– ಮುನಿರತ್ನ ತಪ್ಪು ಮಾಡಿದ್ದರೆ ಕ್ರಮ ಆಗಲಿ ಎಂದ ಸಚಿವೆ
ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವ ಕೆಲಸ ನಿರಂತರವಾಗಿ ನಡೀತಾ ಇದೆ. ಸಿದ್ದರಾಮಯ್ಯ (CM Siddaramaiah) ಅವರು ಹಿಟ್ಲರ್ ಆಗಿದ್ದಾರೆ. ಸರ್ಕಾರ ನನ್ನ ವಿರುದ್ಧವೂ ಎಫ್‌ಐಆರ್ ದಾಖಲಿಸಿದೆ. ನಾವು ಹೋರಾಟ ಮಾಡಿಕೊಂಡು ಬಂದವರು, ಹೋರಾಟ ಮುಂದುವರಿಸ್ತೀವಿ ಎಂದು ನಾಗಮಂಗಲ ಗಲಭೆ ವಿಚಾರವಾಗಿ ಎಫ್‌ಐಆರ್ ದಾಖಲಿಸಿರುವ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಕಿಡಿಕಾರಿದ್ದಾರೆ.
Advertisement
ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಗಮಂಗಲ ಗಲಭೆ ವಿಚಾರವಾಗಿ ನನ್ನ ಮೇಲೆ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಸರ್ಕಾರ ದ್ವೇಷದ ರಾಜಕೀಯ ಮಾಡುವುದು ಬೇಡ, ಎಫ್‌ಐಆರ್ ಹಾಕಿದೆ, ನಾವು ಎದುರಿಸ್ತೇವೆ. ಪೊಲೀಸರು ನಮ್ಮನ್ನು ಬಂಧಿಸಬಹುದು, ನಾವು ಬಂಧನಕ್ಕೆ ಒಳಗಾಗ್ತೇವೆ. ನಾವು ಹೋರಾಟ ಮಾಡಿಕೊಂಡು ಬಂದವರು, ಹೋರಾಟ ಮುಂದುವರಿಸ್ತೀವಿ ಎಂದಿದ್ದಾರೆ.ಇದನ್ನೂ ಓದಿ: ಮೋದಿಯನ್ನ ಹಾವು, ಚೇಳು, ರಾಕ್ಷಸ ಎಂದೆಲ್ಲ ಕರೆದಿದ್ದಾರೆ – ಕೈ ನಾಯಕರ ಆಕ್ಷೇಪಾರ್ಹ ಹೇಳಿಕೆ ಪಟ್ಟಿ ರಿಲೀಸ್
Advertisement
ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸುವ ಕೆಲಸ ನಿರಂತರವಾಗಿ ನಡೀತಾ ಇದೆ. ಸಿದ್ದರಾಮಯ್ಯ ಅವರು ಹಿಟ್ಲರ್ ಆಗಿದ್ದಾರೆ. ಬಿಜೆಪಿ ನಾಯಕರು, ಕಾರ್ಯಕರ್ತರ ಧ್ವನಿ ಅಡಗಿಸುವ, ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
Advertisement
Advertisement
ಐವಾನ್ ಡಿಸೋಜಾ (Ivan D’Souza) ಅವರು ಬಾಂಗ್ಲಾ ಮಾದರಿಯ ಗಲಭೆ ಆಗುತ್ತದೆ ಎಂದಿದ್ದರು. ನಮ್ಮ ಕಾರ್ಯಕರ್ತರು ನಿತ್ಯ ಠಾಣೆಗೆ ಹೋಗ್ತಿದ್ರೂ ಐವಾನ್ ಡಿಸೋಜಾ ವಿರುದ್ಧ ದೂರು ತೆಗೆದುಕೊಳ್ಳಲಿಲ್ಲ. ಎಫ್‌ಐಆರ್ ದಾಖಲು ಮಾಡಿಕೊಳ್ಳಲಿಲ್ಲ. ನಾಗೇಂದ್ರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲು ಹಿಂಜರಿದಿದ್ದರು. ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ನಾಗೇಂದ್ರ ಅವರ ಹೆಸರೇ ಇಲ್ಲ, ಅವರು ಅಪರಾಧಿ ಅಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಏನು ಮಾಡಲು ಹೊರಟಿದ್ದಾರೆ? ಎಂದು ಆರೋಪಿಸಿದ್ದಾರೆ.
ಗಣಪತಿಯನ್ನೂ ಬಿಡದೇ ಅವಮಾನ ಮಾಡಿದ್ರು:
ನಾಗಮಂಗಲ ಗಲಭೆ ನಡೆಯಿತು, ಗಣಪತಿ ಮೂರ್ತಿ ಮೇಲೆ ಚಪ್ಪಲಿ, ಕಲ್ಲು ತೂರಾಟ ನಡೆಸಿದ್ದರು. ಕೇರಳದಿಂದ ಬಂದವರು ಅಲ್ಲಿ ಗಲಭೆ ಮಾಡಿದ್ದರು ಅಂತೆಲ್ಲಾ ಮಾಹಿತಿ ಬಂದಿದೆ. ಅವರೆಲ್ಲ ಯಾರು? ಯಾಕೆ ಬಂದಿದ್ದರು ಎಂದು ತನಿಖೆ ಮಾಡಿ. ನಾಗಮಂಗಲ ಗಲಭೆಯನ್ನು ಮುಚ್ಚಿ ಹಾಕಲು ಸರ್ಕಾರ ಮುಂದಾಗಿದೆ. ಗಣೇಶನನ್ನೂ ಬಿಡದೇ ಪೊಲೀಸ್ ವ್ಯಾನಿನಲ್ಲಿ ಬಂಧಿಸಿ ಅವಮಾನ ಮಾಡಿದ್ದಾರೆ. ಕೋಲಾರದಲ್ಲಿ ಪ್ಯಾಲೆಸ್ತೀನ್ ಧ್ವಜದ ಪ್ರದರ್ಶನ ಆಯ್ತು. ನಿನ್ನೆ ನಂದಿನಿ ಲೇಔಟ್‌ನಲ್ಲಿ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರದ ಬದಲು ಖಡ್ಗ, ಉರ್ದು ಅಕ್ಷರದಿಂದ ಬರೆದು ಅಪಮಾನ ಆಗಿದೆ. ಇದು ದೇಶದ್ರೋಹತನ, ಈ ಧೈರ್ಯ ಸಮಾಜವಿರೋಧಿಗಳಿಗೆ ಹೇಗೆ ಬಂದಿದೆ ಆಗ್ರಹಿಸಿದರು.
ರಾಜ್ಯದಲ್ಲಿ ಟಿಪ್ಪು, ಔರಂಗಜೇಬನ ವೈಭವೀಕರಣ ಆಯ್ತು, ಯಾರೂ ಕೇಳಲಿಲ್ಲ. ಹನುಮಾನ್ ಚಾಲೀಸಾ ಪಠಣ ಮಾಡಿದರೇ ಹೊಡೀತಾರೆ. ನಾನು, ಅಶೋಕ್ ಏನು ತಪ್ಪು ಮಾಡಿದ್ವಿ? ನಮ್ಮ ವಿರುದ್ಧ ಯಾಕೆ ಎಫ್‌ಐಆರ್ ಹಾಕಿದ್ದೀರಿ? ನಿಮ್ಮ ಬಗ್ಗೆ ಮಾತಾಡಿದ್ದೆ ಎಫ್‌ಐಆರ್ ಹಾಕ್ತೀರಾ? ಯಾವ ಸಂವಿಧಾನ ರಕ್ಷಣೆ ಮಾಡಲು ಹೊರಟಿದ್ದೀರಿ? ನೀವು ನೂರು ಎಫ್‌ಐಆರ್ ಹಾಕಿ, ನಾವು ಹೆದರಿ ಓಡಿ ಹೋಗುವವರಲ್ಲ. ನಿಮ್ಮ ವಕೀಲರು ಹನುಮಾನ್ ಚಾಲೀಸಾ ಕೇಸ್ ಹಾಕಿ, ಕ್ಷಮೆ ಕೇಳಿ ಅಂದಿದ್ದರು. ನಾನು ಕ್ಷಮೆ ಕೇಳಿಲ್ಲ, ಕೇಸ್ ನಡೀತಿದೆ, ಸುಪ್ರೀಂ ಕೋರ್ಟ್‌ಗೆ ಹೋಗಲಿ. ಈಗಲೂ ಎಫ್‌ಐಆರ್ ಹಾಕಿದ್ದೀರಿ, ಜನ ನಿಮಗೆ ತಕ್ಕ ಪಾಠ ಕಲಿಸ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ನಿಂದ ದ್ವೇಷರಾಜಕಾರಣ:
ದ್ವೇಷದ ರಾಜಕಾರಣ ಮಾಡುತ್ತಿರುವವರು ಕಾಂಗ್ರೆಸ್‌ನವರು (Congress). ಒಂದು ಸಮುದಾಯ ಓಲೈಕೆ ಮಾಡಲು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯನ್ನೂ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಯಾವುದೋ ಒಂದು ಕಡೆ ಪಾಕ್ ಪರ ಘೋಷಣೆ ಕೂಗಿದ್ದಾರೆ. ರಾಜ್ಯದಲ್ಲೇ ಘೋಷಣೆ ಕೂಗಿದ್ದಾರೆ. ನಾನು ರಾಜ್ಯದಲ್ಲಿ ಕೂಗಿರುವ ವಿಡಿಯೋವನ್ನೇ ಟ್ವೀಟ್‌ನಲ್ಲಿ ಹಾಕಿರುವುದು. ಕರ್ನಾಟಕವನ್ನು ಬಾಂಗ್ಲಾದೇಶ ಮಾಡ್ತೀವಿ ಅನ್ನೋರ ವಿರುದ್ಧ ಕೇಸ್ ಹಾಕಿಲ್ಲ. ಇದ್ಯಾವ ನ್ಯಾಯ? ಘೋಷಣೆ ಕೂಗಿರೋದು ಹೌದು, ಇದರಲ್ಲಿ ಪ್ರಚೋದನೆ ಎಲ್ಲಿ ಬಂತು? ಎಂದರು.ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಜಾಮೀನಿನ ವಾದ-ಪ್ರತಿವಾದ ಮುಕ್ತಾಯ; ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು
ಮುನಿರತ್ನ ತಪ್ಪು ಮಾಡಿದ್ದರೆ ಕ್ರಮ ಆಗಲಿ:
ಇದೇ ವೇಳೆ ಮುನಿರತ್ನ ಪ್ರಕರಣ ಬಗ್ಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅವರು ತಪ್ಪು ಮಾಡಿದ್ದರೆ ಕ್ರಮ ಆಗಲಿ. ನಾವು ತಪ್ಪು ಮಾಡಿದ ಯಾರನ್ನೂ ರಕ್ಷಣೆ ಮಾಡಲ್ಲ. ಆದರೆ ಸರ್ಕಾರ ದ್ವೇಷದ ರಾಜಕೀಯ ಮಾಡುವುದು ಬೇಡ. ಸರ್ಕಾರ ಎಫ್‌ಐಆರ್ ಹಾಕಿದೆ, ನಾವು ಎದುರಿಸ್ತೇವೆ. ಪೊಲೀಸರು ನಮ್ಮನ್ನು ಬಂಧಿಸಬಹುದು, ನಾವು ಬಂಧನಕ್ಕೆ ಒಳಗಾಗ್ತೇವೆ. ನಾವು ಹೋರಾಟ ಮಾಡಿಕೊಂಡು ಬಂದವರು, ಹೋರಾಟ ಮುಂದುವರೆಸ್ತೇವೆ ಎಂದಿದ್ದಾರೆ.