ಬೆಂಗಳೂರು: ಅಂಡರ್ ಪಾಸ್‍ನಲ್ಲಿ ನೀರು ನಿಂತುಕೊಳ್ಳುತ್ತೆ ಅಂದಾಗ ಬ್ಯಾರಿಕೇಡ್ ಹಾಕಬೇಕಿತ್ತು. ಯಾಕೆ ಬ್ಯಾರಿಕೇಡ್ ಹಾಕಿಲ್ಲ ಎಂದು ನೂತನ ಸಿಎಂ ಸಿದ್ದರಾಮಯ್ಯ (Siddaramaiah) ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಂಡರ್ ಪಾಸ್ (Underpass) ದುರಂತ ಸಂಬಂಧ ಸಿಎಂ ಅವರು ತಮ್ಮ ನಿವಾಸಕ್ಕೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ (Tushar Giri Nath) ಅವರನ್ನು ಕರೆಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ಆಯುಕ್ತರಿಂದ ಮಾಹಿತಿ ಪಡೆದಿದ್ದಾರೆ. ಮಳೆ ಅವಾಂತರ ಎಲ್ಲೆಲ್ಲಿ ಆಗಿದೆ ಅಲ್ಲಿ ಅಧಿಕಾರಿಗಳು ಕೂಡಲೇ ತೆರಳಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಇದೇ ವೇಳೆ ಸಿಎಂ ಸೂಚಿಸಿದರು. ಇದನ್ನೂ ಓದಿ: ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ
ಅಧಿಕಾರಿಗಳಿಗೆ ಸಿಎಂ ಸೂಚನೆ ಏನು..?: ಎಲ್ಲೆಲ್ಲಿ ಮರ ಬಿದ್ದಿದೆ ಅದನ್ನ ತಕ್ಷಣವೇ ತೆರವು ಮಾಡಿ. ತಕ್ಷಣವೇ ಟ್ರಾಫಿಕ್ ಕ್ಲಿಯರ್ ಮಾಡಲಿ ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಿದರು. ನೀರು ನುಗ್ಗಿರೋ ಮನೆಗಳಿಗೆ ಕೂಡಲೇ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಪರಿಹಾರ ಮಾಡಬೇಕು. ವಸತಿ ಸಮಸ್ಯೆ ಆಗಿರೋರಿಗೆ ತಕ್ಷಣವೇ ತಾತ್ಕಾಲಿಕ ವ್ಯವಸ್ಥೆ ಮಾಡಿ. ಹೂಳು ತುಂಬಿರೋ ರಾಜಕಾಲುವೆಗಳನ್ನ ಹುಡುಕಿ ಕೂಡಲೇ ಹೂಳೆತ್ತಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ.
ಯಾವ ಭಾಗದಿಂದ ದೂರು ಬರುತ್ತೆ ತಕ್ಷಣವೇ ಅಲ್ಲಿಗೆ ತೆರಳಿ ಸಮಸ್ಯೆ ಪರಿಹಾರ ಮಾಡಿ. ಬಿಬಿಎಂಪಿ ಸಹಾಯವಾಣಿ ಆಕ್ಟೀವ್ ಆಗಿ ಇರುವಂತೆ ನೋಡಿಕೊಳ್ಳಿ. ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಾರದು ಎಂದು ಬಿಬಿಎಂಪಿ ಆಯುಕ್ತ, ನಗರ ಪೆÇಲೀಸ್ ಆಯುಕ್ತರಿಗೆ ಸಿಎಂ ಸೂಚನೆ ನೀಡಿದರು.