ಮೈಸೂರು: ವಕೀಲನಾಗಿದ್ದಾಗ ನಾನು ದಿನಕ್ಕೆ ನಾಲ್ಕು ಪ್ಯಾಕ್ ಅಂದ್ರೆ, 40 ವೀಲ್ಸ್ ಸಿಗರೇಟ್ ಸೇದುತ್ತಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಸೆನೆಟ್ ಹಾಲ್ ನಲ್ಲಿ ಇವತ್ತು ನಡೆದ ಸ್ತನ ಮತ್ತು ಗರ್ಭ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸ್ನೇಹಿತರು ವಿದೇಶಕ್ಕೆ ಹೋದಾಗ ಪೆನ್ನು ವಾಚ್ ಗಿಫ್ಟ್ ನೀಡುತ್ತಿದ್ದರು. ಆದರೆ ಒಮ್ಮೆ ಸ್ನೇಹಿತರು ಒಂದು ಬಾಕ್ಸ್ ವೆರೈಟಿ ಸಿಗರೇಟ್‍ಗಳನ್ನು ಉಡುಗೊರೆಯಾಗಿ ತಂದು ಕೊಟ್ಟಿದ್ದರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.
Advertisement
Advertisement
ಯಾವ ಸಿಗರೇಟ್ ಹೇಗಿದೆ ಅಂತಾ ನೋಡೋಕೆ ಎಲ್ಲವನ್ನೂ ಸೇದಿಬಿಟ್ಟೆ. ಸಿಗರೇಟ್ ಖಾಲಿಯಾದ ಮೇಲೆ ಅಬ್ಬಾ ನಾನು ಇಷ್ಟು ಸಿಗರೇಟ್ ಸೇದಿ ಬಿಟ್ಟೆನಾ? ನನ್ನ ಆರೋಗ್ಯದ ಗತಿ ಏನಾಗುತ್ತೆ? ಅಂತಾ ಯೋಚಿಸಿಲು ಪ್ರಾರಂಭಿಸಿದೆ. ಆಗ ಸ್ವಲ್ಪ ಜ್ಞಾನೋದಯವಾಯಿತು. ರಾತ್ರಿಯ ಯೋಚಿಸಿ, ಇನ್ನು ಮುಂದೆ ಸಿಗರೇಟ್ ಸೇದುವುದನ್ನು ಬಿಡುತ್ತೇನೆ ಅಂತಾ 1987 ಆಗಸ್ಟ್ 17ರಂದು ಶಪಥ ಮಾಡಿದೆ ಎಂದರು.
Advertisement
ಅವತ್ತಿನಿಂದ ಸಿಗರೇಟ್ ವಾಸನೆ ಕಂಡರೂ ಆಗುವುದಿಲ್ಲ. ನಾನು ಹೆಚ್ಚಾಗಿ ವೀಲ್ಸ್ ಸಿಗರೇಟ್ ಸೇದುತ್ತಿದ್ದೆ ಎಂದ ಅವರು, ಸಿಗರೇಟ್ ಸೇದಿದರೆ ಕ್ಯಾನ್ಸರ್ ಬರುತ್ತೆ ಅಂತಾ ಹೇಳುತ್ತಾರೆ, ಜೊತೆಗೆ ತಿಳುವಳಿಕೆ ಇರುತ್ತದೆ. ಪ್ಯಾಕ್‍ಗಳ ಮೇಲೆ ಸ್ಮೋಕಿಂಗ್ ಇಸ್ ಇಂಜೂರಿಯಸ್ ಟು ಹೆಲ್ತ್ ಅಂತಾ ಬರೆದಿರುತ್ತದೆ. ಆದರೂ ಅದನ್ನು ನೋಡಿಕೊಂಡೇ ಸೇದುತ್ತಾರೆ. ಕೆಟ್ಟ ಚಟಗಳನ್ನು ಆದಷ್ಟು ಬೇಗ ಬಿಟ್ಟರೆ ಒಳ್ಳೆಯದಾಗುತ್ತದೆ ಎಂದು ಯುವ ಸಮೂಹಕ್ಕೆ ಸಿದ್ದರಾಮಯ್ಯ ಸಲಹೆ ನೀಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv