ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರನ್ನು ಬಿಟ್ಟರೆ ಕಳೆದ 20 ವರ್ಷಗಳಲ್ಲಿ ಸಿದ್ದರಾಮಯ್ಯ ಅವರೇ ದಿ ಬೆಸ್ಟ್ ಸಿಎಂ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಿವಾರ್ಯತೆಯಿಂದ ಜೆಡಿಎಸ್‍ಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೆ. ನಮ್ಮ ಪಕ್ಷದ ಔದಾರ್ಯವನ್ನ ಸಿಎಂ ಕುಮಾರಸ್ವಾಮಿಯವರು ಅರ್ಥ ಮಾಡಿಕೊಳ್ಳಬೇಕು. ಚಿಕ್ಕಪುಟ್ಟ ವಿಷಯಗಳಿಗೆ ರಾಜೀನಾಮೆ ನೀಡುತ್ತೇನೆ ಅನ್ನೋದು ತಪ್ಪು. ಕಾಂಗ್ರೆಸ್ ಶಾಸಕರನ್ನ ಕಂಟ್ರೋಲ್ ಮಾಡಿ ಅಂತ ಹೇಳಿದ್ದು ಸರಿಯಲ್ಲ. ಸಿದ್ದರಾಮಯ್ಯ ಅವರನ್ನ ಹೊಗಳಿದರೆ ತಪ್ಪೇನು? ಸಮ್ಮಿಶ್ರ ಸರ್ಕಾರಕ್ಕಾಗಿ ಸಿದ್ದರಾಮಯ್ಯ ಅವರು ತ್ಯಾಗ ಮಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಸಿದ್ದರಾಮಯ್ಯ ದಿ ಬೆಸ್ಟ್ ಸಿಎಂ. ಕುಮಾರಸ್ವಾಮಿ ಅವರಿಗೆ ಇನ್ನಷ್ಟು ಮೆಚ್ಯೂರಿಟಿ ಬರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:ಕೈ ಶಾಸಕರು ಸಿದ್ದರಾಮಯ್ಯನವರನ್ನು ಹೊಗಳಿದರೆ ತಪ್ಪೇನು: ಪರಮೇಶ್ವರ್ ಪ್ರಶ್ನೆ
Advertisement
Advertisement
ಸಿದ್ದರಾಮಯ್ಯ ಒಬ್ಬ ಪ್ರಶ್ನಾತೀತ, ವರ್ಣರಂಜಿತ ಸಿಎಂ. ಅವರೇ ಮತ್ತೆ ಸಿಎಂ ಆಗಲಿ ಅಂತ ನಾನು ಕೂಡ ಬಯಸುತ್ತೇನೆ. ನಾನು ನೋಡಿರುವ ಪ್ರಕಾರ ದೇವೇಗೌಡರನ್ನ ಬಿಟ್ಟರೆ ಸಿದ್ದರಾಮಯ್ಯ ಅವರೇ ಬೆಸ್ಟ್ ಸಿಎಂ. ಅನಿವಾರ್ಯವಾಗಿ ನಾವು ಜೆಡಿಎಸ್‍ಗೆ ಶರಣಾಗಿದ್ದೇವೆ ಎಂದು ಬಸವರಾಜ ರಾಯರೆಡ್ಡಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಸಿಎಂ ರಾಜೀನಾಮೆ ಹೇಳಿಕೆಗೆ ಕಾರಣವಾದ ಸಿದ್ದು ಶಿಷ್ಯರು ಹೇಳಿದ 5 ಹೇಳಿಕೆಗಳು – ವಿಡಿಯೋ ನೋಡಿ
Advertisement
Advertisement
ಕೇಂದ್ರ ಸರ್ಕಾರ ಆರ್‍ಎಸ್‍ಎಸ್ ಹಾಗೂ ಬಿಜೆಪಿಯ ನಾಯಕರಿಗೆ ಮಾತ್ರ ಭಾರತ ರತ್ನ ನೀಡಿದೆ. ಸಚಿನ್ ತೆಂಡೂಲ್ಕರ್ ಹಾಗೂ ಪ್ರಣಬ್ ಮುಖರ್ಜಿ ಬಿಟ್ಟರೆ ಎಲ್ಲರೂ ಆರ್‍ಎಸ್‍ಎಸ್ ಗೆ ಸೇರಿದವರು. ಮೇಲ್ವರ್ಗದ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾದೇಶಿಕವಾರು ತಾರತಮ್ಯ ಮಾಡಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ನಾಲ್ಕನೇ ಭಾರತರತ್ನ ಪ್ರಶಸ್ತಿಯನ್ನು ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನೀಡಬೇಕು. ಮೋದಿ ಅವರು ಶ್ರೀಗಳನ್ನು ಹೊಗಳಿದ್ದಾರೆ. ಆದ್ರೆ ಭಾರತ ರತ್ನ ನೀಡಿ ಗೌರವಿಸಿಲ್ಲ. ಪ್ರಧಾನಿ ಅವರಿಗೆ ಶ್ರೀಗಳ ಮೇಲೆ ನಿಜವಾದ ಗೌರವ ಇದ್ದರೆ ಭಾರತ ರತ್ನ ನೀಡಲಿ ಎಂದು ಬಸವರಾಜ ರಾಯರೆಡ್ಡಿ ಆಗ್ರಹಿಸಿದರು.
https://www.youtube.com/watch?v=OflAzK4wALY
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv