ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ದಿನಗಳ ಯುರೋಪ್ ಪ್ರವಾಸಕ್ಕೆ ಇಂದು ತೆರಳಿದ್ದಾರೆ. ಸಿದ್ದರಾಮಯ್ಯ ಜೊತೆ ಪುತ್ರ ಯತೀಂದ್ರ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಸೇರಿದಂತೆ ಕುಟುಂಬದ ಸದಸ್ಯರು ಯುರೋಪ್ ರಾಷ್ಟ್ರಗಳ ಪ್ರವಾಸಕ್ಕೆ ತೆರಳಿದ್ದಾರೆ.
ಸಿದ್ದರಾಮಯ್ಯ ವಿದೇಶಕ್ಕೆ ತೆರಳಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿದ್ದರಾಮಯ್ಯ ವಿದೇಶಕ್ಕೆ ತೆರಳುವ ವೇಳೆ ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ನಿವಾಸದ ಎದುರು ಸೇರಿದ್ದರು.
Advertisement
Advertisement
ಸಚಿವ ಜಮೀರ್ ಅಹಮದ್ ಸೇರಿದಂತೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸಂಪುಟ ಸದಸ್ಯರು ಸಿದ್ದರಾಮಯ್ಯ ತೆರಳುವ ವೇಳೆ ನಿವಾಸದ ಬಳಿ ಕಾಣಿಸಿಕೊಂಡರು. ಅಲ್ಲದೇ ಮೈಸೂರು ಜಿಲ್ಲೆಯ ಅಪಾರ ಅಭಿಮಾನಿಗಳು ಕೂಡ ಈ ವೇಳೆ ಹಾಜರಿದ್ದರು. ಇಂದಿನಿಂದ 10 ದಿನಗಳ ಕಾಲ ಯುರೋಪ್ ರಾಷ್ಟ್ರ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಅವರ ಪ್ರವಾಸದ ಹಿಂದೆ ಕೆಲವು ರಾಜಕೀಯ ಊಹಾಪೋಹಗಳು ಈಗಾಗಲೇ ಕೇಳಿಬಂದಿವೆ.
Advertisement
ಈ ವೇಳೆ ಮಾಜಿ ಸಚಿವ ಹೆಚ್ ಆಂಜನೇಯ ಮಾತನಾಡಿ, ವಿದೇಶ ಪ್ರವಾಸ ಮಾಡಬೇಕು ಅನ್ನೋದು ಎಲ್ಲರ ಆಸೆಯಾಗಿದೆ. ಇಂದು ಸಿದ್ದರಾಮಯ್ಯ ಅವರಿಗೆ ಶುಭಕೋರೋದಕ್ಕೆ ಬಂದಿದ್ದೇವೆ. ಅವರು ಐದು ವರ್ಷಗಳ ಕಾಲ ಸುಭದ್ರ ಆಡಳಿತ ನೀಡಿದ್ದಾರೆ. 5 ವರ್ಷಗಳ ಕಾಲ ದಣಿವರಿಯದೇ ದುಡಿದ್ರು. ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆದ್ರೆ ಅವರು ಕುಂದಿರಲಿಲ್ಲ. ಈಗ ಅವರು ವಿದೇಶಕ್ಕೆ ಹೋಗ್ತಿದ್ದಾರೆ ಸುಗಮವಾಗಿ ಹೋಗಿಬರಲಿ ಅಂತ ಶೂಭಹಾರೈಸಿದ್ರು.
Advertisement
ಮಾಜಿ ಸಿಎಂಗೆ ಶುಭ ಹಾರೈಸಿದ್ದೇವೆ. ಸೂಟು, ಬೂಟ್ ನಲ್ಲಿ ಅವರನ್ನ ನೋಡೋದಕ್ಕೆ ಖುಷಿಯಾಗುತ್ತೆ. ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ, ಹಿರೇಕೆರೂರುನಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವತ್ತ ಕಾಂಗ್ರೆಸ್ ದಾಪುಗಾಲಿಟ್ಟಿದೆ. ಸಂಪುಟ ವಿಸ್ತರಣೆ ವೇಳೆ, ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ ಅಂತ ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಇಂದು ನಾನು ವಿದೇಶ ಪ್ರವಾಸಕ್ಕೆ ಹೊರಟ ಸಂದರ್ಭದಲ್ಲಿ ಹಾಲಿ ಮತ್ತು ಮಾಜಿ ಸಚಿವರು, ಶಾಸಕರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿ ಶುಭ ಹಾರೈಸಿದರು. pic.twitter.com/00Oof5RbTV
— Siddaramaiah (@siddaramaiah) September 3, 2018