ಬೆಂಗಳೂರು: ಬಿಜೆಪಿ ಶಾಸಕ ಯಡಿಯೂರಪ್ಪ (BS Yediyurappa) ಆಪ್ತ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಮಗನ ಮನೆಯಲ್ಲಿ 8 ಕೋಟಿ ಸಿಕ್ಕಿದೆ. ಹಾಗಾದರೆ ಎಷ್ಟು ಪ್ರಮಾಣದಲ್ಲಿ ಲಂಚ ಹೊಡೆದಿರಬಹುದು. ಇವಾಗ 40% ಕಮಿಷನ್ ಸಾಬೀತು ಆಗಿದೆ. ಸಿಎಂ ಬೊಮ್ಮಾಯಿಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ನೀಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಒತ್ತಾಯಿಸಿದ್ದಾರೆ.
Advertisement
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಇದು 40% ಕಮಿಷನ್ ಸರ್ಕಾರ ಎಂದು ಸಾಬೀತಾಗಿದೆ. ಇನ್ನೇನು ದಾಖಲೆಗಳು ಬೇಕು ಎಂದು ಪ್ರಶ್ನಿಸಿದರು. ಮಾಡಾಳ್ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಬಂಧನ ಮಾಡಬೇಕು. ಅವರು ಬೆಂಗಳೂರಿನಲ್ಲೇ ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯ ನಾಲ್ಕೈದು ಶಾಸಕರಿಗೆ ಟಿಕೆಟ್ ಇಲ್ಲ- ಆಕಾಂಕ್ಷಿಗಳಿಗೆ ಬಿಎಸ್‍ವೈ ಶಾಕ್
Advertisement
Advertisement
ಭ್ರಷ್ಟಾಚಾರದ ದಾಖಲೆ ಸಿಎಂ ಬೊಮ್ಮಾಯಿ ಕೇಳ್ತಿದ್ದಾರೆ. ಜನರಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಭ್ರಷ್ಟಾಚಾರ ರಕ್ಷಣೆಗೆ ಎಸಿಬಿ ರಚನೆ ಮಾಡಿದ್ರು ಎನ್ನುತ್ತಾರೆ. ಕನಿಷ್ಠ ಕಾನೂನು ಜ್ಞಾನ ಇದ್ದವರು ಹೀಗೆ ಮಾತನಾಡಲ್ಲ. ನಾವು ಲೋಕಾಯುಕ್ತ ಮುಚ್ಚುವ ಕೆಲಸ ಮಾಡಿಲ್ಲ. ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆದ ಕಾರಣ ಎಸಿಬಿ ರಚನೆ ಮಾಡಿದ್ದೆವು. ಎಸಿಬಿ ರದ್ದು ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ರದ್ದು ಮಾಡಿಲ್ಲ. ಬಿಜೆಪಿ (BJP) ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಎಸಿಬಿ ಲೋಕಾಯುಕ್ತ ಇದೆ. ಅಲ್ಲಿ ಏಕೆ ಎಸಿಬಿ ರದ್ದು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
ಕೆಪಿಸಿಸಿ ಅಧ್ಯಕ್ಷರಾದ @DKShivakumar ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ @siddaramaiah ಅವರ ಸಮ್ಮುಖದಲ್ಲಿ ಬಿಜೆಪಿಯ ಮಾಜಿ ಶಾಸಕರಾದ ಕೊಳ್ಳೇಗಾಲದ ನಂಜುಂಡಸ್ವಾಮಿ, ಬಿಜಾಪುರದ ಮನೋಹರ್ ಐನಾಪುರ ಹಾಗೂ ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಅವರು ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. pic.twitter.com/H9VMTvoLrF
— Karnataka Congress (@INCKarnataka) March 7, 2023
ಬಿಜೆಪಿ ಮೇಲ್ಜಾತಿಯವರ ಪಕ್ಷ ಶ್ರೀಮಂತ ವರ್ಗದವರ ಪಕ್ಷ. ಕೆಳ ವರ್ಗದವರ ಬಗ್ಗೆ ನಾಡಿನ ಅಭಿವೃದ್ಧಿ ಬಗ್ಗೆ ಬಿಜೆಪಿ ಚಿಂತನೆ ಮಾಡಲ್ಲ. ದಲಿತರು ಬಿಜೆಪಿ ಕಡೆ ತಿರುಗಿಯೂ ನೋಡಬಾರದು. ತಳ ಸಮಯದಾಯದವರು ಬಿಜೆಪಿಯವರನ್ನು ತಲೆ ಎತ್ತಿಯೂ ನೋಡಬಾರದು. ಬಿಜೆಪಿಯವರು ಮನುವಾದಿಗಳು. ಸ್ವಾಮಿ ವಿವೇಕಾನಂದ ಹೇಳಿದ್ದಾರೆ ಮನುವಾದಿಗಳು ಹಾಗೂ ಪುರೋಹಿತ ಶಾಹಿ ವ್ಯವಸ್ಥೆ ಈ ದೇಶಕ್ಕೆ ಶಾಪ ಎಂದಿದ್ದಾರೆ. ನೀವೆಲ್ಲಾ ಬಿಜೆಪಿ ಬಿಟ್ಟು ಒಳ್ಳೆ ಕೆಲಸ ಮಾಡಿದ್ದೀರಿ ಎಂದರು.
ಪಕ್ಷ ಸೇರ್ಪಡೆ ಆದ ಮೂವರು ದಲಿತ ಸಮುದಾಯದವರು ನೀವು ಬಿಜೆಪಿ ಬಿಟ್ಟು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಹೇಳುತ್ತಾ ಪಕ್ಷದ ಬಾವುಟ ನೀಡುವ ಮೂಲಕ ಇಬ್ಬರು ಮಾಜಿ ಶಾಸಕರು ಹಾಗೂ ಮಾಜಿ ಮೇಯರನ್ನು ಕಾಂಗ್ರೆಸ್ ನಾಯಕರು ಇಂದು ಪಕ್ಷಕ್ಕೆ ಬರಮಾಡಿಕೊಂಡರು.