ಬಾಗಲಕೋಟೆ: ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ಮುಳುಗುವ ಹಡಗಿನಂತೆ ಆಗಿದೆ. ಮುಳುಗುವ ಹಡಗಿನಲ್ಲಿ ಯಾರಾದ್ರೂ ಕುಳಿತುಕೊಳ್ಳುತ್ತಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಸಂಪುಟ ವಿಸ್ತರಣೆ ಬಳಿಕ ಬಿಜೆಪಿ ಆಪರೇಷನ್ ಕಮಲ ಪ್ಲಾನ್ ಮಾಡುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾರೂ ರಾಜೀನಾಮೆ ಕೊಡಲ್ಲ, ಅತೃಪ್ತಿ ಯಾರಲ್ಲೂ ಇಲ್ಲ. ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ಮ್ಯಾನ್. ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸ ನನಗಿದೆ. ಮುಂದಿನ ಸಂಪುಟ ವಿಸ್ತರಣೆ ವೇಳೆಯಲ್ಲಿ ಈ ಬಾರಿ ಸಚಿವ ಸ್ಥಾನ ವಂಚಿತರಿಗೆ ಅವಕಾಶ ನೀಡಲಾಗವುದು ಎಂದು ತಿಳಿಸಿದರು.
Advertisement
Advertisement
ಇದೇ ವೇಳೆ ರಾಮಲಿಂಗಾ ರೆಡ್ಡಿ ಅವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ರಾಮಲಿಂಗಾ ರೆಡ್ಡಿ ಅವರು ಹಿರಿಯರು. ಅವರಿಗೆ ಸಹಜವಾಗಿ ಸಚಿವ ಸ್ಥಾನ ಸಿಗದೇ ಇರುವುದು ಅಸಮಾಧಾನ ಇದೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಆದರೆ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದಂತೆ ಯಾರು ಷಡ್ಯಂತ್ರ ಮಾಡಿಲ್ಲ ಎಂದರು.
Advertisement
ಬಿ.ಸಿ.ಪಾಟೀಲ, ಎಚ್.ಕೆ.ಪಾಟೀಲ ಅಸಮಾಧಾನ ವಿಚಾರವಾಗಿ ಮಾತನಾಡಿ, ಕೆಲವರಿಗೆ ಅಸಮಾಧಾನ ಆಗಿರುವುದು ಸಹಜ. ಎಲ್ಲರೂ ಮಂತ್ರಿ ಆಗಲು ಯೋಗ್ಯರೆ ಇದ್ದಾರೆ. ಆದರೆ ಎಲ್ಲರನ್ನೂ ಮಂತ್ರಿ ಮಾಡಲು ಆಗಲ್ಲ. ಸದ್ಯ ಆರು ಜನರನ್ನು ಮಾಡಿದ್ದೇವೆ. ಲೋಕಸಭಾ ಬಳಿಕ ಮತ್ತೆ ವಿಸ್ತರಣೆ ಆಗುತ್ತೆ ಎಂದು ಹೇಳಿದರು.
Advertisement
ಉಳಿದಂತೆ ಸಂಪುಟ ವಿಸ್ತರಣೆ ಮಾತ್ರ ಆಗಿದ್ದು, ಯಾರಿಗೆ ಯಾವ ಸಚಿವ ಖಾತೆ ನೀಡಬೇಕೆಂದು ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv