ಕೊಪ್ಪಳ: ಮೀಸಲಾತಿಗೆ (Reservation) ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ. ಸಿದ್ದರಾಮಯ್ಯ (Siddaramaiah) ಬಡತನ ನಿರ್ಮೂಲನೆ ಮಾಡಲು ಏನೂ ಮಾಡಿಲ್ಲ ಎಂದು ಹೋರಾಟಗಾರ, ನಟ ಚೇತನ್ ಅಹಿಂಸಾ (Chetan Ahimsa) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದ (Koppal) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೀಸಲಾತಿಗೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ. ಸಿದ್ದರಾಮಯ್ಯ ಬಡತನ ನಿರ್ಮೂಲನೆ ಮಾಡಲು ಏನೂ ಮಾಡಿಲ್ಲ. ಸಿದ್ದರಾಮಯ್ಯ ಆರ್ಥಿಕ ಮರು ಹಂಚಿಕೆ ಮಾಡುವ ಉದ್ದೇಶ ಇಲ್ಲ. ಆದ್ರೆ ಅವರು ಹಿಂದುತ್ವ ವಿರೋಧ ಮಾಡುವುದು ಮಾತ್ರ ಒಪ್ಪಿತ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಎಂಟ್ರಿಯಿಂದ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಕಲಹ?
Advertisement
Advertisement
ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಸಮಾನ ತಪ್ಪು ಮಾಡಿದ್ದಾರೆ. ಎರಡೂ ಪಕ್ಷಗಳು ಮೀಸಲಾತಿ ಸಮಾನವಾಗಿ ಹಂಚಿಕೆ ಮಾಡಿಲ್ಲ. ಸಿದ್ದರಾಮಯ್ಯ ಅವರ ಉದ್ದೇಶವೇನಿದ್ದರೂ ಬಿಜೆಪಿ (BJP) ಸೋಲಿಸೋದು ಮಾತ್ರ. ಕಾಂಗ್ರೆಸ್‌ನ (Congress) ಉದ್ದೇಶ ಅಧಿಕಾರ ಹಿಡಿಯುವುದು ಮಾತ್ರ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ನೋರಾ ಫತೇಹಿ ಜೊತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ಪಾಕಿಸ್ತಾನ ನಟಿಯ ಜೊತೆ ಆರ್ಯನ್ ಖಾನ್ ಪಾರ್ಟಿ
Advertisement
Advertisement
ಬೆಳಗಾವಿ ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, `ಸಾವರ್ಕರ್ ಕಾಂಟ್ರವರ್ಸಿ ವ್ಯಕ್ತಿ. ಅವರ ಫೋಟೊ ಹಾಕಬಾರದು’ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಸಾವರ್ಕರ್ ಕಾಂಟ್ರವರ್ಸಿ ವ್ಯಕ್ತಿ. ಆದ್ರೆ ನಮ್ಮ ಕಣ್ಣಲ್ಲಿ ಜಾತಿ ವ್ಯವಸ್ಥೆ ಮುಂದುವರೆಸಿದ ಗಾಂಧಿ ಕೂಡ ಕಾಂಟ್ರವರ್ಸಿ. ನಮ್ಮ ಪ್ರಕಾರ ಗಾಂಧಿ, ಸಾವರ್ಕರ್ ಜೊತೆಗೆ ಪೆರಿಯಾರ್ ಫೋಟೊ ಕೂಡ ಹಾಕಿ. ಇಲ್ಲವಾದ್ರೆ ಗಾಂಧಿ ಸೇರಿರುವ ಎಲ್ಲರ ಫೋಟೊ ತೆಗೆದು ಹಾಕಿ. ಆ ನಿಟ್ಟಿನಲ್ಲಿ ನೋಡುವುದಾದ್ರೆ ನನಗೆ ಆಯಾ ಕಾಲಕ್ಕೆ ಆ ಚೌಕಟ್ಟಿಕ್ಕೆ ತಕ್ಕಂತೆ ಬಸವಣ್ಣ, ಅಂಬೇಡ್ಕರ್, ಪರಿಯಾರ್ ಎಲ್ಲರೂ ನನಗೆ ಸ್ಫೂರ್ತಿ ಎಂದು ತಿಳಿಸಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) January 7, 2023
ಕೊಪ್ಪಳ ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ಮನೆ ಸಿಕ್ಕಿಲ್ಲ. ದೇವದಾಸಿ ಪದ್ಧತಿ ಜೀವಂತವಾಗಿದ್ದು, ದೇವದಾಸಿ ತಾಯಂದಿರಿಗೆ ನ್ಯಾಯ ಸಿಕ್ಕಿಲ್ಲ. ಅಲೆಮಾರಿ ಸಮುದಾಯಗಳು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ಅವರು ಗುಡಿಸಲು ಹಾಕಿಕೊಂಡಿರೋ ಜಾಗದಲ್ಲಿ ಬೀದಿ ದೀಪ ಕೂಡ ಇಲ್ಲ. ಡಿಜಿಟಲ್ ಇಂಡಿಯಾ, ಬುಲೆಟ್ ರೈಲು ಬಗ್ಗೆ ಮಾತನಾಡುವ ಸರ್ಕಾರ ಇವರ ಕಡೆಯೂ ನೋಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k