ಹುಬ್ಬಳ್ಳಿ: ಸಿ.ಎಂ.ಇಬ್ರಾಹಿಂ ಬೆನ್ನಿಗೆ ಸಿದ್ದರಾಮಯ್ಯ ಅವರು ಚೂರಿ ಹಾಕಿದ್ದಾರೆ ಎಂದು ಸಚಿವ ಶ್ರೀರಾಮುಲು ಟೀಕಿಸಿದ್ದಾರೆ.
ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ವಿಚಾರವಾಗಿ ಸಚಿವ ಶ್ರೀರಾಮುಲು ಕಾಂಗ್ರೆಸ್ ಪಕ್ಷದ ಮೇಲೆ ಗುಡುಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ. ವಿಪಕ್ಷ ನಾಯಕ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷ ಆಗುವ ಸಾಮರ್ಥ್ಯ ಅವರಿಗೆ ಇದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಗೋಕಾಕ್ ಅಭಿವೃದ್ಧಿ ಆಗಿಲ್ಲವೆಂದ್ರೆ ಸ್ಥಳದಲ್ಲೇ ರಾಜೀನಾಮೆ ಕೊಡುತ್ತೇನೆ: ಸವಾಲು ಹಾಕಿದ ರಮೇಶ್ ಜಾರಕಿಹೊಳಿ
Advertisement
Advertisement
ಕಾಂಗ್ರೆಸ್‌ನವರು ಮುಸ್ಲಿಮರ ಓಟು ಮಾತ್ರ ಗುದ್ದಿ ಗುದ್ದಿ ಹಾಕಿಸಿಕೊಂಡಿದ್ದಾರೆ. ಆದರೆ ಅವರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನ ಸಿದ್ದರಾಯಮ್ಯ ಮಾಡಿದರು. ಅವರ ಮತಗಳನ್ನು ಪಡೆದು ಅವರಿಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement
ರಾಜ್ಯದಲ್ಲಿ ಶೇಕಡಾ 18 ರಷ್ಟು ಮಂದಿ ಮುಸ್ಲಿಂ ಸಮುದಾಯದವರಿದ್ದಾರೆ. ಆದರೆ ಅವರಿಗೆ ಯಾವುದೇ ಸ್ಥಾನಮಾನ ಕಾಂಗ್ರೆಸ್ ನೀಡಿಲ್ಲ. ಸಿದ್ದರಾಯಮ್ಯ ನಾನೇ ಅಹಿಂದ ನಾಯಕ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಈಗ ಇಬ್ರಾಹಿಂ ಅವರ ಪ್ರಶ್ನೆಗೆ ಉತ್ತರ ಕೊಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ಸುದ್ದಿಗೆ ಬಂದ್ರೆ ಕೈ-ಕಾಲು ಮುರಿತೀನಿ, ತಲೆ ತೆಗೆಯೋಕೆ ರೆಡಿ: ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಚ್ಚರಿಕೆ
Advertisement
ತಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಐದು ಕ್ಷೇತ್ರಗಳ ಜನರು ಕರೆಯುತ್ತಿದ್ದಾರಂತೆ. 224 ಕ್ಷೇತ್ರಗಳಿಂದಲೂ ಜನರು ಅವರನ್ನು ಚುನಾವಣೆಯಲ್ಲಿ ನಿಲ್ಲುವಂತೆ ಕರೆದಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.