ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಇಂದು ಟ್ವಿಟ್ಟರ್ ನಲ್ಲಿ ಹಾಡಿಹೊಗಳಿದ್ದಾರೆ.
ಪತ್ರಕರ್ತೆ ಬರ್ಕಾ ದತ್ ಅವರು 2018ರ ಕರ್ನಾಟಕ ಚುನಾವಣೆಯ ಸಮಯದಲ್ಲಿ ವಾಷಿಂಗ್ಟನ್ ಪೋಸ್ಟ್ ಗೆ ಲೇಖನ ಬರೆದು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಇಂದು ಪ್ರತಿಕ್ರಿಯೆ ನೀಡುವ ವೇಳೆ ಸಿ.ಟಿ. ರವಿ ಸಿದ್ದರಾಮಯ್ಯನವರನ್ನು ಸ್ವಶಕ್ತಿಯಿಂದಲೇ ಬೆಳೆದು ಮೇಲಕ್ಕೆ ಬಂದಿದ್ದಾರೆ ಎಂದು ಹೇಳಿ ಪ್ರಶಂಸಿದ್ದಾರೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?:
ಇದು ಎಂತಹ ಪತ್ರಿಕೋದ್ಯಮ? ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವಶಕ್ತಿಯಿಂದಲೇ ಬೆಳೆದವರು. ಅವರು ಜನರೇ ಬೆಳೆಸಿದ ವ್ಯಕ್ತಿ. ಅವರನ್ನ ಯಾಕೆ ಕುರಿಗಾಹಿ ಮಗನೆಂದು ಕರೆಯುತ್ತೀರಿ? ಈ ರೀತಿಯಾಗಿ ಕನ್ನಡಿಗರ ಬಗ್ಗೆ ದುರುದ್ದೇಶಪೂರ್ವಕವಾಗಿ ಮಾತನಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿ ಕಿಡಿಕಾರಿದ್ದಾರೆ.
Advertisement
ಬರ್ಕಾ ದತ್ ಹೇಳಿದ್ದೇನು?:
ಕರ್ನಾಟಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದಕ್ಷಿಣ ಭಾರತದಲ್ಲಿ ಕುರಿಗಾಹಿಯ ಮಗ ಮಾಜಿ ಸಿಎಂ ಸಿದ್ದರಾಮಯ್ಯ ತಡೆಯುತ್ತಾರಾ? ಈ ಸಂಬಂಧ ನಾನು ಲೇಖನ ಬರೆದಿದ್ದೇನೆ ಎಂದು ಬರ್ಕಾ ದತ್ ಅವರು ಮೇ 10, 2018ರಲ್ಲಿ ಟ್ವೀಟ್ ಮಾಡಿದ್ದರು.
Advertisement
What kind of Journalism is this? Sri @siddaramaiah is a leader on his own strength and has grown from the roots. He is a self made man of the Masses.
Why reduce him to the son of a cattle grazer? This kind of abusive journalism against my fellow Kannadiga is not acceptable. https://t.co/M5Uah7JOM7
— C T Ravi ???????? ಸಿ ಟಿ ರವಿ (@CTRavi_BJP) April 25, 2019