Bengaluru CityKarnatakaLatestLeading NewsMain Post

ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ: ಬಿಜೆಪಿ ಕಿಡಿ

ಬೆಂಗಳೂರು: ಟಿಪ್ಪು ವರ್ಸಸ್‌ ಸಾವರ್ಕರ್‌ ವಿವಾದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ ಎಂದು ಕಿಡಿಕಾರಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ಟಿಪ್ಪುವಿನ ಫೋಟೋ ಎಲ್ಲಿ ಬೇಕಾದರೂ ಹಾಕಬಹುದು. ಆದರೆ ಸಾವರ್ಕರ್ ಫೋಟೋ ಹಾಕಲು ಮಾತ್ರ ಸಿದ್ದರಾಮಯ್ಯ ಅವರಿಗೆ ಧರ್ಮ ಅಡ್ಡ ಬರುತ್ತದೆ. ಓಲೈಕೆ ರಾಜಕಾರಣದ ಪರಮಾವಧಿಯಿದು. ಜಿಹಾದಿ ಮಾನಸಿಕತೆಯನ್ನು ಕಾಂಗ್ರೆಸ್‌ ಪಕ್ಷ ಬೆಳೆಸುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ಟೀಕಿಸಿದೆ. ಇದನ್ನೂ ಓದಿ: ತಿಲಕ ಇಟ್ಟುಕೊಂಡಿದ್ದಕ್ಕೇ ಚಾಕು ಇರಿತ – ಶಿವಮೊಗ್ಗ ಪ್ರಕರಣಕ್ಕೆ ಟ್ವಿಸ್ಟ್

ಸಿದ್ದರಾಮಯ್ಯ ಅವರು ಸ್ವತಂತ್ರ ಭಾರತದ ಜಿನ್ಹಾ! ಮುಸ್ಲಿಂ ಏರಿಯಾಗಳನ್ನು ಈ ದೇಶದ ಅಖಂಡತೆಯಿಂದ ಛಿದ್ರಗೊಳಿಸುವುದಕ್ಕೆ ಹೊರಟಿದ್ದೀರಾ? ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದು ಕುಟುಕಿದೆ.

ಸಿದ್ದರಾಮಯ್ಯ ಬೀದಿಗೆ ಬಿಟ್ಟ ರಕ್ತಬೀಜಾಸುರರೇ ಶಿವಮೊಗ್ಗದಲ್ಲಿ ಗಲಾಟೆ ಸೃಷ್ಟಿಸಿದ್ದು ಎಂಬ ಗುಮಾನಿ ಈಗ ಸತ್ಯವಾಗಿದೆ. ಜಿಹಾದಿ ಮಾನಸಿಕತೆಯ ಉಗ್ರರ ಪರವಾಗಿ ಸಿದ್ದರಾಮಯ್ಯ ವಕಾಲತ್ತು ವಹಿಸುವುದರಲ್ಲಿ ಅಚ್ಚರಿಯಿಲ್ಲ ಎಂದು ಬಿಜೆಪಿ ಟ್ವೀಟ್‌ ಮಾಡಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಮತ್ತೊಂದು ವಿವಾದ – ಮಾಣಿಕ್ ಷಾ ಮೈದಾನದ ದ್ವಾರಗಳ ಮೇಲಿದ್ದ ಟಿಪ್ಪು, ಚೆನ್ನಮ್ಮ ಹೆಸರಿಗೆ ಬಣ್ಣ!

Live Tv

Leave a Reply

Your email address will not be published.

Back to top button