ಬೆಂಗಳೂರು: ನನ್ನ ಹಾಗೂ ಸಿದ್ದರಾಮಯ್ಯ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನಮ್ಮಲ್ಲಿ ನಾವು ಮಾತನಾಡಿದ್ರೆ ಏನು ಆಗಲ್ಲ. ಎಲ್ಲಾ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನೀವೇ ಏನೇನೋ ಕಲ್ಪನೆ ಮಾಡಿಕೊಂಡು ಹಾಕ್ತೀರಾ. ಆದ್ರೆ ವಾಸ್ತವ ನೋಡಿದರೆ ಬೇರೆ ಇರುತ್ತೆ. ಜನಾರ್ದನ ಹೋಟೆಲ್ ಗೆ ಭೇಟಿ ನೀಡುತ್ತಿರುತ್ತೇವೆ. ಹಾಗೆಯೇ ಕೇರಳ ಹೋಟೆಲ್ ಮತ್ತೊಂದು ಹೋಟೆಲ್ ಗೂ ಹೋಗುತ್ತೇವೆ. ನಿನ್ನೆ ಸಿದ್ದರಾಮಯ್ಯನವರೂ ಜೊತೆಯಾಗಿದ್ರು ಅಷ್ಟೇ. ನಾವು ಅಲ್ಲಿ ಏನೇನೂ ಮಾತನಾಡಿಲ್ಲ. ಸುಮ್ಮನೆ ಸುದ್ದಿ ಮಾಡಿದರೆ ಬೇರೆ ಅರ್ಥ ಹೋಗುತ್ತೆ. ನಮ್ಮ ನಮ್ಮಲ್ಲೇ ಮಿಸ್ ಅಂಡರ್ ಸ್ಟಾಂಡಿಂಗ್ ಆಗುತ್ತೆ ಎಂದರು.
Advertisement
Advertisement
ಕೆಪಿಸಿಸಿ ಅಧ್ಯಕ್ಷರ ನೇಮಕ ಹೈಕಮಾಂಡ್ ಮಾಡುತ್ತೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಇಲ್ಲಿ ಬೇರೆ ಯಾವ ಚರ್ಚೆಯೂ ಅನ್ವಯವಾಗಲ್ಲ. ಸಿದ್ದರಾಮಯ್ಯ ಭೇಟಿಗೆ ವಿಶೇಷ ಅರ್ಥ ಬೇಕಿಲ್ಲ. ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಯಾರು ಏನೂ ಆತಂಕಪಡುವುದು ಬೇಡ. ಸೋನಿಯಾ ಗಾಂಧಿಯವರು ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ತಾರೆ. ಯಾರೂ ಪಕ್ಷಕ್ಕಿಂತ ಮೇಲಿಲ್ಲ. ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಸ್ಪಷ್ಟಪಡಿಸಿದರು.