ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮತ್ತು ರಾಹುಲ್ ಗಾಂಧಿ (Rahul Gandhi) ವಿಚಾರದಲ್ಲಿ ಮಂಗಳವಾರ ಮಾಜಿ ಸಿಎಂ ಯಡಿಯೂರಪ್ಪ ಬಳಸಿದ ಪದ ಬಳಕೆ ಕುರಿತಾಗಿ ವಾಕ್ಸಮರ ನಡೆದಿದೆ. ಯಡಿಯೂರಪ್ಪ ಹೇಳಿಕೆಗೆ ಸಿದ್ದರಾಮ್ಯಯ ತಿರುಗೇಟು ನೀಡಿದ್ದಾರೆ.
Advertisement
ಯಡಿಯೂರಪ್ಪ (BS Yediyurappa) ಹಿಂಗೆಲ್ಲಾ ಮಾತಾಡ್ತಾರೆ ಅಂದ್ಕೊಂಡಿರಲಿಲ್ಲ. ಬಹುಷಃ ವಯಸ್ಸಿನ ಕಾರಣ ಅರಳು ಮರಳು ಆಗಿರಬಹುದು. ನಾನು ಅವರ ಮಟ್ಟಕ್ಕೆ ಇಳಿಯಲ್ಲ. ನೆಹರೂ ಪಾದಕ್ಕೂ ಮೋದಿ ಸಮ ಅಲ್ಲ ಅಂತಾ ನಾನು ಹೇಳೋಕೆ ಆಗುತ್ತಾ..? ಅವರು ಪ್ರಧಾನಿ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ, ಬಿಎಸ್‍ವೈ, ಸಿಎಂ ಬೊಮ್ಮಾಯಿಗೆ 2 ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದೂರು ದಾಖಲು
Advertisement
ರಾಹುಲ್ ಗಾಂಧಿಯವರನ್ನು ಬಚ್ಚಾ ಎಂದು ಹೇಳುವ @BSYBJP ಅವರೇ, ನಿಮ್ಮ @narendramodi ಅವರು ವಿಶ್ವಗುರು ಅಲ್ಲ ಅವರೊಬ್ಬ ಪುಕ್ಕಲು ಗುರು. ಅವರು ನಮ್ಮನ್ನು ಎದುರಿಸುವುದು ಬೇಡ, ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೇಳಿ. 5/7#ಬಡಾಯಿಬೊಮ್ಮಾಯಿ
— Siddaramaiah (@siddaramaiah) October 12, 2022
Advertisement
ಕಾರು-ಜೀಪು ಬಿಟ್ಟು ನಾಲ್ಕು ಕಿಲೋಮೀಟರ್ ದೂರ ಎಡವದೆ ನಡೆದುಕೊಂಡು ಹೋಗಿ ಸಿದ್ದರಾಮಯ್ಯ ಎಂಬ ಹೆಸರೆತ್ತದೆ ಐದು ನಿಮಿಷ ಭಾಷಣ ಮಾಡಿ ಎಂದು ಚಾಲೆಂಜ್ ಮಾಡಿದ್ದಾರೆ. ಜನರ ಬಳಿಗೆ ಒಬ್ಬರೇ ಹೋಗಲು ಬೊಮ್ಮಾಯಿಗೆ ಧೈರ್ಯವಿಲ್ಲ ಎಂದು ಕುಟುಕಿದ್ದಾರೆ. ಅಷ್ಟೇ ಅಲ್ಲ ನಿಮ್ಮ ನರೇಂದ್ರ ಮೋದಿ (Narendra Modi) ವಿಶ್ವಗುರು ಅಲ್ಲ ಅವರೊಬ್ಬ ಪುಕ್ಕಲು ಗುರು. ಅವರು ನಮ್ಮನ್ನು ಎದುರಿಸುವುದು ಬೇಡ. ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೇಳಿ ಎಂದು ಬೇರೆ ಸವಾಲ್ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
Advertisement
ಪಾಪ, @BSYBJP ಅವರು ಯಾರೋ ಬರೆದುಕೊಟ್ಟದ್ದನ್ನು ಓದಿ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರು ಈ ರೀತಿ ಕಾಲ ವ್ಯರ್ಥ ಮಾಡುವುದರ ಬದಲಿಗೆ ಒಳ್ಳೆಯ ವಕೀಲರ ಜೊತೆ ಸಮಾಲೋಚಿಸಿ ಮತ್ತೊಮ್ಮೆ ಜೈಲು ಪಾಲಾಗದಂತೆ ನೋಡಿಕೊಳ್ಳುವುದು ಒಳ್ಳೆಯದು. 6/7#ಬಡಾಯಿಬೊಮ್ಮಾಯಿ
— Siddaramaiah (@siddaramaiah) October 12, 2022
ಇಡೀ ವಿಶ್ವವೇ ಒಪ್ಪಿದ ಪ್ರಧಾನಿ ಬಗ್ಗೆ ರಾಹುಲ್ ಹಗುರವಾಗಿ ಮಾತಾಡಿದ್ರೆ ನಾನು ಅವರನ್ನು ಬಚ್ಚಾ ಎನ್ನಲೇಬೇಕಾಗುತ್ತದೆ ಎಂದಿದ್ದಾರೆ. ಇದೇ ವೇಳೆ, ಯಡಿಯೂರಪ್ಪ ಪರವಾಗಿ ಸಿಎಂ ಬೊಮ್ಮಾಯಿ ಬ್ಯಾಟ್ ಮಾಡಿದ್ದಾರೆ. ಯಡಿಯೂರಪ್ಪಗೆ ಅರಳು ಮರುಳಲ್ಲ. ಅವರು ಅರಳುವವರು, ಸಿದ್ದರಾಮಯ್ಯಗೆ ಅರಳು ಮರಳು ಇರಬಹುದು ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ, ಸಿದ್ದರಾಮಯ್ಯಗೆ ಮತ್ತೆ ಧಮ್ ಚಾಲೆಂಜ್ ಹಾಕಿದ್ದಾರೆ. ಇದನ್ನೂ ಓದಿ: ಮೋದಿ ವಿಶ್ವಗುರು ಅಲ್ಲ ಪುಕ್ಕಲು ಗುರು: ಸಿದ್ದರಾಮಯ್ಯ