ರಾಮನಗರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು (Siddaramaiah) ಮಂಡ್ಯದಲ್ಲಿ ನಿಂತು ಕುಮಾರಸ್ವಾಮಿ (HD Kumaraswamy) ಗೆಲ್ಲಲ್ಲ ಅಂತ ಭಾಷಣ ಮಾಡಿಹೋಗಿದ್ದರು. ಆದರೀಗ ಕುಮಾರಸ್ವಾಮಿ ಅವರು ಗೆದ್ದು ಕೇಂದ್ರದಲ್ಲಿ ಉನ್ನತ ಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಬಹುಶಃ ಸಿದ್ದರಾಮಯ್ಯನವರ ಬಾಯಲ್ಲಿ ಮಚ್ಚೆ ಇದೆ ಅನ್ನಿಸುತ್ತೆ. ಅವರು ಆಗಲ್ಲ ಅಂದರೆ ಅದು ಆಗುತ್ತೆ. ಮುಂದೆ ಕುಮಾರಸ್ವಾಮಿ ಅವರು ಕೂಡಾ ಸಿಎಂ ಆಗಬಹುದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಲೇವಡಿ ಮಾಡಿದರು.
ಕುಮಾರಸ್ವಾಮಿ ಮತ್ತೆ ಅಧಿಕಾರಕ್ಕೆ ಬರೋದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಲೇವಡಿಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: Godhra NEET Case | ಅನ್ಯರಾಜ್ಯಗಳ ವಿದ್ಯಾರ್ಥಿಗಳಿಗೆ ಗುಜುರಾತಿಯಲ್ಲಿ ನೀಟ್ ಬರೆಯಲು ಸೂಚನೆ – ಸಿಬಿಐ ಮಹತ್ವದ ಮಾಹಿತಿ
ಸಿದ್ದರಾಮಯ್ಯನವರ ಹಾಸ್ಯಾಸ್ಪದ ಹೇಳಿಕೆ ಗಮನಿಸಿದ್ದೇನೆ. 2018ರಲ್ಲೂ ಇದೇ ರೀತಿ ಕುಮಾರಸ್ವಾಮಿ ಅವರಪ್ಪರಾಣೆ ಸಿಎಂ ಆಗಲ್ಲ ಎಂದು ಹೇಳಿದ್ದರು. ಆದರೆ ಚುನಾವಣಾ ಫಲಿತಾಂಶ ಬಂದ ನಂತರ ಕಾಂಗ್ರೆಸ್‌ನ ಮಹಾ ನಾಯಕರೆಲ್ಲರೂ ಕುಮಾರಸ್ವಾಮಿ ಮನೆ ಬಾಗಿಲಿಗೆ ಬಂದು ನಿಂತಿದ್ದರು ಎಂದು ಟೀಕಿಸಿದರು. ಇದನ್ನೂ ಓದಿ: ಆರ್ಕಿಟೆಕ್ಚರ್ ಕೋರ್ಸ್ ಅರ್ಹತಾ ಅಂಕ ಶೇ.45ಕ್ಕೆ ಇಳಿಕೆ – ಅರ್ಜಿ ಸಲ್ಲಿಸಲು ಜು.13 ರವರೆಗೆ ಅವಕಾಶ: ಕೆಇಎ
ಇನ್ನೂ ಹಾಸನದ ಗೂಂಡಾ ವರ್ತನೆ ರಾಮನಗರ ಜಿಲ್ಲೆಯಲ್ಲಿ ನಡೆಯಲ್ಲ ಎಂಬ ರಾಮನಗರ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಮಾತನಾಡಿದ ಅವರು, ಗೂಂಡಾ ವರ್ತನೆ ಅನ್ನೋದು ಕಾಂಗ್ರೆಸ್‌ನ ಸಂಸ್ಕೃತಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದರು. ಎಲ್ಲೂ ಕೂಡ ಕುಮಾರಸ್ವಾಮಿ ಹಸ್ತಕ್ಷೇಪ ಮಾಡದೇ ಆಡಳಿತ ಮಾಡಿದ್ದಾರೆ. ಆದರೆ ಗೂಂಡಾ ವರ್ತನೆ ಸಂಸ್ಕೃತಿ ಬಂದಿದ್ದು ಇದೇ ಜಿಲ್ಲೆಯ ಕಾಂಗ್ರೆಸ್ ನಾಯಕರಿಂದ. ಅವರು ಏನೆಲ್ಲ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: 2028ರ ಚುನಾವಣೆಗೆ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾಗಿ ಕೆಲಸ ಮಾಡಿ: ಡಿಕೆಶಿ