ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ಅಪಾರವಾದ ಪ್ರೀತಿ ಇದೆ. ಹೀಗಾಗಿ ಅವರು ಡಿಕೆಶಿ ಜೆಡಿಎಸ್ ಬಾವುಟ ಹಿಡಿಯಬಾರದಿತ್ತು ಎಂದು ಹೇಳಿರಲಿಕ್ಕಿಲ್ಲ. ಅವರು ಆ ರೀತಿ ಹೇಳಿದ್ದಾರೆ ಎಂದು ಯಾರೋ ಹಬ್ಬಿಸಿದ್ದಾರೆ ಅಂತ ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದಲ್ಲಿರುವ ತಮ್ಮ ಮನೆಯ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹುಟ್ಟುತ್ತಾ ಕಾಂಗ್ರೆಸಿಗನಾಗಿದ್ದೇನೆ. ಹಾಗಾಗಿ ದೇವಾಲಯಕ್ಕೆ ಹೋಗಿ ಬಂದಿದ್ದೇನೆ. ಸಿದ್ದರಾಮಯ್ಯನವರು ಅಂತಹ ಹೇಳಿಕೆ ನೀಡಿರಲು ಸಾಧ್ಯವಿಲ್ಲ. ಯಾರಾದ್ರೂ ಅದನ್ನು ಮಿಸ್‍ಯೂಸ್ ಮಾಡಿರಬಹುದು. ಸಿದ್ದರಾಮಯ್ಯಗೆ ನನ್ನ ಮೇಲೆ ಅಪಾರ ಪ್ರೀತಿ ಇದೆ ಎಂದರು. ಇದನ್ನೂ ಓದಿ: ದೋಸ್ತಿ ಮುಗಿದ ಮೇಲೆ ಇವರಿಗ್ಯಾಕೆ ಅವ್ರ ಉಸಾಬರಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಕಿಡಿ
Advertisement
Advertisement
ಆಂತರಿಕವಾಗಿ, ಹಿರಿಯರು ಸೂಚನೆ ಕೊಡುತ್ತಾರೆ. ಬರಬೇಕಾದರೆ ಕೆಲವರು ಕನ್ನಡ ಬಾವುಟ ಹಿಡಿದು ಬಂದಿದ್ದರು. ಎಲ್ಲ ಸಂಘಟನೆಯ ಬಾವುಟಗಳು ಇದ್ದವು. ಈಗಲೂ ಜೆಡಿಎಸ್ ಶಾಸಕರು ಬಂದಿದ್ದರು. ಅವರನ್ನ ಬರಬೇಡಿ ಅಂತ ಹೇಳೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯರ ಮೇಲೆ ನಂಬಿಕೆ ಇದೆ, ಅವ್ರು ಆ ರೀತಿ ಹೇಳಿರಲ್ಲ: ಡಿಕೆಶಿ ತಿರುಗೇಟು
Advertisement
ಉತ್ತರ ಕರ್ನಾಟಕ ಪ್ರವಾಸ ವಿಚಾರದ ಬಗ್ಗೆ ಇದೇ ವೇಳೆ ಪ್ರತಿಕ್ರಿಯಿಸಿದ ಡಿಕೆಶಿ, ಉ.ಕರ್ನಾಟಕ ಪ್ರವಾಸ ಹೋಗುತ್ತೇನೆ. ಮೊದಲಿಗೆ ವಕೀಲರನ್ನ ಭೇಟಿ ಮಾಡುತ್ತೇನೆ. ವಕೀಲರರೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.