ಬೆಂಗಳೂರು: ಚುನಾವಣೆ ಹತ್ತಿರವಾಗ್ತಿದೆ. ಹೀಗಾಗಿ ತಮ್ಮ ವಿರುದ್ಧ ರಾಜಕೀಯ ಚಕ್ರವ್ಯೂಹ ರಚಿಸಲು ಮುಂದಾದ ಎದುರಾಳಿಗೆ ಸಿದ್ದರಾಮಯ್ಯ (Siddaramaiah) ಪ್ರತ್ಯಾಸ್ತ್ರ ಹೂಡಿದ್ದಾರೆ ಎನ್ನಲಾಗಿದೆ.
ಎರಡು ಕ್ಷೇತ್ರ, ಎರಡು ಕಡೆ ಸ್ಪರ್ಧೆ.. ಕೊನೆ ಗಳಿಗೆವರೆಗೆ ಸಸ್ಪೆನ್ಸ್ ಕಾಯ್ದುಕೊಳ್ಳಲು ಪ್ಲಾನ್ ಮಾಡಿದ್ದಾರೆ. ಹೊಸ ಕ್ಷೇತ್ರದ ಹುಡುಕಾಟದ ನಡುವೆ ದಿನಕ್ಕೊಂದು ಕ್ಷೇತ್ರಕ್ಕೆ ಸಿದ್ದರಾಮಯ್ಯ ಹೆಸರು ಕೇಳಿ ಬರುತ್ತಿದೆ. ಇದನ್ನೂ ಓದಿ: ದಲಿತರು ಬಿಜೆಪಿ ಜೊತೆಗಲ್ಲ, ನನ್ನ ಹೃದಯದಲ್ಲಿದ್ದಾರೆ: ಸಿ.ಟಿ.ರವಿ
Advertisement
Advertisement
ಈ ಮಧ್ಯೆ ನವೆಂಬರ್ 13ರಂದು ಕೋಲಾರಕ್ಕೆ ಹೋಗಲಿರುವ ಸಿದ್ದರಾಮಯ್ಯ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಅಂದೇ ತಮ್ಮ ಮುಂದಿನ ಕ್ಷೇತ್ರದ ಘೋಷಣೆ ಕೂಡ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಸಿದ್ದರಾಮಯ್ಯ ತಾವು ಸ್ಪರ್ಧೆ ಮಾಡುವ ಕ್ಷೇತ್ರದ ಗುಟ್ಟನ್ನ ಸದ್ಯಕ್ಕೆ ಬಿಟ್ಟುಕೊಡುತ್ತಿಲ್ಲ. ಎದುರಾಳಿಗಳನ್ನು ಕನ್ ಫ್ಯೂಸ್ ಮಾಡಲು ಕೊನೆವರೆಗೆ ಕ್ಷೇತ್ರದ ಕುತೂಹಲ ಕಾಯ್ದಿರಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.
Advertisement
Advertisement
ಸಿದ್ದರಾಮಯ್ಯ ಕ್ಷೇತ್ರದ ಘೋಷಣೆ ಆದರೆ ಸಿದ್ದರಾಮಯ್ಯ ಸುತ್ತ ಎದುರಾಳಿಗಳ ರಾಜಕೀಯ ಚಕ್ರವ್ಯೂಹ ಬಲವಾಗುವ ಸಾಧ್ಯತೆ ಇದೆ. ಆದ್ದರಿಂದ ಕೋಲಾರ ಹಾಗೂ ವರುಣಾ ಜೊತೆಗೆ ಇನ್ನೊಂದು ಯಾವುದಾದರು ಕ್ಷೇತ್ರದ ಹೆಸರನ್ನ ಮುನ್ನಲೆಗೆ ತರುವುದು. ಜೊತೆಗೆ ಕೋಲಾರ (Kolar) ಹಾಗೂ ವರುಣಾ (Varuna) ಎರಡೂ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು. ಹೀಗೆ ಚುನಾವಣೆವರೆಗೆ ಒಂದಲ್ಲ ಒಂದು ಕ್ಷೇತ್ರದ ಹೆಸರನ್ನ ಹಾಗೂ ವದಂತಿಯನ್ನ ಮುನ್ನಲೆಗೆ ತರುವುದು ಬೆಂಬಲಿಗರ ಲೆಕ್ಕಾಚಾರ ಎನ್ನಲಾಗುತ್ತಿದೆ.