ಬೆಂಗಳೂರು: ಚಂದ್ರು ಕೊಲೆ ಸಂಬಂಧ ಅವರ ತಾಯಿ ಹೇಳಿಕೆ ಕೇಳಿದ್ದೇನೆ. ಬೈಕ್ ಅಪಘಾತದಿಂದ ಯಾರಿಗೂ ಪೆಟ್ಟಾಗಿಲ್ಲ, ಯಾರಿಗೂ ಡ್ಯಾಮೇಜ್ ಆಗಿಲ್ಲ. ಭಾಷೆಯೂ ಒಂದು ನೆಪವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದರಲ್ಲಿ ಕೋಮು ಕದಡುವ ವಿಚಾರ ಎಲ್ಲಿದೆ? ಕೊಲೆ ಮಾಡುವ ಮಾನಸಿಕ ಸ್ಥಿತಿ ಯಾಕಿದೆ? ಸತ್ಯ ಹೇಳುವುದರಿಂದ ಯಾವ ಕೋಮು ಕದಡಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಹೇಳಿಕೆ ನೋಡಿದರೆ ಅವರು ನಮ್ಮ ರಾಜ್ಯದ ಸಿಎಂ ಆಗಿದ್ದರು ಎಂದು ಹೇಳೋಕೆ ನಾಚಿಕೆ ಆಗುತ್ತದೆ. ಸಿದ್ದರಾಮಯ್ಯ ಕಾಲ ಕಾಲಕ್ಕೆ ಸತ್ಯ ಹೇಳುವ ಟೀಮ್ ಅನ್ನು ಇಟ್ಟುಕೊಳ್ಳಬೇಕು. ಅವರು ಅರಳೋ ಮರಳೋ ಎನ್ನುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಸ್ವತಃ ಅಲ್‌ಖೈದಾ ಉಗ್ರ ಆಲ್ ಜಹಾರಿ ಮಾತನಾಡಿರುವ ವೀಡಿಯೋ ಇದೆ. ಅದನ್ನು ನೋಡಬೇಕು. ಇಲ್ಲದಿದ್ದರೆ ಅವರು ಅವರ ಸ್ಥಾನಕ್ಕೆ ತಕ್ಕಂತೆ ಮಾತನಾಡುತ್ತಿಲ್ಲ ಎನ್ನುವುದು ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಂಧ್ರಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ
ಈ ವೇಳೆ ಗೃಹಸಚಿವರ ಹೇಳಿಕೆಗೆ ಕಾಮೆಂಟ್ ಮಾಡಲ್ಲ ಎಂದ ಸಿಟಿ ರವಿ, ಕೆಲವೊಮ್ಮೆ ಸತ್ಯ ಸಂಗತಿ ಹೇಳುವುದಕ್ಕಿಂತ ಮುಂದೆ ಆಗುವ ಗಲಾಟೆ ತಡೆಯುವುದಕ್ಕೆ ಪ್ರಯತ್ನ ಮಾಡುತ್ತಾರೆ. ಅವರೇ ಸಚಿವರ ಬಾಯಿಂದ ಹೇಳಿಸಿರುತ್ತಾರೆ. ಅವರ ತಾಯಿ ಹೇಳಿಕೆ ನೋಡಿದರೆ, ಭಾಷೆ ಹೇಳಿಕೆ ಕೂಡ ಕೊಲೆಗೆ ಕಾರಣವಾಗಿದೆ. ಗಲಭೆಗೆ ಕಾರಣ ಆಗಬಾರದೆಂದು ಸುಳ್ಳು ಹೇಳಿಸಿದ್ದಾರೆ ಎಂದು ಭಾಸಿದ್ದೇನೆ. ಅದು ಏನೇ ಆಗಿರಲಿ ತನಿಖೆ ಅಡ್ಡದಾರಿಗೆ ಹೋಗಬಾರದು ಎಂದು ಹೇಳಿದರು.
ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಮಗು ಚಿವುಟುವ ಕೆಲಸ ಮಾಡಿದೆ. ಖಲಿಸ್ತಾನ್ ಚಳುವಳಿಗೆ ಗೊಬ್ಬರ ಹಾಕಿದ್ದು ಕಾಂಗ್ರೆಸ್. ಅದಕ್ಕೆ ಬಲಿಯಾಗಿದ್ದು ಇಂದಿರಾಗಾಂಧಿ. ಹಿಜಬ್ ವಿಚಾರದಲ್ಲಿ ಕೂಡ ಹಾಗೆಯೇ ಆಗುತ್ತದೆ. ಹೆಣ್ಣು ಮಕ್ಕಳಿಗೆ ಕೊಡುವ ಸ್ವಾತಂತ್ರ‍್ಯದ ಬಗ್ಗೆ ಗೊತ್ತಿರಬೇಕಿತ್ತು. ಹಿಜಬ್ ವಿಚಾರದಲ್ಲಿ ವಕೀಲರನ್ನು ನೇಮಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿಕಟ್ಟಬೇಕು ಎನ್ನುವುದು ಅವರ ಅಜೆಂಡಾ. ಹಿಜಬ್ ಕಾರಣಕ್ಕೆ ಅವರೆಲ್ಲಾ ಅವಕಾಶ ಕಳೆದುಕೊಳ್ಳುತ್ತಾರೆ. ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚೋದಲ್ಲದೆ, ವಾಹನಗಳನ್ನು ಸುಟ್ಟುಹಾಕಿದರು. ಇದರ ಬಗ್ಗೆ ಅಧ್ಯಯನ ಆಗದಿದ್ದರೆ, ಮುಂದೆ ಕಷ್ಟ ಆಗಲಿದೆ. ಈ ಬಗ್ಗೆ ಸತ್ಯ ಸಂಗತಿ ಅಧ್ಯಯನ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ: 3 ವಾರಗಳಲ್ಲಿ ವರದಿ ಸಲ್ಲಿಸುವಂತೆ `ಹೈ’ ಸೂಚನೆ
ಇನ್ನೊಂದೆಡೆ ವಾಟ್ಸಪ್ ಸಂದೇಶ ಹರಿದಾಡುತ್ತಿದೆ. ಅದನ್ನು ಮುಂದೆ ಇಡುತ್ತೇನೆ ಎಂದ ಸಿಟಿ ರವಿ ವಾಟ್ಸಪ್ ಸಂದೇಶ ಓದಿದರು. ಜಗತ್ತಿನಾದ್ಯಂತ ಬಾಂಬ್ ಸ್ಪೋಟ ಮಾಡುತ್ತಿರುವುದು ಕುರಾನ್‌ನಲ್ಲಿ ಹೇಳಿರುವುದಕ್ಕೆ ಅಂತೆ. ಅಲ್ಲಾ ಮುಸ್ಲಿಮೇತರ ದೇಶಗಳ ವಿರೋಧಿ. ವಿಗ್ರಹ ಹೊಲಸು, ವಿಗ್ರಹ ಆರಾಧಕರನ್ನು ಕೊಲ್ಲಿ, ಅಲ್ಲಾನಿಗಿಂತ ಯಾವುದೇ ದೇವರಿಲ್ಲ ಎಂಬ ವಾಟ್ಸಪ್ ಸಂದೇಶ ಇದೆ ಎಂದು ಸಂದೇಶವನ್ನು ಓದಿ ಹೇಳಿದರು. ಯಾವುದೇ ಆಯಾತ್ ಗೂಗಲ್ ಸರ್ಚ್ ಮಾಡಿ, ಸಂದೇಶ ನೋಡಿ ಎಂದು ಹೇಳಲಾಗಿದೆ. ಯಾರೂ ಕೂಡ ಈ ವಿಚಾರ ಚರ್ಚೆ ಮಾಡಿಲ್ಲ. ಇದು ಸುಳ್ಳಾಗಿದ್ದರೆ, ನಾನು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಸಿಟಿ ರವಿ ಸವಾಲು ಹಾಕಿದರು.