ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಜೆಪಿಯಲ್ಲಿಗ ಸಂಪುಟ ವಿಸ್ತರಣೆ ಹಗ್ಗಜಗ್ಗಾಟ ಆಗುತ್ತಿದ್ದರೆ, ಕಾಂಗ್ರೆಸ್‍ನಲ್ಲಿ ಕೆಪಿಸಿಸಿ, ಸಿಎಲ್‍ಪಿ, ವಿಪಕ್ಷ ನಾಯಕನ ಕಸರತ್ತು ಮುಗಿಯೋ ಲಕ್ಷಣಗಳೇ ಕಾಣುತ್ತಿಲ್ಲ. ಕಾಂಗ್ರೆಸ್‍ನಲ್ಲಿ ಬಣಗಳ ಗುದ್ದಾಟ ಜೋರಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರ ಜತೆ ಸಾಫ್ಟ್ ಆಗೋದಕ್ಕೆ ಶುರು ಮಾಡಿದ್ದಾರೆ. ಅದರ ಫಲವೇ ಬೆಂಗಳೂರಿನಲ್ಲಿ ಖರ್ಗೆ-ಸಿದ್ದರಾಮಯ್ಯ ಇಬ್ಬರೂ ಒಟ್ಟಿಗೆ ಉಪಹಾರ ಸೇವಿಸಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
Advertisement
ಬೆಂಗಳೂರಿನ ಜನಾರ್ದನ ಹೋಟೆಲ್‍ನಲ್ಲಿ ಉಭಯ ನಾಯಕರು ಉಪಹಾರ ಸೇವಿಸಿದ್ದಾರೆ. ಕೆಪಿಸಿಸಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಹೋಟೆಲ್‍ಗೆ ತೆರಳಿದ್ದಾರೆ. ಉಪಹಾರ ನೆಪದಲ್ಲಿ ಕಾಂಗ್ರೆಸ್‍ನ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ರು ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಹೊಂದಾಣಿಕೆ ರಾಜಕೀಯದ ತಂತ್ರ ತೋರಿದ್ರಾ ಸಿದ್ದರಾಮಯ್ಯ ಅನ್ನೋ ಚರ್ಚೆ ಜೋರಾಗ್ತಿದೆ. ಮೂಲ ಕಾಂಗ್ರೆಸಿಗರ ವಿಶ್ವಾಸ ಪಡೆಯಲು ದೊಡ್ಡ ನಾಯಕನ ಬಳಿಯೇ ಸಿದ್ದು ದಾಳ ಉರುಳಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.
Advertisement
Advertisement
ಮಲ್ಲಿಕಾರ್ಜುನ ಖರ್ಗೆ ಜತೆ ಮಾತುಕತೆ ವೇಳೆ ವಿಪಕ್ಷ ನಾಯಕರಾಗಲು ಅಡ್ಡಿಯಾಗಿರುವ ಕಾಂಗ್ರೆಸ್ ಮಹಾರಾಷ್ಟ್ರ ಮಾದರಿ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಿದರು ಎನ್ನಲಾಗಿದೆ. ಸಿಎಲ್.ಪಿ, ಎಲ್.ಓ.ಪಿ ಪ್ರತ್ಯೇಕ ಬೇಡ. ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿ ಬೇಡ. ಸಿಎಲ್.ಪಿ ನಾಯಕರೇ ವಿಪಕ್ಷ ನಾಯರನ್ನಾಗಿ ಮುಂದುವರಿಸುವ ಬಗ್ಗೆ ಹೈಕಮಾಂಡ್ ಗೆ ಮನವರಿಕೆ ಮಾಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ರು ಎನ್ನಲಾಗಿದೆ. ಅಷ್ಟೇ ಅಲ್ಲ ಕಾರ್ಯಾಧ್ಯಕ್ಷ ಸ್ಥಾನಗಳ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿರುವ ಸಿದ್ದರಾಮಯ್ಯ, ನೀವು ರಾಜ್ಯಸಭೆಗೆ ಹೋಗಬೇಕು ಬಿಜೆಪಿಯ ವಿರುದ್ಧ ಹೊರಾಡಲು ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಗೆ ನಿಮ್ಮ ಅಗತ್ಯತೆ ಇದೆ ಎಂದು ಖರ್ಗೆಗೆ ಸಲಹೆ ನೀಡಿದ್ರು ಎನ್ನಲಾಗಿದೆ. ಇನ್ನೊಂದೆಡೆ ಮೂಲ ವಲಸಿಗ ಬಣದ ಇಬ್ಬರು ನಾಯಕರ ಉಪಹಾರ ಪಾಲಿಟಿಕ್ಸ್ ನಿಂದ ಡಿ.ಕೆ ಶಿವಕುಮಾರ್ ಅಧ್ಯಕ್ಷರಾಗಲು ಇಬ್ಬರು ನಾಯಕರ ಮಾತುಕತೆಯಿಂದ ಅಡೆತಡೆ ಎದುರಾಗುತ್ತಾ? ಡಿಕೆಶಿಗೆ ಸಿದ್ದರಾಮಯ್ಯ ಚೆಕ್ ಮೇಟ್ ಇಟ್ಟರಾ.? ಖರ್ಗೆ ಅಷ್ಟು ಸುಲಭವಾಗಿ ಸಿದ್ದರಾಮಯ್ಯ ಸಲಹೆ ಪರಿಗಣಿಸ್ತಾರಾ ಅನ್ನೋ ಕುತೂಹಲ ಹುಟ್ಟುಹಾಕಿದೆ.