ಮಂಗಳೂರು: ಹಿಂದೂಗಳ ನರಮೇಧಕ್ಕೆ ಮುಖ್ಯ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರಿಗೆ ಪ್ರವೀಣ್ ಹೆಸರು ಎತ್ತುವ ಯೋಗ್ಯತೆ ಇಲ್ಲ ಎಂದು ಬಿಜೆಪಿ ಕಾರ್ಯಕರ್ತ ಚಂದ್ರಹಾಸ್ ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಳಿಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ. ಇಷ್ಟೆಲ್ಲಾ ಹಿಂದೂಗಳ ನರಮೇಧಕ್ಕೆ ಅವರೇ ಕಾರಣ. ನಾವು ಅವರ ಪ್ರಾಯಕ್ಕೆ ಗೌರವ ಕೊಡುತ್ತೇವೆ ಹೊರತು ಅವರ ಚಿಂತನೆಗೆ ಅಲ್ಲ ಎಂದರು.
Advertisement
Advertisement
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪ್ರವೀಣ್ ಜೊತೆಗಿದ್ದರು ನಿಜ. ಅವರು ಚಾಲಕ ವೃತ್ತಿ ಮಾಡುತ್ತಿದ್ದುದೂ ನಿಜ. ಆದರೆ ಅಪರೂಪಕ್ಕೊಮ್ಮೆ ಕಟೀಲ್ ಅವರ ಚಾಲಕರಾಗಿ ಕೆಲಸ ಮಾಡಿದ್ದರು. ಕಟೀಲ್ ಅವರ ಡ್ರೈವರ್‌ಗೆ ರಜೆ ಬೇಕಿದ್ದ ಸಂದರ್ಭ ಪ್ರವೀಣ್ ಹೋಗುತ್ತಿದ್ದರು. ಅವರು ಪರ್ಮನೆಂಟ್ ಡ್ರೈವರ್ ಆಗಿರಲಿಲ್ಲ. ಆದರೆ ಸಿದ್ದರಾಮಯ್ಯ ಇದನ್ನೇ ನೆಪವಾಗಿಟ್ಟುಕೊಂಡು ಪ್ರವೀಣ್ ಅವರು ನಳಿನ್ ಕುಮಾರ್ ಅವರ ಚಾಲಕ ಕೆಲಸ ಬಿಟ್ಟು ಬಂದಿದ್ದರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಗಳೂರಿನಲ್ಲಿ ರಾಜಕೀಯಕ್ಕಾಗಿ ಕೊಲೆ ನಡೆದಿವೆ: ಮಾಧುಸ್ವಾಮಿ
Advertisement
ನಾವು ಪಕ್ಷದ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇವೆ, ನಾವು ಸಿದ್ದರಾಮಯ್ಯರಂತೆ ಪೇಮೆಂಟ್ ಕಾರ್ಯಕರ್ತರಲ್ಲ. ನಾವು ಬಿಜೆಪಿಯ ಪರ್ಮನೆಂಟ್ ಕಾರ್ಯಕರ್ತರು. ನಮ್ಮ ನಾಯಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ರಾಜೀನಾಮೆ ಕೊಟ್ಟಿದ್ದೇವೆಯೇ ಹೊರತು ಬಿಜೆಪಿಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
ನಾನು ಹಾಗೂ ಪ್ರವೀಣ್ ಒಟ್ಟಿಗೆ ಇದ್ದವರು. ನನಗೂ ಕೆಲವೊಮ್ಮೆ ಜೀವ ಬೆದರಿಕೆಗಳು ಬಂದಿದ್ದವು. ಆ ಸಂದರ್ಭ ಅವರೇ ನನಗೆ ಧೈರ್ಯ ತುಂಬುತ್ತಿದ್ದರು. ಆದರೆ ಇಂದು ಅವರಿಗೆ ಈ ಗತಿ ಬಂದಿದೆ. ಸರ್ಕಾರದಿಂದ ಹೀಗೆಲ್ಲಾ ಆಯ್ತಲ್ಲಾ ಎಂಬ ನೋವು ಎಲ್ಲಾ ಕಾರ್ಯಕರ್ತರಿಗೂ ಇದೆ. ಈ ಕಾರಣ ರಾಜೀನಾಮೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ: ರೇಣುಕಾಚಾರ್ಯ
ನಮಗೆ ಕಳೆದ 6 ತಿಂಗಳಿನಿಂದಲೂ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನಾವು ಆವಾಗಿಂದಲೇ ನೀಡುತ್ತಿದ್ದೆವು. ಆದರೆ ಅವರು ಸರಿಯಾದ ಕ್ರಮವನ್ನು ತೆಗೆದುಕೊಂಡಿಲ್ಲ. ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಗೂ ಕರೆ ಮಾಡಿ ಈ ಬಗ್ಗೆ ಹೇಳಲು ಪ್ರಯತ್ನ ಪಟ್ಟಿದ್ದೆವು. ಆದರೆ ಅವರು ನಮ್ಮ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ ಎಂದರು.