆ ಮಾಡಿದ್ದಾರೆ. ಮೋದಿ ಎಲ್ಲಿಗೆ ಹೋದರು ಮೋದಿ… ಮೋದಿ ಅನ್ನುತ್ತಾರೆ. ಕರ್ನಾಟಕದಿಂದ ಆಚೆ ಹೋದರೆ ಸಿದ್ದರಾಮಯ್ಯನವರ ಹೆಸರನ್ನು ಯಾರು ಹೇಳುತ್ತಾರೆ? ರಾಹುಲ್ ಗಾಂಧಿ ಹೆಸರನ್ನೇ ಯಾರೂ ಹೇಳುವುದಿಲ್ಲ. ದೇಶದ ಪ್ರಧಾನಿ ಆಫ್ರಿಕಾ, ಅಮೆರಿಕ, ಆಸ್ಟ್ರೇಲಿಯಾ ಎಲ್ಲಿ ಹೋದರು ಮೋದಿ ಮೋದಿ ಅನ್ನುತ್ತಾರೆ. ಸಿದ್ದರಾಮಯ್ಯನವರ ಹೆಸರನ್ನು ಯಾರಾದರೂ ಹೇಳುವವರು ಇದ್ದರೆ ಅದು ಪಾಕಿಸ್ತಾನದಲ್ಲಿ ಅಷ್ಟೆ ಎಂದು ಕುಟುಕಿದರು.
Advertisement
ಜೆಡಿಎಸ್ ಜೊತೆ ಒಳಒಪ್ಪಂದ ಮಾಡಿಕೊಳ್ಳದಿದ್ದರೆ ಡಿ.ಕೆ.ಶಿವಕುಮಾರ್ ಶಾಸಕರಾಗೋದಕ್ಕೆ ತಿಣುಕಾಡಬೇಕಿತ್ತು. ಡಿ.ಕೆ.ಸುರೇಶ್ ಸಂಸದರೂ ಆಗುತ್ತಿರಲಿಲ್ಲ ಎಂದು ಡಿಕೆಶಿ ಬ್ರದರ್ಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮತದಾರರಿಗೆ ಆಮಿಷವೊಡ್ಡಿದ ಕೈ ನಾಯಕರು: ಭಗವಂತ ಖೂಬಾ ವಾಗ್ದಾಳಿ
ಬಿಜೆಪಿ ಅಲೆಯಲ್ಲೂ ಜೆಡಿಎಸ್ ಬೆಂಬಲ ಇದ್ದ ಕಾರಣಕ್ಕೆ ಸುರೇಶ್ ಸಂಸದರಾಗಿ ಆಯ್ಕೆಯಾದರು. ಜೆಡಿಎಸ್ ಎಲ್ಲಿ ಸ್ಪರ್ಧೆ ಮಾಡಿಲ್ಲವೋ ಅಲ್ಲಿ ನಾವು ಬೆಂಬಲ ಕೇಳಿದ್ದೇವೆ. ಜೆಡಿಎಸ್ ಕೈನಲ್ಲಿ ಸ್ವಲ್ಪ ಮತಗಳಿವೆ ಎಂದು ನಾವು ಕೇಳಿದ್ದೇವೆ. ಅವರು ಎಲ್ಲೂ ಹಾಕುತ್ತೇವೆ ಎಂದು ಹೇಳಿಲ್ಲ. ಒಪ್ಪಂದವಾಗಿಲ್ಲ. ಮತದಾರರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಯಾವುದು ಒಳ್ಳೆಯದು-ಕೆಟ್ಟದ್ದು ಎಂಬುದು ಗೊತ್ತು. ಕೈಗೆಟುಕದ ದ್ರಾಕ್ಷಿ ಹುಳಿ ಅನ್ನೋ ಕಥೆ ಹೇಳಿದರೆ ಅದು ಅವರಿಗೆ ಅನ್ವಯವಾಗುತ್ತೆ ಎಂದು ಕಾಂಗ್ರೆಸ್-ಡಿಕೆಶಿ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿಯನ್ನು ಸಿಎಂ ಸ್ಥಾನದಲ್ಲಿ ಕೂರಿಸಿದ್ದು ನಾವ? ಅವರನ್ನು ಇಳಿಸುವುದಕ್ಕೆ ಅವರದ್ದೇ ಪಕ್ಷದ ಶಾಸಕರನ್ನು ಕಳಿಸಿದ್ದು ಯಾರು? ಕೂರಿಸಿ ಕಾಲೆಳೆಯುವುದನ್ನು ಮಾಡಿರುವುದು ಅವರೇ. ನಮ್ಮ ಸಂಬಂಧ ಜನರ ಜೊತೆ, ಒಪ್ಪಂದವೆಲ್ಲಾ ಕಾಂಗ್ರೆಸ್‍ಗೆ ಬಿಟ್ಟಿದ್ದು ಎಂದರು.