ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಕೆಲವರಿಗೆ ಬೇಸರ ಆಗಿರುವುದು ಸಹಜ. ಆದರೆ ಪಕ್ಷದ ಹಿತ ನಮ್ಮೆಲ್ಲರ ಮೊದಲ ಆದ್ಯತೆಯಾಗಿರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ಸಮ್ಮಿಶ್ರ ಸರ್ಕಾರ ರಚನೆಯಾಗಿ 6 ತಿಂಗಳಿನಿಂದಲೂ ಮುಂದೂಡಿಕೆಯಲ್ಲಿದ್ದ ಎರಡನೇ ಹಂತದ ಸಚಿವ ಸಂಪುಟ ಬೇಗುದಿ ನಡುವೆ ಕೊನೆಗೂ ವಿಸ್ತರಣೆಯಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸಚಿವ ಸಂಪುಟ ಪುನರ್ ರಚನೆ ವಿಚಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಕೆಲವರಿಗೆ ಬೇಸರ ಆಗಿರುವುದು ಸಹಜ. ಪಕ್ಷಕ್ಕೆ ನಿಷ್ಠರಾಗಿ ಉಳಿದು ತಾಳ್ಮೆಯಿಂದ ಅವಕಾಶಕ್ಕಾಗಿ ಕಾದವರನ್ನು ಕಾಂಗ್ರೆಸ್ ಪಕ್ಷ ಎಂದೂ ನಿರಾಶೆಗೊಳಿಸಿಲ್ಲ. ಪಕ್ಷದ ಹಿತ ನಮ್ಮೆಲ್ಲರ ಮೊದಲ ಆದ್ಯತೆಯಾಗಿರಲಿ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
Advertisement
ಇದಕ್ಕೂ ಮುನ್ನ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹೊಸ ಸಚಿವರಿಗೆ ಶುಭ ಕೋರಿರುವ ಸಿದ್ದರಾಮಯ್ಯ ಅವರು, ಸಮರ್ಥರು, ಅನುಭವಿಗಳು ಮತ್ತು ಸೇವಾನಿಷ್ಠರಾಗಿರುವ ಎಲ್ಲ ನೂತನ ಸಚಿವರು ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೇ ನೂತನ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಸಿ.ಎಸ್ ಶಿವಳ್ಳಿ, ರಹೀಂ ಖಾನ್, ಎಂಟಿಬಿ ನಾಗರಾಜ್, ಪರಮೇಶ್ವರ ನಾಯ್ಕ್, ಇ. ತುಕಾರಾಂ ಮತ್ತು ಆರ್.ಬಿ ತಿಮ್ಮಾಪುರ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದರು.
Advertisement
ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಕೆಲವರಿಗೆ ಬೇಸರ ಆಗಿರುವುದು ಸಹಜ. ಪಕ್ಷಕ್ಕೆ ನಿಷ್ಠರಾಗಿ ಉಳಿದು ತಾಳ್ಮೆಯಿಂದ ಅವಕಾಶಕ್ಕಾಗಿ ಕಾದವರನ್ನು ಕಾಂಗ್ರೆಸ್ ಪಕ್ಷ ಎಂದೂ ನಿರಾಶೆಗೊಳಿಸಿಲ್ಲ.
ಪಕ್ಷದ ಹಿತ ನಮ್ಮೆಲ್ಲರ ಮೊದಲ ಆದ್ಯತೆಯಾಗಿರಲಿ.@INCKarnataka
— Siddaramaiah (@siddaramaiah) December 22, 2018
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv