ಚಿಕ್ಕೋಡಿ: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಯಡಿಯೂರಪ್ಪ (BS Yediyurappa) ಅವರಿಂದ ದುಡ್ಡು ಪಡೆದು, ಇಬ್ಬರು ಕಾಂಗ್ರೆಸ್ ಶಾಸಕರಿಂದ ಬಿಜೆಪಿಗೆ (BJP) ವೋಟು ಹಾಕಿಸಿದ್ದಾರೆ. ಅವರೇ ಬಿಜೆಪಿಯ `ಬಿ’ ಟೀಂ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ತಾಯಿ, ಮಗಳ ವ್ಯತ್ಯಾಸ ಗೊತ್ತಿಲ್ಲದವರು ಹಿಂದೂ ಧರ್ಮದ ಬಗ್ಗೆ ಮಾತಾಡ್ತಾರೆ: ಭೀಮಾಶಂಕರ್
Advertisement
Advertisement
ಹೆಚ್.ಡಿ ಕುಮಾರಸ್ಚಾಮಿ (HD Kumaraswamy) ಸಿಎಂ ಆಗಿದ್ದಾಗ ಸರ್ಕಾರ ಬೀಳಿಸಿದವರು ಸಿದ್ದರಾಮಯ್ಯ. ಯಡಿಯೂರಪ್ಪ ಅವರ ಜೊತೆ ಕೈ ಮಿಲಾಯಿಸಿ ಮುಂಬೈಗೆ ಕರೆದುಕೊಂಡು ಹೋಗಿ ಮಂಚದ ಮೇಲೆ ಕೂರಿಸಿ 25 ಕೋಟಿ ರೂ. ಕೊಟ್ಟು ದೇಣಿಗೆ ಕೊಟ್ಟಿಲ್ಲ ಎಂದು ಹೇಳಿದ್ದರು. ಇದೆಲ್ಲಾ ಮಾಡಿ ಯಡಿಯೂರಪ್ಪ ಉಳಿದಿದ್ದಾನಾ? ಉಳಿದಿಲ್ಲ. ಹಾಲು ಕುಡಿದ ಮಕ್ಕಳೇ ಬದುಕಲ್ಲ ವಿಷ ಕುಡಿದು ಬದುಕುತ್ತಾವಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಗೆದ್ದಿದ್ದ 24ರ ಹರೆಯದ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ನಿಧನ
Advertisement
Advertisement
ಜೆಡಿಎಸ್ (JDS) ಅಭ್ಯರ್ಥಿಗಳು ಇದ್ದಾರಾ ಇಲ್ವೋ ಅನ್ನೋದು 2023ರ ಚುನಾವಣೆಯಲ್ಲಿ (Election 2023) ಗೊತ್ತಾಗುತ್ತೆ. `ಸಾಬ್ರು ಬಂದ್ರೆ ಕ್ಯಾರೆ ಕಾಸೀಮ ಅಂದರೆ ಹುವಾ ಸಾಬ್ ಕಾಮ್’ ಅನ್ನುವ ಹಾಗೆ ಆಗುತ್ತೆ. ಜೆಡಿಎಸ್ ಪಕ್ಷಕ್ಕೆ ಬಿಜೆಪಿ `ಬಿ’ ಟೀಮ್ ಅನ್ನೋರು ರಾಜ್ಯಸಭಾ ಚುನಾವಣೆಯಲ್ಲಿ ಏನು ಮಾಡಿದ್ರು? ಯಡಿಯೂರಪ್ಪ ಹತ್ತಿರ ದುಡ್ಡು ಪಡೆದು ಇಬ್ಬರು ಕಾಂಗ್ರೆಸ್ ಶಾಸಕರನ್ನ ತೆಗೆದುಕೊಂಡು ಬಿಜೆಪಿಗೆ ಸಿದ್ದರಾಮಯ್ಯ ವೋಟು ಹಾಕಿಸಿಲ್ವಾ? ಬಿಜೆಪಿ `ಬಿ’ ಟೀಂ ಯಾರೆಂದು ನೀವೇ ಹೇಳ್ಬೇಕು. ಸಿದ್ದರಾಮಯ್ಯ ಅವರನ್ನ ನೋಡಿದ್ರೆ ಅಯೋ ಅನಿಸುತ್ತೆ ಬಾದಾಮಿ ಬಿಟ್ಟು ಕೋಲಾರಕ್ಕೆ ಹೋದ್ರು. ಬಾದಾಮಿಯಲ್ಲಿ ನಾನೇ ಗೆಲ್ಲಿಸಿದ್ದೆ, ಆದರೆ ಗೆಲ್ಲಿಸಿದ ಸಾಬ್ರನ್ನೇ ಸಿದ್ದರಾಮಯ್ಯ ಕೈಬಿಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿವಿಧ ಪಕ್ಷದ ನಾಯಕರು ನನ್ನ ಜೊತೆ ಸ್ನೇಹಿತರಿದ್ದಾರೆ. ಅನೇಕ ಜನ ಆರ್‌ಎಸ್‌ಎಸ್ (RSS) ಮುಖಂಡರು ನಮ್ಮ ಮನೆಗೆ ಬಿರಿಯಾನಿ ತಿನ್ನೋಕೆ ಬರ್ತಿದ್ರು. ಜೆಡಿಎಸ್ ಪಕ್ಷದಲ್ಲಿ ಯಾರಿಗೂ ಬಲವಂತವಾಗಿ ಬಾ ಅಂತ ಕರೀತಿಲ್ಲ. 2023ರ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದು ನಿಶ್ಚಿತ ಎಂದು ದರ್ಗಾ ಎದುರು ಇಬ್ರಾಹಿಂ ಶಪಥ ಮಾಡಿದ್ದಾರೆ.