– ಬೊಮ್ಮಾಯಿ ಮಾತ್ರ ಹಿಂದೂ ಅಲ್ಲ ನಾನೂ ಕೂಡ ಹಿಂದೂ
ತುಮಕೂರು: ಟಿಪ್ಪು ಓರ್ವ ದೇಶ ಭಕ್ತ. ಅವರು ಮತಾಂಧ ಆಗಿದ್ದರೆ ಹಿಂದೂ ದೇವಾಲಯಗಳು ಉಳೀತಿತ್ತಾ? ನಮಗೆ ಗಾಂಧಿ ಹೇಳಿರುವ ಹಿಂದೂವಾದ ಬೇಕು. ಗೋಡ್ಸೆ ಹೇಳಿರುವ ಹಿಂದೂವಾದ ಬೇಡ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ನಡೆದ ಮಡಿವಾಳ-ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಅಲ್ಪಸಂಖ್ಯಾತರ ಪರ ಮಾತಾಡಿದ್ರೆ ಈ ಸಂಘ ಪರಿವಾರವರು ನನಗೆ ನೀನೇನು ಮುಸ್ಲಿಂ ಜಾತಿಗೆ ಹುಟ್ಟಿದವನಾ? ಎಂದು ಕೇಳುತ್ತಾರೆ. ಧರ್ಮ ಧರ್ಮಗಳ ನಡುವೆ ಗೋಡೆ ಕಟ್ಟುವ ಕೆಲಸ ಸಂಘಪರಿವಾರ ಮಾಡುತ್ತಿದೆ. ಬಸವರಾಜ ಬೊಮ್ಮಾಯಿ ಮಾತ್ರ ಹಿಂದೂ ಅಲ್ಲ. ನಾನೂ ಕೂಡ ಹಿಂದೂ, ನನ್ನ ಅಪ್ಪ ಕೂಡ ಹಿಂದೂ. ಗೋಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ ಕೂಡ ತಿನ್ನುತ್ತಾರೆ. ಹಿಂದೆ ಗೋಮಾಂಸ ತಿಂತೀರಾ ಎಂದು ನನಗೆ ಕೇಳಿದ್ದರು. ಆ ವೇಳೆ ಆಹಾರ ನಮ್ಮ ಹಕ್ಕು ಅದನ್ನು ಕೇಳುವರು ನೀವ್ಯಾರು ಅಂತಾ ಕೇಳಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಅಭಿಮಾನಿ ಮಗುವಿಗೆ ತಮ್ಮದೇ ಹೆಸರನ್ನಿಟ್ಟ ಸಿದ್ದರಾಮಯ್ಯ
ಇದೇ ವೇಳೆ, ಬಿಡ್ ಲಾಡನ್ ಹೇಳಿರುವ ಇಸ್ಲಾಂ ಧರ್ಮ ಬೇಡ. ಪೈಗಂಬರ್ ಹೇಳಿರುವ ಇಸ್ಲಾಂ ಬೇಕು. ಆರ್‌ಎಸ್‌ಎಸ್‌ನವರು ಮುಸ್ಲಿಮರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುತ್ತಿದ್ದಾರೆ. 1 ಲಕ್ಷದ 60 ಸಾವಿರ ಮುಸ್ಲಿಂ ಮತ ತುಮಕೂರು ಜಿಲ್ಲೆಯಲ್ಲಿ ಡಿಲೀಟ್ ಆಗಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 20 ಸಾವಿರ ಮುಸ್ಲಿಂ ಮತ ಕಾಣೆಯಾಗಿದೆ ಅಂತ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್ ಭಾವಚಿತ್ರವಿರುವ ಫ್ಲೆಕ್ಸ್ ಹರಿದು ಅಪಮಾನ