ಚಿತ್ರದುರ್ಗ: ಕೊರೊನಾ ಮುಂಜಾಗ್ರತೆ ಕ್ರಮವಹಿಸಿಕೊಂಡೇ ಮೇಕೆದಾಟು ಪಾದಯಾತ್ರೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಸ್ಕ್, ಹ್ಯಾಂಡ್ ಗ್ಲೌಸ್ ಧರಿಸಿರುವುದನ್ನು ಕ್ಯಾಮೆರಾ ಮುಂದೆ ತೋರಿಸಿ ಕೊರೊನಾ ಮುಂಜಾಗ್ರತೆ ಕ್ರಮವಹಿಸಿಕೊಂಡೇ ಮೇಕೆದಾಟು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿಯ ಎಲ್ಲಾ ರ‍್ಯಾಲಿಗಳನ್ನು ಬಂದ್ ಮಾಡಿ ನಂತರ ನಮ್ಮ ಪಾದಯಾತ್ರೆ ಬಗ್ಗೆ ಯೋಚಿಸುತ್ತೇವೆ: ಡಿ.ಕೆ.ಸುರೇಶ್
Advertisement
Advertisement
ಮೇಕೆದಾಟು ಹೋರಾಟ ರಾಜಕೀಯ ಅಜೆಂಡಾ ಎಂಬ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಯಾರು? ರೈತ ಸಂಘದವರಾ? ಏನ್ ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.
Advertisement
Advertisement
ಕಾಂಗ್ರೆಸ್ ಪಕ್ಷ ರಾಜಕೀಯ ಪಕ್ಷ ನಿಜ, ರಾಜಕೀಯ ಅಜೆಂಡಾ ಅಲ್ಲ. ನಾನು ಸಿಎಂ ಆಗಿದ್ದಾಗ ಮೇಕೆದಾಟು ಯೋಜನೆ ಡಿಪಿಆರ್ ಸಿದ್ಧತೆಯಾಗಿತ್ತು. ಎರಡೂವರೆ ವರ್ಷದಿಂದ ಬಿಜೆಪಿ ಸರ್ಕಾರ ಮಲಗಿದೆ. ಮೇಕೆದಾಟು ಯೋಜನೆ ಪ್ರಾರಂಭಿಸಲು ಕಾನೂನು ತಡೆ ಇಲ್ಲ. ರಾಜಕೀಯಕ್ಕಾಗಿ ತಮಿಳುನಾಡು ಕ್ಯಾತೆ, ಬಿಜೆಪಿ ಕುಮ್ಮಕ್ಕು ನೀಡುತ್ತಿದೆ. ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಧರಣಿಗೆ ಕುಮ್ಮಕ್ಕು ಇದೆ. ತಮಿಳುನಾಡಲ್ಲಿ ಬಿಜೆಪಿ ಕಟ್ಟಲು ಮೇಕೆದಾಟು ಯೋಜನೆ ನಿರ್ಲಕ್ಷ್ಯಿಸಲಾಗಿದೆ. 144 ಸೆಕ್ಷನ್ ವಿಧಿಸಿದರೆ ನಾವಿಬ್ಬರಾದರೂ ನಡೆಯುತ್ತೇವೆ ಎಂದಿದ್ದಾರೆ.
ವಿಪಕ್ಷದಲ್ಲಿರುವ ಭೀತಿಯಿಂದ ಕಾಂಗ್ರೆಸ್ ನಿಂದ ಮೇಕೆದಾಟು ಹೋರಾಟ ಮಾಡುತ್ತಿದೆ, ಕಾಂಗ್ರೆಸ್‍ಗೆ ಧಮ್ ಇದ್ದರೆ ಹಿಂದೂಗಳ ಮತ ಬೇಡ ಎಂದು ಹೇಳಲಿ ಎಂಬ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ. 60 ವರ್ಷ ದೇಶ ಆಳಿದೆ. ಬಿಜೆಪಿ ಅಧ್ಯಕ್ಷ ಕಟೀಲ್‍ಗೆ ರಾಜಕೀಯವಾಗಿ ಬುದ್ಧಿ ಬೆಳೆದಿಲ್ಲ. ದೇವಸ್ಥಾನಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿವೆ. ದೇವಸ್ಥಾನಗಳನ್ನು ಆರ್‌ಎಸ್‌ಎಸ್‌ಗೆ ಕೊಡಬೇಡಿ ಎಂದಿದ್ದೇವೆ ಅಷ್ಟೇ. ಅದರರ್ಥ ಹಿಂದೂಗಳಿಗೆ ಕೊಡಬೇಡಿ, ಹಿಂದುಗಳಿಗೆ ವಿರೋಧ ಅಂತ ಅಲ್ಲ. ಆರ್‌ಎಸ್‌ಎಸ್‌ನವರಿಗೆ ಕೊಟ್ಟರೆ ಅವರ ಬಳಿ ಕೈಮುಗಿದು ನಿಲ್ಲಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಾವು ರ‍್ಯಾಲಿ ಮಾಡಲ್ಲ, ಸಮಾವೇಶ ಮಾಡಲ್ಲ, ಕಾವೇರಿಗಾಗಿ ನಡೆಯುತ್ತೇವೆ: ಡಿಕೆಶಿ