ಹಾವೇರಿ: ಲಂಬಾಣಿಗರಿಗೆ ಹಕ್ಕು ಪತ್ರ ಕೊಡಲು ಪ್ರಧಾನಿ ಬಂದಿದ್ದಾರೆ. ಲಂಬಾಣಿಗರೇ ಹಕ್ಕು ಪತ್ರ ಕೊಟ್ಟಿದ್ದು ಯಾರು..? ಕಾಗೋಡು ತಿಮ್ಮಪ್ಪ (Kagodu Thimmappa) ಕಂದಾಯ ಮಂತ್ರಿ, ಕೋಳಿವಾಡರು ಸ್ಪೀಕರ್ ಆಗಿದ್ದರು. ಆಗ ಲಂಬಾಣಿ ತಾಂಡಾಗಳಿಗೆ ನ್ಯಾಯ ಕೊಟ್ಟಿದ್ದೆವು. ಗೊಲ್ಲರಹಟ್ಟಿ, ತಾಂಡಾಗಳು, ನಾಯಕರ ಹಟ್ಟಿಗಳಿಗೆ ಕಂದಾಯ ಗ್ರಾಮ ಮಾಡಿದ್ದೆವು. ಈಗ ಲಂಬಾಣಿ ಜನರ ವೋಟಿಗಾಗಿ ಬಂದಿದ್ದಾರೆ ಎಂದು ಮಾಜಿ ಸಿ.ಎಂ ಸಿದ್ದರಾಮಯ್ಯ (Siddaramaiah) ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಹಾವೇರಿ ಮುನ್ಸಿಪಲ್ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವಾಲಾಲ್ ಲಂಬಾಣಿ ಜನರ ಆರಾಧ್ಯ ದೈವ. ಅವರ ಜಯಂತಿ ಮಾಡಿದ್ದು ನಮ್ಮ ಸರ್ಕಾರ. ಸೂರಗೊಂಡನಕೊಪ್ಪ ಅಭಿವೃದ್ಧಿಗೆ 130 ಕೋಟಿ ಕೊಟ್ಟಿದ್ದು ನಮ್ಮ ಸರ್ಕಾರ. ಬೊಮ್ಮಾಯಿಯವರ ಡೋಂಗಿತನ ನಡೆಯೋದಿಲ್ಲ. ಈಶ್ವರಪ್ಪ ಪೆದ್ದ ಬಿಡಪ್ಪ, ಮೆದುಳು, ನಾಲಿಗೆಗೆ ಲಿಂಕ್ ತಪ್ಪಿದೆ. ಅವನ ಬಗ್ಗೆ ಏನು ಮಾತಾಡ್ತೀಯಾ ಬಿಡಪ್ಪ. ಸಂತೋಷ್ ಪಾಟೀಲ್ (santhosh Patil) ಲಂಚ ಕೊಡಲು ಆಗದೆ ಸಾಲಗಾರರ ಕಾಟ ಜಾಸ್ತಿಯಾದಾಗ ಆತ್ಮಹತ್ಯೆ ಮಾಡಿಕೊಂಡರು. ಆಗ ನನ್ನ ಸಾವಿಗೆ ಈಶ್ವರಪ್ಪ ಕಾರಣ ಅಂದರು. ಇದಕ್ಕಿಂತ ಸಾಕ್ಷ್ಯ ಬೇಕಾ ಬೊಮ್ಮಾಯಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದುಗಾಗಿ ಕೋಲಾರದಲ್ಲಿ ಮನೆ, ಕಚೇರಿ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರು
Advertisement
Advertisement
ಮೂರೇ ತಿಂಗಳಲ್ಲಿ ಬಿ ರಿಪೋರ್ಟ್ ಹಾಕಿಸಿದರು. ವಿವಿಧ ಕಾಮಾಗಾರಿ ಮಾಡಿದ ಗುತ್ತಿಗೆದಾರಿಗೆ ನೀಡುವ ರಾಜ್ಯ ಸರ್ಕಾರ 25 ಸಾವಿರ ಕೋಟಿ ಬಿಲ್ ಪೆಂಡಿಂಗ್ ಇಟ್ಟುಕೊಂಡಿದ್ದಾರೆ. ನನ್ನ ಪ್ರಕಾರ ಇನ್ನೂ ಅದಕ್ಕಿಂತ ಜಾಸ್ತಿ ಇದೆ. ಲಂಚ..ಲಂಚ…ಲಂಚ ಈ ಸರ್ಕಾರ ಇರಬೇಕೋ ಬೇಡ್ವೋ ಅನ್ನೋ ತೀರ್ಮಾನ ಮಾಡಿ. ಬಿಜೆಪಿ ಸರ್ಕಾರ ಇದ್ದರೆ, ಮತ್ತೆ ಬಂದರೆ ರಾಜ್ಯ ಉಳಿಯೋದಿಲ್ಲ. ಬಿಜೆಪಿ ಕಿತ್ತೊಗೆದು ಕಾಂಗ್ರೆಸ್ ತನ್ನಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k