ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಪಕ್ಷದವರ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅವರು ಒಂದು ರೀತಿಯಲ್ಲಿ ಎರಡು ನಾಲಿಗೆ ಇರುವ ಹಾವು ಇದ್ದಂತೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದರು.
ಕೊಪ್ಪಳದ ಗಂಗಾವತಿ ತಾಲೂಕಿನ ಪಂಪಾ ಸರೋವರಕ್ಕೆ ಭೇಟಿ ಮಾಡಿದ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರನ್ನು ನಾಯಿಗೆ ಹೋಲಿಕೆ ಮಾಡುತ್ತಿದ್ದಾರೆ. ಯಾವ ನೈತಿಕತೆಯಿಂದ ಅವರು ಆರೋಪ ಮಾಡುತ್ತಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಅವರ ಕಾಂಗ್ರೆಸ್ ಪಕ್ಷದಲ್ಲಿ ಏಕಾಂಗಿಯಾಗಿರುವ ನಾಯಕನಾಗಿದ್ದಾರೆ. ಅವರು ಕಾಂಗ್ರೆಸ್ ಪಾರ್ಟಿಯಿಂದ ತಿರಸ್ಕೃತಗೊಂಡಿದ್ದು, ಅವರು ಮಾನಸಿಕವಾಗಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ವಸ್ತ್ರಾಪಹರಣ ದೃಶ್ಯಕ್ಕೆ ದ್ರೌಪದಿ ಬದಲು ಸೀತಾದೇವಿ ಹೆಸರು ಹೇಳಿದ ರಣದೀಪ್ ಸುರ್ಜೆವಾಲಾ: ವೀಡಿಯೋ ವೈರಲ್
Advertisement
Advertisement
ಒಂದು ರೀತಿಯಲ್ಲಿ ಸೀಳು ನಾಲಿಗೆಯನ್ನು ಹೊಂದಿರುವ ಎರಡು ನಾಲಿಗೆಯ ನಾಯಕನಾಗಿದ್ದಾರೆ. ಬೆಳಗ್ಗೆ ಒಂದು ಮಾತನಾಡಿದರೆ ಸಂಜೆ ಮತ್ತೊಂದು ಮಾತನಾಡುತ್ತಾರೆ. ಮಾತನಾಡುವ ಪರಿಜ್ಞಾನ ಅವರಿಗೆ ಇಲ್ಲ. ರಾಜಕೀಯದ ಕಾಂಗ್ರೆಸ್ ಪಕ್ಷದಲ್ಲಿ ಚೆಸ್ ಆಟವಾಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿಯೇ ಇರುವ ಡಿಕೆಶಿ ಅವರನ್ನು ಯಾವ ರೀತಿ ಮುಗಿಸಬೇಕು ಎಂದು ಯೋಚಿಸುತ್ತಿದ್ದಾರೆ ಎಂದರು.
Advertisement
Advertisement
ಸಿಎಂ ಇಬ್ರಾಹಿಂ ಯಾವ ರೀತಿ ಮುಗಿಸಬೇಕು ಎನ್ನುವ ಆಲೋಚನೆಯಿಂದ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ಸಿಎಂ ಕುರ್ಚಿಯ ಭ್ರಮೆಯಿಂದ ಅವರ ಪಕ್ಷದಲ್ಲಿರುವ ನಾಯಕರನ್ನು ಕಡೆಗಣಿಸುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಮರ್ಯಾದೆ ನೀಡುವ ಅವಶ್ಯಕತೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಎಚ್ಚರಿಕೆ ಕೊಟ್ಟರು.