ಮೈಸೂರು/ಬೆಂಗಳೂರು: ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಈಗಾಗಲೇ ವರುಣಾ ಕ್ಷೇತ್ರಕ್ಕೆ ತಾನೇ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಹೈಕಮಾಂಡ್ ನಿರ್ದೇಶನವಷ್ಟೇ ಬಾಕಿ ಇದೆ.
Advertisement
ಈ ನಡುವೆ ಮತ್ತೆ ಸಿದ್ದರಾಮಯ್ಯ ಅವರು ವರುಣಾದಿಂದಲೇ (Varuna Constituency) ಸ್ಪರ್ಧಿಸುವಂತೆ ಬೆಂಬಲಿಗರಿಂದ ಒತ್ತಾಯ ಕೇಳಿಬಂದಿದೆ. ಸಿದ್ದರಾಮಯ್ಯ ಅವರ ಕೊನೆಯ ಸ್ಪರ್ಧೆ ಅದು ಜಿಲ್ಲೆಯಿಂದಲೇ ಆಗಲಿ, ಅದಕ್ಕಾಗಿ ಅವರು ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಲಿ ಎಂದು ಮೈಸೂರು ತಂಡ (Mysuru Team) ದೆಹಲಿ ಅಂಗಳಕ್ಕೆ ಹೋಗಲು ರೆಡಿಯಾಗಿದೆ. ಆದರೆ ಇದು ವೈಯಕ್ತಿಕ ಆಹ್ವಾನದ ಒತ್ತಡವೋ? ಅಥವಾ ಎರಡು ಕ್ಷೇತ್ರದ ಸ್ಪರ್ಧೆಯ ಒತ್ತಡವೋ? ಅನ್ನೋದು ತಿಳಿದಿಲ್ಲ. ಮತ್ತೊಮ್ಮೆ ಸಿದ್ದರಾಮಯ್ಯ ದ್ವಿಕ್ಷೇತ್ರ ಪಾಲಿಟಿಕ್ಸ್‌ಗೆ ಮೈಸೂರು ಟೀಂ ಮುನ್ನುಡಿ ಬರೆಯುತ್ತಾ ಅನ್ನೋದು ಪ್ರಶ್ನೆಯಾಗಿದೆ. ಇದನ್ನೂ ಓದಿ: ಪಾಗಲ್ ಪ್ರೇಮಿ ಕೊಲೆ ಕೇಸ್‌ಗೆ ಟ್ವಿಸ್ಟ್- ಪೊಲೀಸ್ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲು
Advertisement
Advertisement
ಸಿದ್ದರಾಮಯ್ಯ ಅವರು ಕೋಲಾರದಿಂದಾದರೂ ಸ್ಪರ್ಧೆ ಮಾಡಲಿ, ಬೇರೆ ಎಲ್ಲಿಂದಲಾದರೂ ಸ್ಪರ್ಧೆ ಮಾಡಲಿ, ಆದರೆ ತವರು ಜಿಲ್ಲೆ ಮೈಸೂರಿನಿಂದ ಸ್ಪರ್ಧೆ ಮಾಡಲೇಬೇಕು. ಅದರಲ್ಲೂ ಸ್ವಕ್ಷೇತ್ರ ವರುಣಾದಿಂದಲೇ ಸಿದ್ದರಾಮಯ್ಯ ಸ್ಪರ್ಧಿಸಬೇಕು. ಇಂತಹದೊಂದು ಹಕ್ಕೊತ್ತಾಯಕ್ಕೆ ಸಿದ್ದರಾಮಯ್ಯ ಆಪ್ತರ ಬಗಳದ ಮೈಸೂರು ತಂಡ ಮುಂದಾಗಿದೆ. ಕೊನೆಯ ಚುನಾವಣೆ ಕೊನೆಯ ಸ್ಪರ್ಧೆ ವರುಣಾದಿಂದಲೇ ಆಗಲಿ ಎಂದು ಹೈಕಮಾಂಡ್ ಮೊರೆ ಹೋಗಲು ಸಿದ್ದರಾಮಯ್ಯ ಬೆಂಬಲಿಗರ ತಂಡ ಮುಂದಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: `ಕೈ’ಗೆ ಶಾಕ್ – ಚುನಾವಣಾ ರಾಜಕೀಯದಿಂದ ಶಾಸಕ ತನ್ವೀರ್ ಸೇಠ್ ನಿವೃತ್ತಿ
Advertisement
ಸಿದ್ದರಾಮಯ್ಯ ಈಗಾಗಲೇ ಕೋಲಾರ ಸ್ಪರ್ಧೆ ಘೋಷಣೆ ಮಾಡಿದ್ದಾರೆ. ಈ ನಡುವೆ ಟೀಂ ಮೈಸೂರು ತವರು ಜಿಲ್ಲೆಯ ಸೆಂಟಿಮೆಂಟ್ ದಾಳ ಉರುಳಿಸಲು ಮುಂದಾಗಿದೆ. ಇದು ಸಿದ್ದರಾಮಯ್ಯ ಅವರ ಎರಡು ಕ್ಷೇತ್ರದ ಸ್ಪರ್ಧೆಗೆ ವೇದಿಕೆ ಹಾಕಿಕೊಡುತ್ತಾ ಅನ್ನೋ ಲೆಕ್ಕಾಚಾರ ಕೈ ಪಾಳಯದಲ್ಲಿ ಕೇಳಿ ಬರುತ್ತಿದೆ. ಸದ್ಯ ಸಿದ್ದರಾಮಯ್ಯ ಅವರ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.